ಕಡಂಗ, ಅ. ೨: ಕುಂಜಲ ಗೇರಿಯ ಶ್ರೀ ಗಣಪತಿ ಸೇವಾ ಸಮಿತಿ ಯಿಂದ ೨೫ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಗಣೇ ಶೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು .
ವಿಘ್ನನಿವಾರಕನ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಬಳಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಣ ಪತಿ ಸೇವಾ ಸಮಿತಿ ಅಧ್ಯಕ್ಷ ಮುಕ್ಕಾಟಿರ ಬಿನ್ನು ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೆಸ್ಕ್ ನಿವೃತ್ತÀ ಅಧೀಕ್ಷಕ ಬಟ್ಟಕಾಳಂಡ ಮುತ್ತಣ್ಣ ಪಾಲ್ಗೊಂಡು ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು, ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಮತ್ತೊರ್ವ ಅತಿಥಿ ಸುಭಾಷ್ ಚಂದ್ರ ಬೆಳ್ಳಾರೆ ಮಾತನಾಡಿ; ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕೆಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಟ್ಟಕಾಳಂಡ ಕಾಮಿ ಸುರೇಶ್, ಸದಸ್ಯೆ ಹೆZ.ï ಮಲ್ಲಿಗೆ, ದಾನಿ ಚರ್ಮಂಡ ಅಪ್ಪುಣು ಪೂವಯ್ಯ ಉಪಸ್ಥಿತರಿದ್ದರು.
ಸನ್ಮಾನ
ಪ್ರತಿ ವರ್ಷದಂತೆ ಗ್ರಾಮದಿಂದ ಭಾರತೀಯ ಸೇನೆ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಇಗ್ಗುಡ ಜಯ ಸುಬ್ಬಯ್ಯ, ಇಗ್ಗುಡ ಲಾಲು ಚಿಣ್ಣಪ್ಪ, ಅಲ್ಲಪ್ಪಿರ ಎಸ್. ಸುಬ್ಬಯ್ಯ, ಚರ್ಮಂಡ ಎಸ್. ಗಿರೀಶ್, ಮುಂಡAಡ ಎಂ. ಅಶ್ವಥ್, ಮುಂಡAಡ ಮಂದಣ್ಣ, ಬಟ್ಟಕಾಳಂಡ ಕೆ. ಮಂದಣ್ಣ ಇವರುಗಳು ಪೊಲೀಸ್ ಇಲಾಖೆ ಹಾಗೂ ಭಾರತೀಯ ಸೇನೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಸನ್ಮಾನ ಸ್ವೀಕರಿಸಿದರು.
ಸಾಂಸ್ಕೃತಿಕ-ಕ್ರೀಡಾ ಸ್ಪರ್ಧೆ
ಸಭಾಕಾರ್ಯಕ್ರಮದ ನಂತರ ಶ್ರೀ ದತ್ತಾತ್ರೇಯ ಕುಣಿತ ಭಜನಾ ಮಂಡಳಿ ಮಂಗಳೂರು ವತಿಯಿಂದ ಕುಣಿತ, ಭಜನಾ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು ಮಕ್ಕಳು, ಮಹಿಳೆಯರು, ಪುರುಷರು, ವಯಸ್ಕರು, ಹಾಡು ಗಾರಿಕೆ, ನೃತ್ಯ, ರಸಪ್ರಶ್ನೆ ಹೀಗೆ ವಿವಿಧ ಪೈಪೋಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಜತ ಮಹೋತ್ಸವದ ಮೆರುಗನ್ನು ಹೆಚ್ಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಪೈಪೋಟಿಯಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಕುಳಿಯಕಂಡ ಪೊನ್ನಣ್ಣ, ಕಾಮೆ ಯಂಡ ಕಲ್ಪನಾ ಸಾಮ್ರಾಟ್ ನಿರೂ ಪಿಸಿದರೆ, ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಕೆ. ಎಸ್. ಪೊನ್ನಣ್ಣ ಹಾಗೂ ಚೊಟ್ಟೇರ ಕಿರಣ್ ನಡೆಸಿಕೊಟ್ಟರು.
ನಂತರ ಅಲಂಕೃತಗೊAಡ ವಾಹನದಲ್ಲಿ ೩ ಕಿ.ಮೀ. ಮೆರವಣಿಗೆಯಲ್ಲಿ ಸಾಗಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
- ನೌಫಲ್ ಕಡಂಗ