ಇಂದು ಅಂರ‍್ರಾಷ್ಟಿçÃಯ ಕಾಫಿ ದಿನ

ಬೆಂಗಳೂರು, ಸೆ. ೩೦: ಒಂದಾನೊAದು ಕಾಲದಲ್ಲಿ ಅಲ್ಲ.. ನಿಖರವಾಗಿ ಹೇಳುವುದಾದಲ್ಲಿ ೧೬೭೦ ರಲ್ಲಿ ಅರೇಬಿಯಾ ದೇಶಕ್ಕೆ ಹೋದ ಮೈಸೂರು ಪ್ರಾಂತ್ಯದ ಸಂತ ಬಾಬಾ ಬುಡನ್ ಅಲ್ಲಿನ ಮೆಕ್ಕಾದಲ್ಲಿ ಕಾಫಿ ಸೇವಿಸಿ ಅದರ ಸ್ವಾದಕ್ಕೆ ಮನಸೋತರು. ವಾಪಾಸ್ ಮರಳುವಾಗ ಕಾಫಿಯ ಏಳು ಬೀಜಗಳನ್ನು ಗಡ್ಡದೊಳಕ್ಕೆ ಬಚ್ಚಿಟ್ಟು ಯೆಮೆನ್ ಬಂದರಿಗೆ ತೆರಳಿ ಅರಬ್ಬರ ಕಣ್ಣು ತಪ್ಪಿಸಿ ಹಡಗಿನ ಮೂಲಕ ಭಾರತಕ್ಕೆ ತಂದರು.

ಚಿಕ್ಕಮಗಳೂರಿಗೆ ಬಂದ ಬಾಬಾ ಬುಡನ್ ಅಲ್ಲಿನ ಗುಡ್ಡದಲ್ಲಿ ಹಸಿ ಕಾಫಿ ಬೀಜಗಳನ್ನು ಬಿತ್ತಿದರು. ಮುಂದೆ ಚಿಕ್ಕಮಗಳೂರಿನ ಚಂದ್ರದ್ರೋಣ ಬೆಟ್ಟದಲ್ಲಿ ಕಾಫಿ ಸಸಿಗಳು ಹುಟ್ಟಿಕೊಳ್ಳಲು ಇದು ಕಾರಣವಾಯಿತು. ಮುಂದಿನದ್ದು ಇತಿಹಾಸ ಎಂಬAತೆ ಅರೇಬಿಯಾದಿಂದ ಹೊರಗಡೆ ಮೊದಲ ಬಾರಿಗೆ ಭಾರತದ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಯಲಾಗಿತ್ತು. ಕಾಫಿಯನ್ನು ಹೊಸ ಬೆಳೆಯಾಗಿ ಬೆಳೆಯಲು ಅಧಿಕ ಸಂಖ್ಯೆಯಲ್ಲಿ ಕೃಷಿಕರು ಉತ್ಸಾಹದಿಂದ ಮುಂದಾದರು. ಇದರ ಪರಿಣಾಮವೇ ಕಾಫಿ ಗಿಡಗಳು ಮಲೆನಾಡು ಪ್ರಾಂತ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಕಾಣತೊಡಗಿದ್ದವು. ವರ್ಷಾನುನಂತರ ಕಾಫಿ ಬೆಳೆಯುವುದೇ ಮಲೆನಾಡು ಜನರ ಮುಖ್ಯ ಕೃಷಿಯಾಗಿ ಪರಿಗಣಿಸಲ್ಪಟ್ಟಿತು.

ಬಾಬಾ ತಂದ ೭ ಕಾಫಿ ಬೀಜಗಳು ವಿಸ್ಮಯವನ್ನೇ ಸೃಷ್ಟಿಸಿತ್ತು. ಬೆಟ್ಟದಿಂದ ಬಟ್ಟಲಿಗೆ ಕಾಫಿ ಸುರಿದಿತ್ತು. ಇದೀಗ ಬೆಟ್ಟದಲ್ಲಿ ಹುಟ್ಟಿಕೊಂಡ ಕಾಫಿ ವಿಶ್ವದಗಲ ಕಂಡುಬAದಿದೆ.

