ಚೆಟ್ಟಳ್ಳಿ, ಅ. ೧: ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಮುಂದಿನ ಆಡಳಿತದ ಚುಕ್ಕಾಣಿ ಹಿಡಿಯಲಿದೆ.

ಸಂಘದ ೨೦೨೩-೨೪ನೇ ಸಾಲಿನ ಮುಂದಿನ ೫ ವರ್ಷಗಳಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.

೨ ಮಹಿಳಾ ಮೀಸಲು ಸ್ಥಾನಕ್ಕೆ ಕೊಂಗೇಟಿರ ವಾಣಿ ಕಾಳಪ್ಪ ಹಾಗೂ ಮುಳ್ಳಂಡ ಮಾಯಮ್ಮ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಪಿ.ಟಿ.ಗಣೇಶ್, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಜೆ.ಅರ್. ರವಿ, ಹಿಂದುಳಿದ ವರ್ಗದ ಪ್ರವರ್ಗ- ಎ ಸ್ಥಾನಕ್ಕೆ ಬಿ.ಎಂ.ಕಾಶಿ ಹಾಗೂ ಪ್ರವರ್ಗ ಬಿ ಸ್ಥಾನಕ್ಕೆ ಪೇರಿಯನ ಪೂಣಚ್ಚ, ಸಾಲಗಾರರಲ್ಲದ ಸ್ಥಾನಕ್ಕೆ ಮರದಾಳು ಚೇತನ್ (ಹರಿ) ಅವಿರೋಧ ಆಯ್ಕೆಯಾದರು.

ಉಳಿದ ಸಾಲಗಾರ ಕೇತ್ರದ ೫ ಸ್ಥಾನಕ್ಕೆ ೭ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕಾರಣ ಚುನಾವಣೆ ನಡೆಯಿತು. ಒಟ್ಟು ೫೩೦ ಮತಗಳಲ್ಲಿ ೯ ಅಸಿಂಧು ಮತಗಳಾದವು. ಬಲ್ಲಾರಂಡ ಮಣಿ ಉತ್ತಪ್ಪ(೪೯೭ ಮತಗಳು), ನಂಜಪ್ಪ ಪುತ್ತರಿರ (೪೭೩), ವೇಣುಗೋಪಾಲ ಬಟ್ಟೀರ(೪೬೫), ದಯಾನಂದ ಅಕ್ಕಾರಿ (೪೦೬), ಪ್ರಜ್ವಲ್ ಕರ್ಣಯ್ಯನ (೪೨೨), ತೀರ್ಥ ಕುಮಾರ್ ಚೆಟ್ಟೋಳಿರ (೧೨೩), ತಿಮ್ಮಯ್ಯ ಪುತ್ತರಿರ (೧೧೦), ಮತ ಪಡೆದುಕೊಂಡರು.

ಕಳೆದ ಅವಧಿಗಳಲ್ಲಿ ಉತ್ತಮ ಕೆಲಸಗಳ ಮೂಲಕ ಸಂಘದ ಬೆಳವಣಿಗೆ ಶ್ರಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡುವುದಾಗಿ ಬಲ್ಲಾರಂಡ ಮಣಿ ಉತ್ತಪ್ಪ ‘ಶಕ್ತಿ’ಗೆ ಪ್ರತಿ ಕ್ರಿಯಿಸಿದರು.

ಚುನಾವಣಾ ಅಧಿಕಾರಿಗಳಾಗಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿ.ಜಿ.ಲೋಕೇಶ್ ಹಾಗೂ ಉಪಚುನಾವಣಾಧಿಕಾ ರಿಗಳಾಗಿ ಚೆಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ ಕಾರ್ಯನಿವಹಿಸಿದರು.