ಮಡಿಕೇರಿ, ಸೆ. ೩೦: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿ.ಎಸ್.ಇ.ಆರ್.ಟಿ) ವತಿಯಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಪೋತ್ಸಾಹ ನೀಡುವ ಸಲುವಾಗಿ ಪ್ರೌಢಶಾಲಾ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಸೆಂಬರ್ ೧೭ ರಂದು ಎನ್ಎಮ್ಎಮ್ಎಸ್ ಪರೀಕ್ಷೆ ನಡೆಸಲಾಗುವುದು.
ಈ ಪರೀಕ್ಷೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಪರೀಕ್ಷಾ ನೋಂದಣಿಗೆ ನಿಗದಿಪಡಿಸಿದ್ದ ತಾ.೩೦ ರ ದಿನಾಂಕವನ್ನು ಅ.೪ ರ ವರೆಗೆ ವಿಸ್ತರಿಸಲಾಗಿದೆ. ಈ ಪರೀಕ್ಷೆಗೆ ತಮ್ಮ ಶಾಲಾ ಮಕ್ಕಳನ್ನು ಆನ್ಲೈನ್ ಮೂಲಕ ಅಕ್ಟೋಬರ್ ೪ ರೊಳಗಾಗಿ ನೋಂದಾಯಿಸಲು ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಕ್ರಮ ವಹಿಸಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ) ಎಂ.ಚAದ್ರಕಾAತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪರೀಕ್ಷೆ ನೋಂದಣಿಗೆ ಈಗಾಗಲೇ ಶಿಕ್ಷಣ ಇಲಾಖೆಯು ನೀಡಿರುವ ಲಿಂಕ್ ಬಳಸಿ ಹೆಚ್ಚಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಬೇಕು ಎಂದು ತಿಳಿಸಿದ್ದಾರೆ. ಎನ್ಎಮ್ಎಮ್ಎಸ್. ಪರೀಕ್ಷೆ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನೋಡಲ್ ಅಧಿಕಾರಿ ಡಯಟ್ ಸಂಸ್ಥೆಯ ಉಪನ್ಯಾಸಕಿ ಕೆ.ಎಸ್.ನಳಿನಾಕ್ಷಿ, (ಮೊ: ೮೧೩೯೯ ೫೬೮೦೨), ತಾಲೂಕು ನೋಡಲ್ ಅಧಿಕಾರಿ ಕೆ.ಬಿ.ರಾಧಾಕೃಷ್ಣ, ಸೋಮವಾರಪೇಟೆ ತಾಲೂಕು (ಮೊ: ೯೮೮೦೦ ೯೯೬೦೧), ಎಂ.ಎಚ್.ಹರೀಶ್, ಮಡಿಕೇರಿ ತಾಲೂಕು (ಮೊ: ೯೯೮೦೬ ೬೯೦೩೨) ಮಾರ್ಗರೇಟ್, ವೀರಾಜಪೇಟೆ ತಾಲೂಕು (ಮೊ: ೯೪೪೮೭೦೬೮೦೪) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ನೋಂದಣಿಯ ಲಿಂಕ್ ಇಂತಿದೆ: hಣಣಠಿs://ಥಿouಣu.be/ಚಿಏ೨೫ಒಜ೬ಇ_ಕಿo