ಪ್ರಸ್ತುತ ಬ್ರೆಜಿಲ್ ದೇಶ ಜಗತ್ತಿನಲ್ಲಿಯೇ ಅತ್ಯಧಿಕ ಕಾಫಿ ಬೆಳೆಗಾರ ದೇಶ ಎನಿಸಿದೆ. ಇಲ್ಲಿ ವಾರ್ಷಿಕ ೨೭ ಲಕ್ಷ ಟನ್ ಕಾಫಿ ಬೆಳೆಯಲಾಗುತ್ತಿದೆ. ಈ ಮೂಲಕ ಜಗತ್ತಿನ ಕಾಫಿ ದೇಶ ಎಂಬ ಹೆಗ್ಗಳಿಕೆಗೂ ಬ್ರೆಜಿಲ್ ಪಾತ್ರವಾಗಿದೆ.

ವಿಯೆಟ್ನಾಂ ೧೭ ಲಕ್ಷ ಟನ್ ಕಾಫಿ ಬೆಳೆದರೆ, ಕೊಲಂಬಿಯಾ ದೇಶವು ೮ ಲಕ್ಷ ಟನ್ ಕಾಫಿ ಬೆಳೆಯುತ್ತದೆ. ಗ್ವಾಟೆಮಾಲ ದೇಶ ವಾರ್ಷಿಕವಾಗಿ ೨ ಲಕ್ಷ ಟನ್ ಕಾಫಿ ಉತ್ಪಾದಿಸುತ್ತಿದೆ. ಮೆಕ್ಸಿಕೋ ದೇಶದಲ್ಲ ೨.೨೫ ಲಕ್ಷ ಟನ್ ಉತ್ಪಾದನೆಯಾದರೆ, ಉಗಾಂಡಾದಲ್ಲಿ ೨.೮೦ ಲಕ್ಷ ಟನ್ ಉತ್ಪಾದನೆ ಇದೆ. ಇಲ್ಲಿ ಕೃಷಿಕರು ಕಾಫಿ ಬೆಳೆಯುವುದಕ್ಕಿಂತ ಹೆಚ್ಚಾಗಿ ತನ್ನಿಂತಾನೇ ಕುರುಚಲು ಕಾಡಿನಂತೆ ಕಾಫಿ ಬೆಳೆಯುವುದು ವಿಶೇಷ. ಭಾರತದಲ್ಲಿ ೧೬೭೦ ರಲ್ಲಿಯೇ ಕಾಫಿ ಬೆಳೆಯಲು ಪ್ರಾರಂಭಿಸಿದರೂ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ನಿರೀಕ್ಷಿತ ವೇಗದಲ್ಲಿ ಕಾಫಿ ಬೆಳವಣಿಗೆ ಕಂಡಿಲ್ಲ. ಭಾರತ ವಾರ್ಷಿಕವಾಗಿ ೩.೬೦ ಲಕ್ಷ ಟನ್ ಕಾಫಿ ಉತ್ಪಾದನೆ ಮಾಡುತ್ತಿದೆ.

ಭಾರತದಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದನೆಯಾಗುತ್ತಿದ್ದರೆ ತಮಿಳುನಾಡು, ಕೇರಳ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ. ಕರ್ನಾಟಕದ ಕಾಫಿ ಉತ್ಪಾದನಾ ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆಗೆ ಮೊದಲ ಸ್ಥಾನವಿದೆ.

