ಐಗೂರು, ಅ. ೧: ಯುವ ಜನತೆ ಇಂದು ಮಾದಕ ವಸ್ತುಗಳ ಬಳಕೆ ಮಾಡುವ ಪ್ರಮಾಣ ಅಧಿಕವಾಗಿದ್ದು, ಯುವ ಸಮೂಹ ಅವನತಿಯತ್ತ ಸಾಗುತ್ತಿದೆ. ಈ ಸಂಗತಿ ಕಳವಳಕಾರಿಯಾಗಿದ್ದು, ತಮ್ಮ ಯಾವುದೇ ವಿಚಾರಗಳಿದ್ದರೂ ತನ್ನ ಗಮನಕ್ಕೆ ತನ್ನಿ, ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ರವರು ಕರೆ ನೀಡಿದರು. ಅವರು ಸ್ಥಳೀಯ ಜಾಮಿಯಾ ಮಸೀದಿ ಹೊಸತೋಟ ಇವರ ಆಶ್ರಯದಲ್ಲಿ ಈ ದಿನ ಹಬ್ಬದ ಮತ್ತು ಸ್ಥಳೀಯ ಹಳೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶರೀಫ್ ಅನ್ವರಿ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ ವಹಿಸಿದ್ದರು. ಸ್ವಾಗತವನ್ನು ಜಮಾತ್ ಕಾರ್ಯದರ್ಶಿ ಸಲೀಂ ಹೊಸತೋಟ ನೆರವೇರಿಸಿದರು. ಸಹ ಕಾರ್ಯದರ್ಶಿ ಕಾಲಿದ್ ಪ್ರವಾದಿ ಅವರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಕೋಯ, ಉಮ್ಮರ್, ಉನೆಯ್ಜ್, ಜುನೈದ್, ನಸೀರ್ ಮತ್ತು ಚೇತನ್ ಇನ್ನಿತರರು ಉಪಸ್ಥಿತರಿದ್ದರು.