ಮಡಿಕೇರಿ, ಸೆ. ೩೦: ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ೧೪ ವಯೋಮಿತಿಯ ಬಾಲಕಿಯರ ಫುಟ್‌ಬಾಲ್ ಕ್ರೀಡಾಕೂಟವು ಮೂರ್ನಾಡು ಶಾಲಾ ಮೈದಾನದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಮಡಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಬಾಲಕಿಯರು ಫೈನಲ್ ಪ್ರವೇಶಿಸಿ ಲಿಟಲ್ ಫ್ಲವರ್ ಶಾಲೆ ಗೋಣಿಕೊಪ್ಪ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿ ಗೆಲುವು ಸಾಧಿಸಿತು. ವಿಧಿತ ಕೆ.ಎನ್. ಮತ್ತು ಫಿದಾ ಫಾತಿಮಾ ತಲಾ ಒಂದು ಗೋಲು ಹೊಡೆಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಮುಂದೆ ಮಂಗಳೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಈ ತಂಡ ಆಯ್ಕೆಯಾಗಿದೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಬಿ.ಎಲ್. ಅವರು ತರಬೇತಿ ನೀಡಿದ್ದಾರೆ.