ವಿಶೇಷ ಎಂದರೆ ನೆದರ್ಲ್ಯಾಂಡಿನ ಆ್ಯಮಸ್ಟರ್‌ಡಾಮ್‌ನಲ್ಲಿ ಅತ್ಯಧಿಕ ಜನ ಸಭೆ ಸೇರುವುದು ಕಾಫಿ ಹೌಸ್‌ಗಳಲ್ಲಿಯೇ. ಇಲ್ಲಿನ ನಿವಾಸಿಗಳು ಪ್ರತಿನಿತ್ಯ ತಲಾ ೩ ಕಪ್ ಕಾಫಿ ಕುಡಿಯುತ್ತಾರಂತೆ. ಮನೆಗೆ ಯಾರೇ ಬಂದರೂ ಕಾಫಿ ಕೊಡುವುದು ಕಡ್ಡಾಯ. ಹೀಗಾಗಿ ಕಾಫಿಯ ಆಂತರಿಕ ಬಳಕೆ ಇಲ್ಲಿ ಅತ್ಯಧಿಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಂದ್ರಯಾನ, ಮಂಗಳಯಾನ ಹೆಸರವಾಸಿಯಾಗುತ್ತಿದೆ. ಅಮೇರಿಕಾ, ರಷ್ಯಾದಲ್ಲಿ ಕೆಲವು ವರ್ಷಗಳ ಹಿಂದೆಯೇ ಉಪಗ್ರಹಯಾನ ಪ್ರಸಿದ್ಧಿ ಪಡೆದಿದೆ. ಹೀಗೆ ಗಗನಕ್ಕೆ ಹಾರುವ ಯಾತ್ರಿಗಳಿಗೆ ಅಚ್ಚುಮೆಚ್ಚಿನ ಪೇಯವಾಗಿ ಕಂಡುಬAದಿರುವುದೇ ಕಾಫಿ. ಗಗನಯಾತ್ರಿಗಳು ಅಂತರಿಕ್ಷದಲ್ಲಿ ಸೇವಿಸಲು ತಮ್ಮೊಂದಿಗೆ ಕಾಫಿಯನ್ನು ಕೊಂಡೊಯ್ಯುತ್ತಾರೆ ಎಂದರೆ ಕಾಫಿಯ ಖ್ಯಾತಿ ಊಹಿಸಿಕೊಳ್ಳಿ. ಅತ್ಯಂತ ಸವಾಲಿನ ನಡುವೇ ಗಗನಯಾತ್ರಿಗಳು ಕಾಫಿ ಸೇವಿಸಬೇಕಾಗುತ್ತದೆ. ಹೀಗಿದ್ದರೂ ಕುಡಿಯುವ ವಿಚಾರಕ್ಕೆ ಬಂದಾಗ ಯಾತ್ರಿಗಳ ಮೊದಲ ಆಯ್ಕೆ ಕಾಫಿಯೇ ಆಗಿದೆ.

ಬೆಟ್ಟದಿಂದ ಬಟ್ಟಲಿಗಿಳಿದ ಕಾಫಿ ಗಗನದಲ್ಲಿಯೂ ತನ್ನ ಹಿರಿಮೆ ತೋರಿದ್ದು ಅದರ ಸ್ವಾದಿಷ್ಟತೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿಗಷ್ಟೇ ಮುಕ್ತಾಯಗೊಂಡ ಏಷ್ಯಾದಲ್ಲಿ ಮೊದಲನೇ ಬಾರಿಗೆ ಆಯೋಜಿತವಾಗಿದ್ದ ವಿಶ್ವದ ೫ನೇ ಕಾಫಿ ಸಮ್ಮೇಳನ ಕಾಫಿಯ ಬ್ರಹ್ಮಾಂಡವನ್ನೇ ಅನಾವರಣಗೊಳಿಸಿತ್ತು. ಜಗತ್ತಿನಲ್ಲಿ ಕಾಫಿ ಬೆಳೆಯುವ ಶೇ. ೮೦ ರಷ್ಟು ದೇಶಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡದ್ದು ಗಮನಾರ್ಹವಾಗಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಅಸ್ಸಾಂ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್ ಸೇರಿದಂತೆ ದೇಶದಲ್ಲಿ ಕಾಫಿ ಬೆಳೆಯುವ ಎಲ್ಲಾ ರಾಜ್ಯಗಳು ಮಾತ್ರವಲ್ಲದೇ ಜಗತ್ತಿನ ಕಾಫಿ ಬೆಳೆಗಾರ ರಾಷ್ಟçಗಳನ್ನು ಸಮ್ಮೇಳನದ ಮೂಲಕ ಒಂದೇ ವೇದಿಕೆಗೆ ತರಲಾಯಿತು.

