ಐಗೂರು, ಅ. ೩: ವಿನಾಯಕ ಸೇವಾ ಸಮಿತಿಯ ಆಶ್ರಯದಲ್ಲಿ ಮಾದಾಪುರದ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಅದ್ಧೂರಿಯಾಗಿ ನಡೆಯಿತು.

ವಿದ್ಯುತ್ ಅಲಂಕೃತ ಭವ್ಯ ಮಂಟಪದೊAದಿಗೆ ಡಿ.ಜೆ. ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಹೊರಟು ಮಾದಾಪುರ ಹೊಳೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ಮಾದಾಪುರದ ಮುಸಲ್ಮಾನ ಬಾಂಧವರು ಸಿಹಿಯನ್ನು ಹಂಚಿ ಸೌಹಾರ್ದತೆಯನ್ನು ಮೆರೆದರು. ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಉಪಸ್ಥಿತರಿದ್ದು, ಅಧ್ಯಕ್ಷ ಮನು ಪೂಜಾರಿ ಕಾರೆಕಾಡು, ಕಾರ್ಯದರ್ಶಿ ಪ್ರವೀಣ, ದೇವಸ್ಥಾನ ಸಮಿತಿ ಪ್ರಮುಖರು, ಮಾದಾಪುರ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.