ಗೋಣಿಕೊಪ್ಪ, ಅ. ೩: ಶಿವಾಜಿ ಯುವ ಸೇನೆ ಆಶ್ರಯದಲ್ಲಿ ದಸರಾ ಪ್ರಯುಕ್ತ ದ್ವಿತೀಯ ವರ್ಷದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಗೋಣಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಅಣ್ಣಪ್ಪ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. ೧೫ ಹಾಗೂ ೧೬ ರಂದು ಪಂದ್ಯಾಟ ನಡೆಯಲಿದೆ. ಪ್ರಥಮ ಬಹುಮಾನ ರೂ. ೪೪,೪೪೪, ದ್ವಿತೀಯ ರೂ. ೨೨,೨೨೨ ಮತ್ತು ತೃತೀಯ ಬಹುಮಾನ ರೂ. ೫೫೫೫ ಹಾಗೂ ಪಾರಿತೋಷಕ ನೀಡಲಾಗುವುದು.

ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ತಂಡಗಳು ತಾ. ೧೨ರೊಳಗೆ ಹೆಸರು ನೋಂದಾಯಿಸಲು ೯೩೮೦೭೩೪೯೫೫, ೯೯೪೫೨೬೫೩೮೩ ಸಂಪರ್ಕಿಸಲು ಮನವಿ ಮಾಡಿದರು. ಪಂದ್ಯಾಟದ ಸಂದರ್ಭ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ವಿನೋದ್, ಅಕ್ಷಯ್ ಸಂಚಾಲಕ ಇದ್ದರು.