ಮಡಿಕೇರಿ, ಅ.೩ : ಮಡಿಕೇರಿ ೬೬/೧೧ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಓಂಕಾರೇಶ್ವರ ಫೀಡರ್ನಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯುತ್ ಮಾರ್ಗದಲ್ಲಿ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ತಾ. ೪ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಗೌಡ ಸಮಾಜ, ಕನ್ನಂಡಬಾಣೆ, ವೈವಾಸ್, ಗಣಪತಿ ಬೀದಿ, ಓಂಕಾರೇಶ್ವರ ದೇವಸ್ಥಾನ ಸುತ್ತಮುತ್ತ, ಬ್ರಾಹ್ಮಣಬೀದಿ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಗೆಯೇ ಗದ್ದಿಗೆ ಫೀಡರ್ನಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೫ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವುದು.
ಆದ್ದರಿಂದ ಎ.ವಿ.ಶಾಲೆ, ಆಜಾದ್ ನಗರ, ಸಂಪಿಗೆಕಟ್ಟೆ, ತ್ಯಾಗರಾಜ ಕಾಲೋನಿ, ಮಾರುಕಟ್ಟೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಕಾವೇರಿ ಬಡಾವಣೆ, ಭಗವತಿನಗರ, ಮಲ್ಲಿಕಾರ್ಜುನ ನಗರ, ಮುತ್ತಪ್ಪ ದೇವಸ್ಥಾನ, ಗಾಳಿಬೀಡು, ಕಾಲೂರು, ಹೆಬ್ಬೆಟ್ಟಗೇರಿ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.