ವೀರಾಜಪೇಟೆ, ಅ. ೨: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳಿಗೆ ದಿನಾಂಕ ನಿಗದಿಗೊಳಿಸಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಪ್ರಮೋದ್ ತಿಳಿಸಿದ್ದಾರೆ.
ಕೊಟ್ಟೋಳಿ ವಾರ್ಡ್ ಸಭೆ ೪ ರಂದು ಕೊಟ್ಟೋಳಿ ಅಂಗನವಾಡಿ ಕೇಂದ್ರದಲ್ಲಿ ಗ್ರಾ.ಪಂ. ಸದಸ್ಯ ಎಂ.ಎA. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ, ಕೆದಮುಳ್ಳೂರು ಪುತ್ತಮಕ್ಕಿ ವಾರ್ಡ್ನ ಸಭೆಯು ತಾ. ೫ ರಂದು ಸ.ಕಿ.ಪ್ರಾ. ಶಾಲೆ ಪುತ್ತಮಕ್ಕಿಯಲ್ಲಿ ಗ್ರಾ.ಪಂ. ಸದಸ್ಯ ಕೋರಿಯಾರು ತಾಯಮ್ಮ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
ಕೆದಮುಳ್ಳೂರು ಕ್ರಿಶ್ಚಿಯನ್ ಕಾಲೋನಿ ವಾರ್ಡ್ ಸಭೆಯು ತಾ. ೫ ರಂದು ಗ್ರಾ.ಪಂ. ಸದಸ್ಯರಾದ ಮಾಳೇಟಿರ ಸಾಬಾ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಸಂಜೆ ೪ ಗಂಟೆಗೆ, ಕೆದಮುಳ್ಳೂರು ತೋಮರ ವಾರ್ಡ್ನ ಸಭೆಯು ತಾ. ೧೧ ರಂದು ಬಾರಿಕಾಡು ಸಂಘದ ಭವನದಲ್ಲಿ ಗ್ರಾ.ಪಂ. ಸದಸ್ಯ ಕೆ.ಎಂ. ರಾಮಯ್ಯ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ, ಸ.ಕಿ.ಪ್ರಾ. ಶಾಲೆ ಪಾಲಂಗಾಲದಲ್ಲಿ ಗ್ರಾ.ಪಂ. ಸದಸ್ಯೆ ಎನ್.ಎಂ. ಶೀಲಾ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ನಡೆಯಲಿದೆ.