ಗೋಣಿಕೊಪ್ಪಲು, ಅ. ೨: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹಲವು ವರ್ಷಗಳಿಂದ ಕಾಡುತ್ತಿದೆ. ಸರ್ಕಾರವು ಕೂಡ ನೂತನವಾಗಿ ಆಯ್ಕೆಯಾಗುವ ವೈದ್ಯರುಗಳಿಗೆ ಗ್ರಾಮೀಣ ಭಾಗದಲ್ಲಿನ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯ ಗೊಳಿಸಿದೆ. ಆದರೆ ವೈದ್ಯರ ಕೊರತೆ ಬಹು ಜಟಿಲವಾದ ಸಮಸ್ಯೆಯಾಗಿದೆ. ಆ ನಿಟ್ಟಿನಲ್ಲಿ ತಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಪೂರೈಸಿರುವವರು ಇರಬಹುದಾಗಿದೆ. ಅಂತಹವರನ್ನು ಗುರುತಿಸಿ ಆಸ್ಪತ್ರೆಗೆ ಕರೆತನ್ನಿ, ಆರೋಗ್ಯ ಇಲಾಖೆಯು ಇಂತಹವರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿ ಕೊಳ್ಳಲಿದೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಯ ವೈದ್ಯರ ಸಮಸ್ಯೆ ನೀಗಲಿದೆ. ಆ ನಿಟ್ಟಿನಲ್ಲಿ ಗ್ರಾಮದ ಹಿರಿಯರು, ಮುಖಂಡರು ವಿಶೇಷ ಕಾಳಜಿ ವಹಿಸಬೇಕು ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ದ.ಕೊಡಗಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಇವರು ವೈದ್ಯರ ಸಮಸ್ಯೆ ಜಟಿಲವಾಗಿದೆ. ಇತ್ತೀಚಿನ ಸಂದರ್ಭ ದಲ್ಲಿ ವೈದ್ಯವೃತ್ತಿಗೆ ಬಹಳಷ್ಟು ಬೇಡಿಕೆ ಯಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವೈದ್ಯರಿಗೆ ಇಲಾಖೆಯು ಮಾಸಿಕ ೬೨ ಸಾವಿರ ವೇತನವನ್ನು ನೀಡಲಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ರುವ ಅನೇಕ ವಿದ್ಯಾಭ್ಯಾಸ ಪೂರೈಸಿದ ವೈದ್ಯರನ್ನು ಗುರುತಿಸಿ ಇಲಾಖೆಯ ಗಮನಕ್ಕೆ ತರಬೇಕು. ಅಗತ್ಯವಿದ್ದಲ್ಲಿ ನಾನೂ ಕೂಡ ಅಂತಹವರೊAದಿಗೆ ಮಾತನಾಡಿ ಮನವೊಲಿಸುತ್ತೇನೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಎಲ್ಲರೂ ಶ್ರಮಿಸಿದಂತಾ ಗುತ್ತದೆ ಎಂದರು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿ ತಿಯ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಹಿರಿಯರಾದ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಉಮೇಶ್ ಕೇಚಮಯ್ಯ ಮಾತನಾಡಿ ಕುಟ್ಟಂದಿ ಆಸ್ಪತ್ರೆಯು ಬಹಳಷ್ಟು ವಿಸ್ತೀರ್ಣವನ್ನು ಹೊಂದಿದ್ದು ಗ್ರಾಮೀಣ ಭಾಗದಲ್ಲಿ ಉತ್ತಮವಾದ ಆಸ್ಪತ್ರೆಯಾಗಿದೆ. ವೈದ್ಯರಿಗೆ ಗುಣಮಟ್ಟದ ವಸತಿ ಗೃಹವು ಕೂಡ ಲಭ್ಯವಿದೆ. ೨೦೦೦ ಇಸವಿಯಲ್ಲಿ ಈ ಆಸ್ಪತ್ರೆಯು ನಿರ್ಮಾಣವಾಗಿದೆ. ಆಗಿನಿಂದ ಇಲ್ಲಿಯವರೆಗೂ ಡಾ.ಯತಿರಾಜ್ ರವರು ಈ ಆಸ್ಪತ್ರೆಯಲ್ಲಿ ಗ್ರಾಮಸ್ಥರಿಗೆ ಉತ್ತಮವಾದ ಸೇವೆ ನೀಡುತ್ತ ಬಂದಿದ್ದಾರೆ. ನಂತರದ ದಿನಗಳಲ್ಲಿ ಆಸ್ಪತ್ರೆಯು ಮೇಲ್ದರ್ಜೆಗೇರಿದೆ. ಆದರೆ ವೈದ್ಯರ ಸಮಸ್ಯೆ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಸರ್ಕಾರದಿಂದ ನೇಮಕವಾಗುವ ವೈದ್ಯರು ಕೆಲವೇ ತಿಂಗಳು ಮಾತ್ರ ಸೇವೆ ಸಲ್ಲಿಸಿ ನಂತರ ತೆರಳುತ್ತಾರೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವುದು ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು.

