ಗೋಣಿಕೊಪ್ಪ ವರದಿ, ಸೆ. ೩೦: ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ಮಕ್ಕಳ ದಸರಾ ಸ್ಪರ್ಧೆ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ. ದಿನಾಂಕ ಶೀಘ್ರವಾಗಿ ಪ್ರಕಟಿಸಲಿದ್ದು, ಅಕ್ಟೋಬರ್ ೮ ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

೧-೧೦ ನೇ ತರಗತಿವರೆಗಿನ ಮೂರು ವಿಭಾಗಕ್ಕೆ ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಛದ್ಮವೇಷ ಸ್ಪರ್ಧೆಯಲ್ಲಿ ೧-೩ ವಯಸ್ಸಿಗೆ (ಕೃಷ್ಣನ ವೇಷ), ೪-೫ ವಯೋಮಿತಿಗೆ ಕೃಷ್ಣನ ವೇಷ, ೬-೧೦ ಪೌರಾಣಿಕ, ೧೦-೧೫ ಪೌರಾಣಿಕ ಸ್ಪರ್ಧೆ ನಡೆಯಲಿದೆ.

ಸಾಮೂಹಿಕ ವಿಭಾಗದಲ್ಲಿ ವಿಜ್ಞಾನ ಸ್ಪರ್ಧೆ ನಡೆಯಲಿದ್ದು, ಒಂದು ತಂಡದಲ್ಲಿ ಇಬ್ಬರು ಭಾಗವಹಿಸಬಹುದಾಗಿದೆ. ೫-೭, ೮-೧೦, ತರಗತಿಯವರು ಪಾಲ್ಗೊಳ್ಳಬಹುದಾಗಿದೆ.

೬ ಜನರ ತಂಡಕ್ಕೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ನಡೆಯಲಿದೆ. ೧-೧೦ನೇ ತರಗತಿಯ ೩ ವಿಭಾಗಕ್ಕೆ ನಡೆಯಲಿದೆ. ಜಾನಪದ ನೃತ್ಯಕ್ಕೆ ೧೦-೧೨ ಜನರ ತಂಡ ಪಾಲ್ಗೊಳ್ಳಬಹುದಾಗಿದೆ. ೧-೫, ೬-೧೦ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.

ಸಿನಿಮಾ ಹಾಡಿಗೆ ನೃತ್ಯ ಕಾರ್ಯಕ್ರಮದಲ್ಲಿ ೧೦-೧೨ ಜನರು ಪಾಲ್ಗೊಳ್ಳಬಹುದಾಗಿದ್ದು, ೧-೫, ೬-೧೦ ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೭೩೪೯೦೬೪೮೮೬, ೭೬೧೯೨೭೦೫೨೯, ೯೯೪೫೭೯೪೪೧೪ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ತಿಳಿಸಿದ್ದಾರೆ.