ಮಡಿಕೇರಿ, ಅ. ೧: ಹೆಬ್ಬಾಲೆಯ ಸೋಮವಾರಪೇಟೆ ರೈತ ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಸೋಮಣ್ಣ ಅವರ ನೇತೃತ್ವದಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಯೋಜನಾ ಸಂಯೋಜಕಿ ದೀಕ್ಷ ರೈ ಸಂಸ್ಥೆಗೆ ಸುಮಾರು ೬೪,೦೦೦ ಸಾವಿರ ಲಾಭ ಬಂದಿದ್ದು, ೯೦೩ ಜನ ಸದಸ್ಯತ್ವವನ್ನು ಪಡೆದಿದ್ದಾರೆ ಎಂದರು. ರೈತರು ಇನ್ನು ಹೆಚ್ಚಿನ ರೀತಿಯಲ್ಲಿ ಸದಸ್ಯತ್ವವನ್ನು ಹೊಂದಿ ರೈತ ಉತ್ಪಾದಕರ ಕಂಪನಿಯಿAದ ಪ್ರಯೋಜನವನ್ನು ಪಡೆಯಬೇಕು ಎಂದರು. ಸಮಾರಂಭದಲ್ಲಿ ನಿರ್ದೇಶಕರು, ರೈತರು ಹಾಜರಿದ್ದರು.