ಮಡಿಕೇರಿ, ಸೆ. ೩೦: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ವಾತಾವರಣ ದಲ್ಲಿ ಬದಲಾವಣೆ ಕಂಡುಬAದಿದ್ದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾವೇರಿ ನೀರಿನ ಹೋರಾಟದ ಕಾವಿನ ನಡುವೆ ಕೊಡಗಿನಲ್ಲಿ ಮಳೆಯಾಗುತ್ತಿರುವುದು ಕಾವೇರಿ ಅವಲಂಬಿತ ಪ್ರದೇಶದ ಜನರಲ್ಲಿ ಸಂತಸ ಮೂಡಿಸುತ್ತಿವೆ.
ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವಾರು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದಲೂ ಸತತ ಮಳೆಯಾಗುತ್ತಿದೆ. ಕೆಲವು ಗ್ರಾಮೀಣ ಭಾಗಗಲ್ಲಿ ಅದರಲ್ಲೂ ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಮಳೆಯ ರಭಸ ಹೆಚ್ಚಿರುವುದಾಗಿಯೂ ವರದಿಯಾಗಿದೆ. ಈ ನಡುವೆ ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ರಭಸದ ಮಳೆಯಾಗಲಿರುವುದಾಗಿ ಹವಾಮಾನ ಇಲಾಖೆಯ ಮಾಹಿತಿಗಳು ತಿಳಿಸಿವೆ. ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆಯನ್ನು ಹವಾಮಾನ ಇಲಾಖೆ ಹೊರಡಿಸಿದೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸುಮಾರು ಒಂದು ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಕಳೆದ ಮೂರು ದಿನಗಳಿಂದಲೂ ಸತತ ಮಳೆಯಾಗು ತ್ತಿರುವುದರಿಂದ ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಮತ್ತೆ ಮಳೆಗಾಲದ ವಾತಾವರಣ ಎದುರಾದಂತಾಗಿದೆ.
ಆತAಕ ಸೃಷ್ಟಿಸಿದ ಸತೀಶ್ ಹೇಳಿಕೆ
ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರ ಅನುಮತಿ ನೀಡಿದರೆ ಕೊಡಗು, ಮಂಡ್ಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡುವುದಾಗಿ ಲೋಕೋಪಯೋಗಿ ಸಚಿತ ಸತೀಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿದ್ದಾರೆ.
(ಮೊದಲ ಪುಟದಿಂದ) ಸಚಿವರ ಹೇಳಿಕೆ ಜಿಲ್ಲೆಯ ಜನರಲ್ಲಿ ಇದೀಗ ಆತಂಕಕ್ಕೂ ಕಾರಣವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಸರಕಾರ ಅನುಮತಿ ನೀಡಿದಲ್ಲಿ ಬೆಳಗಾಂ ಶುಗರ್ಸ್ ವತಿಯಿಂದಲೇ ಮೋಡ ಬಿತ್ತನೆ ಮಾಡುವ ಚಿಂತನೆಯಿದೆ ಈ ಬಗ್ಗೆ ಸರಕಾರದ ಅನುಮತಿ ಕೇಳಲಾಗುವುದು ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿ ದ್ದಾರೆ. ಸಚಿವರ ಹೇಳಿಕೆ ಪ್ರಚಾರವಾ ದಂತೆ ಜಿಲ್ಲೆಯಲ್ಲಿ ಈ ಬಗ್ಗೆ ರೈತರು - ಬೆಳೆಗಾರರಿಂದ ಆಕ್ಷೇಪ ವ್ಯಕ್ತಗೊಳ್ಳುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಚರ್ಚೆ ಬಿರುಸು ಪಡೆದಿದೆ. ಕೊಡಗಿಗೆ ಈ ಸಮಯದಲ್ಲಿ ಕೃತಕ ಮಳೆಯ ಅಗತ್ಯವಿಲ್ಲ. ಇದರಿಂದ ಜಿಲ್ಲೆಯ ಜನರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಅಸಮಾಧಾನಗಳು ಕೇಳಿ ಬರುತ್ತಿವೆ.