ಮಡಿಕೇರಿ, ಅ. ೨: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅ. ೨೦ ರಂದು ಶುಕ್ರವಾರ ನಗರದ ಗಾಂಧಿ ಮೈದಾನದಲ್ಲಿ ೧೦ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹಾಗೂ ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪರ್ಧೆಗಳು ತಾ.೨೦ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಪ್ರಾರಂಭವಾಗಲಿದೆ.

ಮಕ್ಕಳಿAದ ಸಂತೆ ಮತ್ತು ಮಕ್ಕಳಿಂದ ಅಂಗಡಿ - ಎಸ್.ಎಸ್.ಎಲ್.ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ ೫ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಮಕ್ಕಳ ಅಂಗಡಿಯಲ್ಲಿ ಗರಿಷ್ಠ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ. ಮಕ್ಕಳಿಂದ ಮಂಟಪ ಸ್ಪರ್ಧೆಗೆ ೧೦ ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ತಯಾರಿಕಾ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ೬ ಮಕ್ಕಳು ಪಾಲ್ಗೊಳ್ಳಬಹುದು.

ಛದ್ಮವೇಶ ಸ್ಪರ್ಧೆ ಎಲ್.ಕೆ.ಜಿ.ಯಿಂದ ೧ನೇ ತರಗತಿ, ೨ನೇ ತರಗತಿಯಿಂದ ೪ನೇ ತರಗತಿ, ೫ ರಿಂದ ೭ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದ್ದು, ಗರಿಷ್ಠ ೨ ನಿಮಿಷದ ಪ್ರದರ್ಶನಕ್ಕೆ ಮಾತ್ರ ಅವಕಾಶ ಇದೆ. ವಸ್ತಾçಲಂಕಾರಕ್ಕೆ ಆದ್ಯತೆಯಿದೆ.

ಕ್ಲೇ ಮಾಡೆಲಿಂಗ್‌ಗೆ ೪ ರಿಂದ ೬ನೇ ತರಗತಿ ಮತ್ತು ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿತವಾಗಿದೆ.

ತಾ. ೨೦ ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ಸ್ಪರ್ಧಿಗಳು ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪರ್ಧೆಗಳು ಬೆಳಿಗ್ಗೆ ೯.೩೦ ಗಂಟೆಯಿAದ ಪ್ರಾರಂಭವಾಗುತ್ತದೆ.

ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಮಕ್ಕಳಿಂದ ಸಂತೆ - ಶಫಾಲಿ ರೈ ೯೭೪೧೫೨೩೪೮೪, ಮಕ್ಕಳಿಂದ ಅಂಗಡಿ ಸ್ಪರ್ಧೆ -ಪ್ರಿಯಾ ಪ್ರಶಾಂತ್ ೯೪೪೯೯೧೫೫೨೨, ಮಕ್ಕಳಿಂದ ಮಂಟಪ- ಗಾನಾ ಪ್ರಶಾಂತ್ ೯೪೪೯೭೧೩೭೪೮, ಛದ್ಮವೇಶ ಸ್ಪರ್ಧೆ - ಶಮ್ಮಿ ಪ್ರಭು ೯೪೪೯೮೩೩೧೭೯, ನಮಿತಾ ೯೪೪೮೯೭೬೪೦೫ ಕ್ಲೇ ಮಾಡೆಲಿಂಗ್ - ಸುಮನಾ ಶ್ರೀಹರಿ - ೭೩೫೩೦೭೮೬೬೧, ರೀನಾ ೯೪೪೮೭೯೩೬೧೯. ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ತಾ.೧೦ ಕೊನೆ ದಿನವಾಗಿದೆ.