ಶ್ರೀಮಂಗಲ, ಸೆ. ೩೦: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯ ಮಾಯಣಮಾಡ ಮಂದಯ್ಯ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ನಾಲ್ಕು ವಿದ್ಯಾರ್ಥಿಗಳಿಗೆ ಮಚ್ಚಮಾಡ ದಿವಂಗತ ಉತ್ತಯ್ಯ (ನಿವೃತ್ತ ಮುಖ್ಯೋಪಾಧ್ಯಾಯರು) ಅವರ ಜ್ಞಾಪಕಾರ್ಥವಾಗಿ ಮೊಮ್ಮಗನಾದ ನಾಲ್ಕೇರಿ ಗ್ರಾಮದ ಕಟ್ಟೇರ ರೋಹನ್ ಸುಬ್ರಮಣಿ ದಂಪತಿ ರೂ. ೩೦ ಸಾವಿರ ಪ್ರೋತ್ಸಾಹ ಧನವನ್ನು ವಿತರಿಸಿದರು.
ಈ ಸಂದರ್ಭ ಕಟ್ಟೇರ ಸುಬ್ರಮಣಿ, ಕಟ್ಟೇರ ಮೀರಾ, ಕಟ್ಟೇರ ಕಿಸಾನ್, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಪೋಷಕರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.