ಸಂಕೇತ್ ಪೂವಯ್ಯ ಪ್ರಶ್ನೆ
ಮಡಿಕೇರಿ, ಅ. ೧: ಕೊಡವರಿಗೆ ಈ ಹಿಂದಿನಿAದಲೂ ಲಭ್ಯವಿದ್ದ ‘ಕೋವಿ ಹಕ್ಕಿನ ವಿನಾಯಿತಿ’ಗೆ ೨೦೧೯ ಅಕ್ಟೋಬರ್ ೨೯ ರಂದು ಕೇಂದ್ರದ ಗೃಹ ಸಚಿವಾಲಯ ಷರತ್ತುಗಳನ್ನು ಅಳವಡಿಸುವ ಹಂತದಲ್ಲಿ ಸಂಸದ ಪ್ರತಾಪ ಸಿಂಹ ಅವರು ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಪ್ರಶ್ನಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಕೊಡವರಿಗೆ ಬ್ರಿಟೀಷರ ಕಾಲದಿಂದ ಲಭ್ಯವಿದ್ದ ಕೋವಿ ವಿನಾಯಿತಿ ಹಕ್ಕನ್ನು ೧೯೬೬ ರಿಂದ ಶಾಶ್ವತಗೊಳಿಸಿ ಮುಂದುವರೆಸಲಾಗಿದೆ. ಈ ಹಕ್ಕಿನ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ಪ್ರಶ್ನಿಸಿದ ಹಿನ್ನೆಲೆ, ನ್ಯಾಯಾಲಯ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟನೆ ಬಯಸಿತ್ತು.
ಈ ಹಿನ್ನೆಲೆ ಕೇಂದ್ರದ ಗೃಹ ಸಚಿವಾಲಯ ಕೊಡಗಿನಲ್ಲಿರುವ ವಿಶೇಷ ಕೋವಿ ವಿನಾಯಿತಿ ಹಕ್ಕನ್ನು ಮುಂದುವರಿಸುವ ಹಂತದಲ್ಲಿ, ಈ ಹಕ್ಕನ್ನು ‘೨೦೨೯ರ ಅಕ್ಟೋಬರ್ ೩೧’ ರವರೆಗೆ ಎಂದು ಷರತ್ತನ್ನು ಹಾಕಿ ಮುಂದುವರಿಸಿದೆ. ಈ ಹಂತದಲ್ಲಿ ಕೊಡಗಿನ ಜನರು ಮತ್ತು ಕೋವಿ ನಡುವಿನ ಸಾಂಸ್ಕೃತಿಕ ಸಂಬAಧ, ಮಹತ್ವಗಳನ್ನು ಸಂಸತ್ನಲ್ಲಿ ತಿಳಿಸಬೇಕಿದ್ದ ಪ್ರತಾಪ್ ಸಿಂಹ ಅವರು ಆ ಸಂದರ್ಭ ಏನು ಮಾಡುತ್ತಿದ್ದರೆಂದು ಸಂಕೇತ್ ಪ್ರಶ್ನಿಸಿದರು. ಶಾಸಕ ಪೊನ್ನಣ್ಣ ಅವರು ವೀರಾಜಪೇಟೆಯ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ್ದು ಇದೇ ವಿಚಾರ ಎಂದು ಅವರು ತಿಳಿಸಿದರು.
ಕೊಡಗಿನ ಮೂಲಭೂತ ವಿಷಯಗಳ ಬಗ್ಗೆ ಕಾಳಜಿ ತೋರದ ಸಂಸದರು, ಇದನ್ನು ಮುಚ್ಚಿಕೊಳ್ಳುವ ಸಲುವಾಗಿ ಇದೀಗ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ಜಿಲ್ಲಾ ಬಿಜೆಪಿಯೂ ಬೆಂಬಲಿಸುತ್ತಿದೆ ಎಂದು ಅವರು ದೂರಿದರು.