ಸೋಮವಾರಪೇಟೆ, ಅ. ೧: ಕಾಗಡೀಕಟ್ಟೆ ಬದ್ರಿಯ ಜುಮ್ಮ ಮಸೀದಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮಸೀದಿ ಆವರಣದಲ್ಲಿ ಸೆ.೨೮ರಂದು ರಕ್ತದಾನ ಶಿಬಿರ ನಡೆಯಿತು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂದರ್ ಮಾತನಾಡಿ, ರಕ್ತದಾನದಿಂದ ಇನ್ನೊಂದು ಜೀವವನ್ನು ಉಳಿಸಬಹುದು. ರಕ್ತಕ್ಕೆ ಪರ್ಯಾಯ ಯಾವುದೇ ವಸ್ತು ಇಲ್ಲ. ಈ ಕಾರಣದಿಂದ ಅರೋಗ್ಯವಂತರು ೬೦ ವರ್ಷಗಳ ತನಕ ರಕ್ತದಾನ ಮಾಡಬಹುದು. ರಕ್ತದಾನದಿಂದ ದಾನಿಗಳ ಅರೋಗ್ಯ ಉತ್ತಮವಾಗಿರುತ್ತದೆ. ಅನೇಕ ರೋಗಗಳಿಂದಲೂ ಮುಕ್ತವಾಗಬಹುದು. ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುವುದರಿಂದ ಒಳ್ಳೆಯದು ಎಂದು ಹೇಳಿದರು. ಜಿಲ್ಲೆಯ ರಕ್ತನಿಧಿ ಕೇಂದ್ರಕ್ಕೆ ಪ್ರತಿ ತಿಂಗಳು ಹೆಚ್ಚಿನ ರಕ್ತದ ಅವಶ್ಯಕತೆ ಇದೆ. ಸಂಘಸAಸ್ಥೆಗಳು ರಕ್ತದಾನ ಶಿಬಿರವನ್ನು ಏರ್ಪಡಿಸಬೇಕು ಎಂದು ಹೇಳಿದರು. ಮಸೀದಿಯ ಅಧ್ಯಕ್ಷರಾದ ಖಾಲಿದ್, ಸಮುದಾಯ ಆರೋಗ್ಯಾಧಿಕಾರಿ ಧರಣೇಶ್ ಮತ್ತಿತರರು ಇದ್ದರು.