ಕಾಫಿ ರಂಗದ ದಿಗ್ಗಜರ ಸಂಗಮ ಕೂಡ ಕಾಫಿ ಉದ್ಯಮಿಗಳ ಉತ್ಸಾಹ ಹೆಚ್ಚಿಸಿತ್ತು. ಸಮ್ಮೇಳನದ ಮೂಲಕ ತಾವು ಬೆಳೆಯುವ ಕೃಷಿಯಾದ ಕಾಫಿಗೂ ಅಚ್ಚೇದಿನ್ ಬರಬಹುದು ಎಂಬ ಬೆಳೆಗಾರರ ನಿರೀಕ್ಷೆಯನ್ನೂ ಈ ಸಮ್ಮೇಳನ ಹೆಚ್ಚಿಸಿತ್ತು.ಕಾಫಿ ಕೇವಲ ಪೇಯವೇ.. ಖಂಡಿತಾ ಅಲ್ಲ.. ಕಾಫಿ ಕೇವಲ ಪೇಯ ಮಾತ್ರವಲ್ಲ. ಕಾಫಿಯಲ್ಲಿ ಮತ್ತಷ್ಟು ಅಂಶಗಳಿವೆ. ಕಾಫಿ ಮೊದಲಿನ ದಿನಗಳಂತೆ ಕೇವಲ ಕುಡಿಯುವ ಪಾನೀಯವಾಗಿ ಮಾತ್ರ ಉಳಿದಿಲ್ಲ. ಕಾಫಿ ಈಗ ಅವಕಾಶಗಳ ಸಪ್ತ ಸಾಗರದಾಚೆಗೂ ವಿಸ್ತರಿಸಿದೆ. ಕಾಫಿ ಕೃಷಿಕರ ಸುಪ್ತ ಕನಸುಗಳು ಗರಿಗೆದರುವಂತೆ ಮಾಡಿದೆ. ಅವಕಾಶಗಳ ಹೊಸ ಬಾಗಿಲು ತೆರೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ಕಾಫಿಯನ್ನು ರಾಸಾಯನಿಕವಾಗಿಯೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಸಾಗಿದೆ. ಕಾಫಿಯನ್ನು ಔಷಧಿಯಾಗಿ, ಚಿತ್ರ ಕಲೆಗೆ, ಸಾಮಗ್ರಿಗಳ ತಯಾರಿಕೆಗೆ ಕಚ್ಚಾಸಾಮಗ್ರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿಯೂ ಪ್ರಯತ್ನ ಮುಂದುವರೆದಿದೆ.

ಪ್ರಾಚೀನ ಕಾಲದಲ್ಲಿ ಬೆಂಕಿ ಒಲೆ ಮುಂದೆ ಕುಳಿತು ಅಜ್ಜಿ ಹೇಳುತ್ತಿದ್ದ ಮಕ್ಕಳ ಕಥೆ ಈಗ ಕಾಫಿ ಡೇಯಲ್ಲಿ ಕುಳಿತು ಕೇಳುವ ಕಾಫಿ ಕಥೆಯಾಗಿ ಪರಿವರ್ತನೆಯಾಗಿದೆ. ಒಂದಾನೊAದು ಕಾಲದಲ್ಲಿ.. ಎಂಬ ಪ್ರಾರಂಭ ಹಾಗೇ ಇದೆಯಾದರೂ ಒಂದಾನೊAದು ಕಾಲದಲ್ಲಿ ಭಾರತಕ್ಕೆ ಬಂದ ಕಾಫಿ ಈಗ ಜಗದಗಲ ವಿಸ್ತರಿಸಿದೆ ಎಂಬ ಕಥೆ ಹೆಣೆಯುವಿಕೆಗೂ ಕಾರಣವಾಗಿದೆ. ಎಲ್ಲಾ ಎಲ್ಲೆಗಳನ್ನೂ ದಾಟಿ ಕಾಫಿ ವಿಶ್ವವ್ಯಾಪಿಯಾಗಿ ವಿಸ್ತರಿಸುತ್ತಾ ಮುನ್ನಡೆದಿದೆ.

