ಮೈಸೂರು, ಸೆ. ೩೦ : ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ಅ. ೧೫ ರಂದು ರಾಜ್ಯಮಟ್ಟದ `ದಸರಾ ಕವಿಗೋಷ್ಠಿ'ಯನ್ನು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ನಾಡಿನ ಆಸಕ್ತ ಕವಿ-ಕವಯತ್ರಿಯರಿಂದ ಕವನಗಳ ಆಹ್ವಾನಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿದ, ತಮ್ಮ ಸ್ವ-ರಚಿತ ೨೦ ಸಾಲುಗಳ ಮಿತಿಯೊಳಗಿನ ಎರಡು ಕವಿತೆಗಳು / ಗಜಲ್ಗಳನ್ನು ಅಥವಾ ೬ ಸಾಲಿನ ಮಿತಿಯೊಳಗಿನ ಆರು ಚುಟುಕು / ಹನಿಗವಿತೆಗಳನ್ನು ಸಂಘಟಕರಿಗೆ ಕಳುಹಿಸಿಕೊಡಬೇಕು. ಆಯ್ಕೆಯಾದ ಕವಿತೆಗಳ ಕವಿಗಳಿಗೆ ರಾಜ್ಯಮಟ್ಟದ ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು.
ಆಸಕ್ತ ಕವಿಗಳು ಅ. ೨ ರೊಳಗೆ ತಲುಪುವಂತೆ ಸ್ವರಚಿತ ಎರಡು ಕವಿತೆಗಳನ್ನು ತಮ್ಮ ಸಂಕ್ಷಿಪ್ತ ಪರಿಚಯದೊಂದಿಗೆ ಟಿ. ಸತೀಶ್ ಜವರೇಗೌಡ, ವಿಸ್ಮಯ ಬುಕ್ ಹೌಸ್, ೪೪೨/೧೦, ಕೃಷ್ಣ ಬೇಕರಿ ಬಿಲ್ಡಿಂಗ್, ರಾಮಸ್ವಾಮಿ ಸರ್ಕಲ್, ಮೈಸೂರು- ೫೭೦೦೦೪ - ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೯೮೮೦೨೬೪೬೭೮ ಸಂಪರ್ಕಿಸಬಹುದು.