ಶನಿವಾರಸAತೆ, ಸೆ. ೨೯: ಸಮಾಜದಲ್ಲಿ ಶಿಕ್ಷಕರು, ಸೈನಿಕರು, ಕೃಷಿಕರು ಸದಾ ವಂದನೀಯರಾಗಿದ್ದು ಯಾವ ವೃತ್ತಿಯೇ ಆಗಲಿ ಅದರ ಹಿಂದೆ ಶಿಕ್ಷಕರ ಋಣವಿದೆ. ಬದುಕು ರೂಪಿತವಾಗುವುದೇ ಉತ್ತಮ ಅಡಿಪಾಯದಿಂದಾದರೂ ಆ ಅಡಿಪಾಯ ಸುಭದ್ರವಾಗಿರಬೇಕು. ಶಿಕ್ಷಕರು ಸದಾ ಸ್ಮರಣೀಯರು ಎಂದು ಆಲೂರು-ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣಾ ಕೃಷ್ಣಾನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
“ನಾನು ಮಾಡುತ್ತೇನೆ-ನೀವೂ ಮಾಡಿ’’ ಎನ್ನುವ ಸಮಾಜಸೇವೆಯ ಧ್ಯೇಯ ರೋಟರಿಯವರದ್ದು. ಉತ್ತಮ ಕೆಲಸ ಸಹಭಾಗಿತ್ವ ಹಾಗೂ ಸಹಕಾರದಿಂದ ನಡೆಯಬೇಕು. ಪರಸ್ಪರ ಸಹಕಾರಿ ಮನೋಭಾವದಿಂದ ಸಮಾಜಮುಖಿ ಕೆಲಸಗಳನ್ನು ರೋಟರಿ ಮಾಡುತ್ತದೆ ಎಂದರು.
ಸಮಾರAಭದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ನಿವೃತ್ತ ಉಪನ್ಯಾಸಕಿ ರೋಹಿಣಿ ರವಿ, ಕಾಳುಮೆಣಸು ಕೃಷಿಕ ಕೆ.ಎಂ. ಕಾಂತರಾಜ್ ಹಾಗೂ ಹಿಪ್ಪಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಆರ್. ಕಾಂತರಾಜ್ ಅವರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಎ.ಹೆಚ್. ಚಂದ್ರಕಾAತ್ ಮಾತನಾಡಿ, ದೇಶ ಕಟ್ಟುವ ಕೆಲಸ ಸುಲಭವಲ್ಲ; ಉತ್ತಮ ಅಡಿಪಾಯ ಮುಖ್ಯ ಎಂದರು.
ಸAಸ್ಥೆ ಕಾರ್ಯದರ್ಶಿ ಸೋಮಶೇಖರ್ ವಾರ್ಷಿಕ ವರದಿ ಮಂಡಿಸಿದರು. ರೊಟೇರಿಯನ್ ವಸಂತಕುಮಾರಿ ಪ್ರಾರ್ಥಿಸಿದರು. ರೊಟೇರಿಯನ್ಗಳಾದ ಬೀನಾ ಅರವಿಂದ್, ಲೈಲಾ ಯಶವಂತ್, ಕೆ.ಪಿ. ಜಯಕುಮಾರ್ ಪ್ರಶಸ್ತಿ ಪಡೆದವರನ್ನು ಪರಿಚಯಿಸಿದರು. ನಿರ್ದೇಶಕರು, ರೊಟೇರಿಯನ್ ಕುಟುಂಬಸ್ಥರು ಹಾಜರಿದ್ದರು.