*ಗೋಣಿಕೊಪ್ಪ, ಅ. ೩: ಗೋಣಿಕೊಪ್ಪ ದಸರಾ ಪ್ರಯುಕ್ತ ಸೌತ್ ಕೂರ್ಗ್ ಫಾಮರ‍್ಸ್ ಅಸೋಸಿಯೇಷನ್ ಹಾಗೂ ಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ಮೂರು ದಿನ ಆಟೋಕ್ರಾಸ್-೨೦೨೩ ಆಯೋಜಿಸಲಾಗಿದೆ ಎಂದು ಸೌತ್ ಕೂರ್ಗ್ ಫಾಮರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಚೊಟ್ಟೆಯಂಡಮಾಡ ಡಿ. ಮಾದಪ್ಪ ತಿಳಿಸಿದ್ದಾರೆ. ಹರಿಶ್ಚಂದ್ರಪುರದ ಮನೆಯಪಂಡ ಯಾರ್ಡ್ನಲ್ಲಿ ತಾ. ೭, ೮ ಮತ್ತು ೧೫ ರಂದು ಆಯೋಜಿಸಲಾಗಿದ್ದು, ರಾಷ್ಟçಮಟ್ಟದ ರ‍್ಯಾಲಿಪಟುಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕುಚಕ್ರ ವಿಭಾಗದಲ್ಲಿ ೩ ಕ್ಲಾಸ್‌ನಲ್ಲಿ ವೇಗದ ರ‍್ಯಾಲಿಪಟುವಿಗೆ ೧ ಲಕ್ಷ ರೂ. ಬಹುಮಾನ ನೀಡಲಾಗುವುದು. ಚಾಂಪಿಯನ್ ರ‍್ಯಾಲಿಪಟುವಿಗೆ ೨೫ ಸಾವಿರ ನಗದು ಬಹುಮಾನ, ಒಟ್ಟು ೨ ಲಕ್ಷ ರೂ. ಬಹುಮಾನ ನೀಡಲಾಗುವುದು. ಕೂರ್ಗ್ ಓಪನ್, ೧೬೦೦ ಸಿಸಿ, ರೋಲ್‌ಕೇಜ್ ಕ್ಲಾಸ್ ವಿಜೇತರಿಗೆ ಜೆಕೆ ಟರ‍್ಸ್ ವತಿಯಿಂದ ಟಯರ್ ಕೊಡುಗೆ ಇದೆ. ಈ ಬಾರಿ ಹೆಚ್ಚಿನ ರ‍್ಯಾಲಿಪಟುಗಳ ನಿರೀಕ್ಷೆ ಹೊಂದಿದ್ದೇವೆ ಎಂದು ತಿಳಿಸಿದರು.

ನಾಲ್ಕು ಚಕ್ರ ವಿಭಾಗದ ಸ್ಪರ್ಧೆ ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ನಿಯಮದಂತೆ ತಾ. ೭ ಮತ್ತು ೮ರಂದು ನಡೆಯಲಿದೆ. ೭ ರಂದು ಕೊಡಗು ಜಿಲ್ಲೆಯ ರ‍್ಯಾಲಿಪಟುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ೮೦೦ ಸಿಸಿ- ೧೧೦೦ ಸಿಸಿ ಸ್ಪರ್ಧೆ ನಡೆಯಲಿದೆ.

ಕೂರ್ಗ್ ನೋವಿಸ್, ಕೂರ್ಗ್ ಓಪನ್, ಡೀಸೆಲ್‌ಕ್ಲಾಸ್, ಲೇಡೀಸ್‌ಕ್ಲಾಸ್ ಸ್ಪರ್ಧೆ ನಡೆಯಲಿದೆ. ತಾ. ೮ ರಂದು ಮುಕ್ತ ಸ್ಪರ್ಧೆ ನಡೆಯಲಿದೆ. ರಾಷ್ಟç ಮಟ್ಟದ ರ‍್ಯಾಲಿಪಟುಗಳ ಸಂಗಮ ಇರಲಿದೆ. ಜಿಪ್ಸಿ ಓಪನ್‌ಕ್ಲಾಸ್, ಎಸ್‌ಯುವಿ ಕ್ಲಾಸ್, ಎಸ್ಟೀಮ್ ಕ್ಲಾಸ್, ೧೪೦೦, ೧೬೦೦ ಸಿಸಿ, ಇಂಡಿಯನ್ ಓಪನ್ ಕ್ಲಾಸ್, ಅನ್‌ರಿಸ್ಟಿçಕ್ಟೆಡ್ ಓಪನ್, ರೇಸ್ ಫಾರ್‌ರೋಲ್ ಕೇಜ್‌ಕರ‍್ಸ್, ಟ್ಯೂರ‍್ಸ್ ಕ್ಲಾಸ್ ಸ್ಪರ್ಧೆ ನಡೆಯಲಿದೆ. ದ್ವಿಚಕ್ರ ಸ್ಪರ್ಧೆಯು ತಾ. ೧೫ ರಂದು ದ್ವಿಚಕ್ರ ರೋಚಕತೆ ಕಣ್ತುಂಬಿಕೊಳ್ಳಬಹುದಾಗಿದೆ. ಕೂರ್ಗ್ ನೋವಿಸ್‌ಕ್ಲಾಸ್, ಕೂರ್ಗ್ಓಪನ್, ಬುಲ್ಲೆಟ್ ಓಪನ್, ನೋವಿಸ್‌ಕ್ಲಾಸ್ ಎನ್-೧, ನೋವಿಸ್‌ಕ್ಲಾಸ್ ಎನ್-೨, ಕಿಡ್ಸ್ಕ್ಲಾಸ್ (೧೫ ವಯೋಮಿತಿ ಒಳಗೆ), ಓಪನ್ ಕ್ಲಾಸ್, ಫರ‍್ಸ್ ಸ್ಟೊçÃಕ್ ಓಪನ್, ಕ್ಲಬ್‌ಓಪನ್, ನ್ಯೂಬಾಯ್ಸ್ ಓಪನ್, ಇಂಡಿಯನ್ ಓಪನ್, ಫಾರಿನ್ ಓಪನ್ ಕ್ಲಾಸ್ ಮೋಟೋ-೨ ಸ್ಪರ್ಧೆ ಇರಲಿದೆ. ಹೆಚ್ಚಿನ ಮಾಹಿತಿಗೆ ೯೮೮೦೯೭೩೨೫೫, ೯೪೪೮೪೪೮೩೯೯ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಖಜಾಂಚಿ ಪೆಮ್ಮಂಡ ಭರತ್, ನಿರ್ದೇಶಕ ನೀಲ್ ಗಣಪತಿ ಇದ್ದರು.