ಶ್ರೀಮಂಗಲ, ಅ. ೩: ಪೊನ್ನಂಪೇಟೆ ತಾಲೂಕು ಕಾನೂರು-ಕೋತೂರು ಮಹಿಳಾ ಮಂಡಳದಲ್ಲಿ ಕೈಲ್ ಪೊಳ್ದ್ ಸಂತೋಷ ಕೂಟ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದೀರ ಶಾರದಾ ನಂಜಪ್ಪ ಅವರು ಮಂಡಳದಿAದ ಸನ್ಮಾನ ಸ್ವೀಕರಿಸಿ ಮಾತನಾಡಿ, ಆಕಾಶವಾಣಿಯ ಕಾರ್ಯವೈಖರಿ, ಕೊಡಗಿನ ಮಹತ್ವ ಮತ್ತು ಮಹಿಳೆಯರು ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಡಳದ ಅಧ್ಯಕ್ಷೆ ಚೊಟ್ಟೆಕ್'ಮಾಡ ಮಾಯಮ್ಮ ಬೋಪಯ್ಯ ಅವರು ಮಾತನಾಡಿ, ಕೈಲ್ ಪೊಳ್ದ್ ಹಬ್ಬದ ಮಹತ್ವ ಮತ್ತು ವಿಶೇಷತೆಯನ್ನು ತಿಳಿಸಿದರು.

ರುಕ್ಮಿಣಿ ನಾಣಯ್ಯನವರು ಕಾರ್ಯಕ್ರಮ ನಿರೂಪಿಸಿದರು, ಕೃತಿಕಾ ಮತ್ತು ಪೂಜಾ ತಂಡದಿAದ ನೃತ್ಯ ಪ್ರದರ್ಶನ ಹಾಗೂ ವನಿತಾ -ರೇಷ್ಮಾ ತಂಡದಿAದ ನಗೆ ಪ್ರಹಸನ, ನೀತು-ಅನಿತಾ ತಂಡದ ವೇದಿಕೆ ನಡಿಗೆ ಎಲ್ಲರ ಗಮನ ಸೆಳೆಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ನವೀನಾ ಮುತ್ತಪ್ಪ ಹಾಜರಿದ್ದರು.