ಮಡಿಕೇರಿ, ಅ. ೨: ಕೊಡವ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿ ಯೇಷನ್ (ಕೆ.ಎಂ.ಎ.)ನ ೨೦೨೩-೨೬ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಸಂಸ್ಥೆಗೆ ಕಳೆದ ೨೩ ವರ್ಷಗಳಿಂದ ನೇತೃತ್ವ ನೀಡುತ್ತಿರುವ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ವೀರಾಜಪೇಟೆಯಲ್ಲಿ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಮುಂದಿನ ಅವಧಿಯ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ ಮೂರ್ನಾಡಿನ ವೈದ್ಯರಾದ ಡಾ. ಜೋಯಿಪೆರ ಎ.ಕುಂಜ್ಹಬ್ದುಲ್ಲಾ, ಉಪಾಧ್ಯಕ್ಷರಾಗಿ ಕಾಟ್ರಕೊಲ್ಲಿಯ ಅಕ್ಕಳತಂಡ ಎಸ್. ಮೊಯ್ದು ಪ್ರಧಾನ ಕಾರ್ಯದರ್ಶಿಯಾಗಿ ಈತಲತಂಡ ರಫೀಕ್ ತೂಚಮಕೇರಿ ಅವರನ್ನು ಪುನರಾಯ್ಕೆ ಮಾಡಲಾಯಿತು.
ಉಳಿದಂತೆ ಆಡಳಿತ ಮಂಡಳಿಯ (ಕಾರ್ಯಕಾರಿ ಸಮಿತಿ) ಹಿರಿಯ ನಿರ್ದೇಶಕರಾಗಿ ಆಲೀರ ಎ. ಅಹಮದ್ ಹಾಜಿ (ಮಾಪಿಳೆತೋಡು), ನಿರ್ದೇಶಕರುಗಳಾಗಿ ಹರಿಶ್ಚಂದ್ರ ಎ. ಹಂಸ (ಕೊಟ್ಟಮುಡಿ), ಚಿಮ್ಮಿಚ್ಚಿರ ಕೆ.ಇಬ್ರಾಹಿಂ (ಹಳ್ಳಿಗಟ್ಟು), ಕರತೋರೆರ ಕೆ. ಮುಸ್ತಫ (ಅಂಬಟ್ಟಿ), ಪುದಿಯತ್ತಂಡ ಹೆಚ್. ಸಂಸುದ್ದೀನ್(ಚಾಮಿಯಾಲ), ಮೀತಲತಂಡ ಎಂ. ಇಸ್ಮಾಯಿಲ್ (ಗುಂಡಿಕೆರೆ), ಪುದಿಯಾಣೆರ ಎಂ. ಹನೀಫ್ (ಚಾಮಿಯಾಲ), ಕುವೆಂಡ ವೈ. ಆಲಿ (ಗುಂಡಿಕೆರೆ), ಪೊಯಕೆರ ಎಸ್. ಮೊಹಮ್ಮದ್ ರಫೀಕ್ (ಐಮಂಗಲ), ಮಂಡೇAಡ ಎ. ಮೊಯ್ದು (ಗುಂಡಿಕೆರೆ), ಕುಪ್ಪೋಡಂಡ ಎ. ಅಬ್ದುಲ್ ರಶೀದ್ (ಎಡಪಾಲ), ಪುಡಿಯಂಡ ಹನೀಫ್ (ದೇವಣಗೇರಿ) ಅವರುಗಳನ್ನು ಮಹಾಸಭೆಯಲ್ಲಿ ಪುನರಾಯ್ಕೆಗೊಂಡರು.
ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳಾಗಿ ದುದ್ದಿಯಂಡ ಹೆಚ್. ಮೊಯ್ದು(ನಲ್ವತ್ತೋಕ್ಲು), ಆಲೀರ ಹೆಚ್. ಅಬ್ದುಲ್ ಲತೀಫ್ (ವೀರಾಜಪೇಟೆ), ಕೋಳುಮಂಡ ಎಸ್. ರಫೀಕ್ (ಐಮಂಗಲ), ಕುಪ್ಪಂದಿರ ಯೂಸುಫ್ ಹಾಜಿ (ಕೊಂಡAಗೇರಿ), ಆಲೀರ ಎಂ. ರಶೀದ್ (ಕಾಟ್ರಕೊಲ್ಲಿ), ಕತ್ತಣಿರ ಎಚ್. ಅಬ್ದುಲ್ ರಹಿಮಾನ್ (ಅಂದಾಯಿ)(ಕೊAಡAಗೇರಿ), ಕೆಂಗೋಟAಡ ಸೂಫಿ (ವೀರಾಜಪೇಟೆ), ಪುಡಿಯಂಡ ಈ. ಸಾದುಲಿ (ಕೊಂಡAಗೇರಿ), ಕರತೋರೆರ ಎಸ್. ಶರ್ಫುದ್ದೀನ್ (ಅಂಬಟ್ಟಿ), ಪರವಂಡ ಎಂ. ಸಿರಾಜುದ್ದೀನ್ (ಚೆರಿಯಪರಂಬು) ಇವರನ್ನು ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
ಉಳಿದ ಕಂಡAಗಾಲ, ಕಿಕ್ಕರೆ, ಚಿಟ್ಟಡೆ, ಕುಂಜಿಲ, ಕೊಳಕೇರಿ, ಎಮ್ಮೆಮಾಡು, ಪಡಿಯಾಣಿ, ಆಜಾದ್ ನಗರ (ಮೂಲೆ ಕೊಟ್ಟಮುಡಿ) ಪ್ರದೇಶಗಳಿಂದ ನಿರ್ದೇಶಕರನ್ನು ಸೇರಿದಂತೆ ಕೊಡವ ಮುಸ್ಲಿಮರು ನೆಲೆಸಿರುವ ಆಯಾ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ಆಡಳಿತ ಮಂಡಳಿಗೆ ಹೆಚ್ಚುವರಿಯಾಗಿ ಪದಾಧಿಕಾರಿಗಳನ್ನು ನೇಮಕಗೊಳಿಸುವ ಪೂರ್ಣ ಅಧಿಕಾರವನ್ನು ಮಹಾಸಭೆ ನೂತನ ಕಾರ್ಯಕಾರಿ ಸಮಿತಿಗೆ ವಹಿಸಿತು. ಅಲ್ಲದೆ ಆಯ್ಕೆಗೊಂಡ ನಿರ್ದೇಶಕರ ಪೈಕಿ ಆಡಳಿತ ಮಂಡಳಿಯ ಕೋಶಾಧಿಕಾರಿ, ಜಂಟಿ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಳಿಸುವ ಅಧಿಕಾರವನ್ನು ಸಹ ಮಹಾಸಭೆ ಇದೇ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಗೆ ನೀಡಿತು.