ಮರಣ ಹೊಂದಿದ ಸಂದರ್ಭ ಮರಣೋತ್ತರ ಪರೀಕ್ಷೆಗಾಗಿ ದೂರದ ಗೋಣಿಕೊಪ್ಪ ಆಸ್ಪತ್ರೆಗೆ ಕೊಂಡೊಯ್ಯಬೇಕಾಗಿದೆ. ಇದು ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ನೇಮಕಗೊಳ್ಳುವ ವೈದ್ಯರು ಇಲ್ಲಿಯೇ ಇರಬೇಕೆಂಬ ಒತ್ತಾಯ ಗ್ರಾಮಸ್ಥರ ಲ್ಲಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ಆರೋಗ್ಯ ಸೇವೆ. ನಾಗರಿಕರಿಗೆ ಸಿಗು ವಂತಾದರೆ ಅನುಕೂಲವೆಂದು ಶಾಸಕ ಪೊನ್ನಣ್ಣನವರ ಗಮನ ಸೆಳೆದರು.

ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಮಾತನಾಡಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಎಂಬಿಬಿಎಸ್ ಮುಗಿಸಿರುವ ೧೩ಕ್ಕೂ ಹೆಚ್ಚು ಮಂದಿ ಮನೆಯಲ್ಲಿದ್ದಾರೆಂಬ ಮಾಹಿತಿ ಲಭ್ಯವಿದೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮನೆಯಲ್ಲಿಯೇ ತಯಾರಿ ನಡೆಸುತ್ತಿದ್ದಾರೆ. ಇಂತಹ ಗ್ರಾಮೀಣ ಆಸ್ಪತ್ರೆಗಳಿಗೆ ಬಂದಲ್ಲಿ ಉದ್ಯೋಗದೊಂದಿಗೆ ತಮ್ಮ ಓದನ್ನು ಕೂಡ ಮಾಡಿಕೊಳ್ಳಲು ಅವಕಾಶಗಳು ಅಧಿಕವಿದೆ. ಅಂತಹವರನ್ನು ಮನವೊ ಲಿಸಿ ಇಲಾಖೆಗೆ ತಿಳಿಸಿದಲ್ಲಿ ವೈದ್ಯರ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾ ಗುತ್ತದೆ. ಆಗಮಿಸುವ ವೈದ್ಯರಿಗೆ ಹೆಚ್ಚಿನ ಒತ್ತಡ ಏರುವ ಪ್ರಮೇಯವಿಲ್ಲ. ಗ್ರಾಮದ ಜನತೆಗೆ ಅನುಕೂಲ ವಾಗುವುದೇ ನಮ್ಮ ಉದ್ದೇಶ ಕನಿಷ್ಟ ಒಪಿಡಿಗಳನ್ನು ಪ್ರತಿನಿತ್ಯ ನಿಭಾಯಿ ಸಿದ್ದಲ್ಲಿ ಪ್ರಯೋಜನವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಕಡೇಮಾಡ ಕುಸುಮ ಜೋಪಯ್ಯ, ತೀತಿಮಾಡ ಸದಾ ಉಪಸ್ಥಿತರಿದ್ದರು. ಶಾಸಕರೊಂದಿಗೆ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಕಾಂಗ್ರೆಸ್ ಪಕ್ಷದ ಹಿರಿಯರಾದ ಪೆಮ್ಮಂಡ ಕೆ.ಪೊನ್ನಪ್ಪ, ಮೂಕಳೇರ ಕುಶಾಲಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಭೇಟಿಯ ವೇಳೆ ಶಾಸಕ ಪೊನ್ನಣ್ಣ ಆಸ್ಪತ್ರೆಯ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಸ್ಥರು ನೀಡಿದ ಮನವಿ ಸ್ವೀಕರಿಸಿದರು.