ಗೋಣಿಕೊಪ್ಪ, ಅ. ೩: ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ತಾ. ೧೭ ರಂದು ಕಾವೇರಿ ಕಲಾ ವೇದಿಕೆಯಲ್ಲಿ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ ತಿಳಿಸಿದ್ದಾರೆ.

ಜಿಲ್ಲಾಮಟ್ಟದ ಸೈಕಲ್ ರೇಸ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಬೈಕ್ ಸ್ಟಂಟ್ ಪ್ರದರ್ಶನ, ಡಿ.ಜೆ. ನೈಟ್ಸ್ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೧೪, ೧೯ ವಯೋಮಿತಿ, ಮುಕ್ತ, ಮಹಿಳಾ ವಿಭಾಗಕ್ಕೆ ಸೈಕಲ್ ರೇಸ್ ನಡೆಯಲಿದೆ. ಬೆ. ೯ ಗಂಟೆಗೆ ಕಾವೇರಿ ಕಲಾ ವೇದಿಕೆಯಿಂದ ಹಾತೂರು, ಕುಂದ, ಪೊನ್ನಂಪೇಟೆ, ಜೋಡುಬೀಟಿ ಮಾರ್ಗದ ಮೂಲಕ ಸ್ಪರ್ಧೆ ನಡೆಯಲಿದ್ದು, ಕಿರಿಯರಿಗೆ ಕುಂದ ರಸ್ತೆಯ ಡಿಕ್ಸ್ನ್ಸ್ ಕಾಫಿ ಮಿಲ್‌ವರೆಗೆ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಬೈಕ್ ಸ್ಟಂಟ್ ಸಂಜೆ ೩ ಗಂಟೆಗೆ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದೆ. ರಾಜ್ಯದ ಸ್ಟಂಟ್ ತಂಡ ಪ್ರದರ್ಶನ ನೀಡಲಿದೆ.

ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸಂಜೆ ೬ ಗಂಟೆಯಿAದ ನಡೆಯಲಿದ್ದು, ಗುಂಪು ನೃತ್ಯದಲ್ಲಿ ಕನಿಷ್ಟ ೬ ಕಲಾವಿದರು ಪಾಲ್ಗೊಳ್ಳಬಹುದಾಗಿದೆ. ರಾತ್ರಿ ೮ ಗಂಟೆಗೆ ಮುರುವಂಡ ಪ್ರಶ್ವಿನ್ ಸೋಮಣ್ಣ ತಂಡದಿAದ ಕಾವೇರಿ ಕಲಾ ವೇದಿಕೆಯಲ್ಲಿ ಡಿ.ಜೆ. ನಡೆಯಲಿದೆ. ಸೈಕಲ್ ಸ್ಪರ್ಧಿಗಳು ೯೪೪೯೨೬೦೦೫೩, ನೃತ್ಯ ಸ್ಪರ್ಧೆಗೆ ೭೭೬೦೮೦೩೭೮೩, ೮೦೮೮೯೭೮೮೦೮ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಗೋಷ್ಠಿಯಲ್ಲಿ ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷ ಪಿ.ಎಸ್. ಶರತ್‌ಕಾಂತ್, ಸಾಂಸ್ಕೃತಿಕ ಸಮಿತಿ ಸದಸ್ಯ ರಮೇಶ್ ಇದ್ದರು.