ಇದೇ ಬೆಳೆಗಾರರ ಹೊಸ ಭರವಸೆಗೆ ಕಾರಣವಾಗಿದೆ. ನವಚಿಂತನೆಗಳು, ನವ ಪರಿವರ್ತನೆಗಳ ಹೊಸ ಗಾಳಿ ಕಾಫಿ ತೋಟಗಳಲ್ಲಿ ಸುಳಿದಾಡುವ ದಿನಗಳು ಸನಿಹದಲ್ಲಿದೆ. ಗಲ್ಲಿ ಬದಿಯ ಗೂಡಂಗಡಿಗಳಲ್ಲಿ ದೊರಕುತ್ತಿದ್ದ ಬಿಸಿ ಬಿಸಿ ಕಾಫಿ ಈಗ ನಗರ ಪ್ರದೇಶ ಮಾತ್ರವಲ್ಲ, ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರದಂತಹ ಪೇಟೆಯಲ್ಲಿ ಕಾಫಿ ಕೆಫೆ ರೂಪ ಪಡೆದು ಹಬೆಯಾಡುವ, ಕ್ಯಾಪಚಿನೋ ಹೆಸರಿನ ಕಾಫಿಯಾಗಿ ನೊರೆಯುಕ್ಕಿಸಿಕೊಂಡು ದೊರಕುತ್ತಿದೆ.

ಅಂದಿನ ಕಾಲದಲ್ಲಿ ಟೀ ಬಡವರ ಪೇಯವಾಗಿದ್ದರೆ, ಕಾಫಿ ಶ್ರೀಮಂತರ ಪಾನೀಯವಾಗಿತ್ತು. ಬದಲಾದ ಕಾಲದಲ್ಲಿ.. ಕಾಫಿ ಕೂಡ ಕೆಫೆ ಸಂಸ್ಕೃತಿಯಿAದಾಗಿ ಯುವಪೀಳಿಗೆಯ ಮನಗೆಲ್ಲುತ್ತಾ ಸಾಗಿ ‘ಒನ್ ಹಾಟ್ ಕಾಫಿ ಪ್ಲೀಸ್’ ಎಂಬ ಕೋರುವಿಕೆಗೆ ಕಾರಣವಾಗಿದೆ. ವಿದೇಶಗಳಲ್ಲಿನ ಹೊಸ ಬದಲಾವಣೆ ಎಂಬAತೆ ಕೋಲ್ಡ್ ಕಾಫಿ (ತಣ್ಣಗಿನ ಕಾಫಿ) ಬಹುಬೇಡಿಕೆಯ ಹಾಟ್ ಕಾಫಿಯಾಗಿ ಕಂಡುಬAದಿದೆ. ಕಾಫಿಯಲ್ಲಿ ೨೫೦ಕ್ಕೂ ವೈವಿಧ್ಯತೆಗಳು ನವಪೀಳಿಗೆಯಲ್ಲಿ ಕಾಫಿ ಬಗೆಗಿನ ಪ್ರೇಮದ ಸಂಕೇತವಾಗಿದೆ. ನಿರುದ್ಯೋಗಿ ಯುವಕರು ವಿದೇಶಗಳಲ್ಲಿ ಕಾಫಿ ಕೃಷಿಗೆ ಮುಂದಾಗುತ್ತಿರುವ ಬೆಳವಣಿಗೆ ನಿಧಾನವಾಗಿ ಕರ್ನಾಟಕದಲ್ಲಿಯೂ ಕಂಡುಬರುತ್ತಿದೆ. ಕೊಡಗಿನಲ್ಲಿ.. ಕೂಡ ಅಪ್ಪ ನೋಡಿಕೊಳ್ಳುತ್ತಿದ್ದ ಕಾಫಿ ತೋಟವನ್ನು ಮಗ, ಮಗಳು ನೋಡಿಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳುತ್ತಿರುವ ಬೆಳವಣಿಗೆ ಆಶಾದಾಯಕವಾಗಿದೆ.

ಲೈಬೇರಿಕಾದಂತಹ ಪ್ರಾಚೀನ ಕಾಲದ ಕಾಫಿ ತಳಿ (೧೯೦೫ ರಲ್ಲಿ ಇದ್ದದ್ದು) ಈಗ ಬ್ರೆಜಿಲ್, ಶ್ರೀಲಂಕಾ ಸೇರಿದಂತೆ ಕೆಲವಾರು ದೇಶಗಳಲ್ಲಿ ಮತ್ತೆ ಮರುಹುಟ್ಟು ಪಡೆದಿದೆ. ಜಗತ್ತಿನಲ್ಲಿರುವ ೧೩೦ ವಿಧದ ಕಾಫಿ ತಳಿಗಳಿಗೂ ನಿಧಾನವಾಗಿ ಬೇಡಿಕೆ ಬರುವ ಕಾಲ ಬರುವ ಸಾಧ್ಯತೆ ಬಗ್ಗೆಯೂ ಕಾಫಿ ತಜ್ಞರು ಮಾತನಾಡುವಂತಾಗಿದೆ.

ಕಾಫಿ ಕೃಷಿ ಮತ್ತು ಉದ್ಯಮರಂಗದಲ್ಲಿ ಯುವಕ, ಯುವತಿಯರಿಗೆ ಹೆಚ್ಚಿನ ಉದ್ಯೋಗ ನೀಡಿಕೆ., ಯುವಪೀಳಿಗೆಯಲ್ಲಿ ಕಾಫಿ ಸೇವನೆ ಕುರಿತಂತೆ ಹೆಚ್ಚಿನ ಆಸಕ್ತಿ ಮೂಡಿಸುವ ಪ್ರಯತ್ನಗಳು ಖಂಡಿತವಾಗಿಯೂ ಕಾಫಿ ಎಂಬ ಪೇಯವನ್ನು ವಿಶ್ವದಲ್ಲಿ ಮತ್ತಷ್ಟು ವರ್ಷಗಳ ಕಾಲ ಪ್ರಖ್ಯಾತಿಗೊಳಿಸಲು ಸಾಧ್ಯವಿದೆ. ನೀರು ಹೊರತು ಪಡಿಸಿದಂತೆ ಇತ್ತೀಚಿನ ವರ್ಷಗಳಲ್ಲಿ ಕಾಫಿಯೇ ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೇವಿಸುವ ಪೇಯವಾಗಿದೆ (ದಿನಕ್ಕೆ ೩೦೦ ಕೋಟಿ ಕಾಫಿ ಕಪ್ ಸೇವನೆ).

ಗುಣಮಟ್ಟದ ಕಾಫಿ ಬೆಳೆಯುತ್ತಲೇ ಇದ್ದರೆ, ಮಾರುಕಟ್ಟೆ ಬಗ್ಗೆ ಸ್ವಲ್ಪ ಮಟ್ಟಿಗಿನ ಜ್ಞಾನ ಹೊಂದಿದ್ದರೂ ಕಾಫಿ ಬೆಳೆಗಾರರು ಭವಿಷ್ಯದಲ್ಲಿ ಕಾಫಿ ಕೃಷಿಯಲ್ಲಿ ನೆಮ್ಮದಿಯ ಜೀವನ ಕಾಣಲು ಖಂಡಿತಾ ಸಾಧ್ಯವಿದೆ.

- ಅನಿಲ್ ಎಚ್.ಟಿ.