ವೀರಾಜಪೇಟೆ, ಸೆ. ೨೮ : ಒಂದಕ್ಕೊAದು ಚಂದದ ಗಣೇಶ ಮೂರ್ತಿಗಳು, ಅಂದ ಹೆಚ್ಚಿಸುವ ಚಿತ್ತಾಕರ್ಷಕ ಪ್ರಭಾವಳಿಗಳು, ಸುಂದರ ಕ್ಷಣ ಕಣ್ತುಂಬಿಕೊAಡ ಭಕ್ತಗಣ, ಶ್ರದ್ಧಾಭಕ್ತಿಯ ಆಚರಣೆಯೊಂದಿಗೆ ಕುಣಿದು ಕುಪ್ಪಳಿಸಿದ ಜನ, ಆಗೊಮ್ಮೆ ಹೀಗೊಮ್ಮೆ ವರುಣನ ದರ್ಶನ, ಮಳೆಯನ್ನು ಲೆಕ್ಕಿಸದೆ ಹರಿದು ಬಂದ ಜನಸಾಗರ.
ಹೌದು..ಈ ದೃಶ್ಯಗಳು ಕಂಡುಬAದಿದ್ದು ವೀರಾಜಪೇಟೆ ಐತಿಹಾಸಿಕ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಕಾರ್ಯಕ್ರಮದಲ್ಲಿ. ತಾ. ೧೭ ರ ಗಣೇಶ ಹಬ್ಬದಂದು ಏಕಕಾಲದಲ್ಲಿ ಪಟ್ಟಣದ ೨೨ ಕಡೆ ಪ್ರತಿಷ್ಠಾಪನೆಗೊಂಡಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಅನಂತ ಪದ್ಮನಾಭ ವ್ರತದ ದಿನವಾದ ಇಂದು ಸಾಮೂಹಿಕವಾಗಿ ಪಟ್ಟಣದ ಐತಿಹಾಸಿಕ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಮೂಲಕ ಉತ್ಸವ ಸಂಭ್ರಮದ ಜೊತೆಗೆ ಶ್ರದ್ಧಾಭಕ್ತಿಯಿಂದ ಸಂಪನ್ನ ಕಂಡಿತು.
ಸಾಂಪ್ರದಾಯಿಕ ಚಾಲನೆ
ಮೊದಲು ನಗರದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ೧೦೦೧ ಈಡುಗಾಯಿ ಅರ್ಪಿಸಿ ಪುಷ್ಪಾಲಂಕೃತ ವಾಹನದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಿಡಿಮದ್ದು ಸಿಡಿಸಿ ಇತರ ಸಮಿತಿಗಳು ಮೂರ್ತಿಯನ್ನು ಮಂಟಪಕ್ಕೆ ಸ್ಥಳಾಂತರಿಸಿ ಮೆರವಣಿಗೆಗೆ ಸಜ್ಜಾಗುವಂತೆ ಸಂದೇಶ ನೀಡಲಾಯಿತು.
ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿ ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಪ್ರದೇಶ ಗೌರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆಯಿತು.
ಎಲ್ಲ ಮಂಟಪಗಳಲ್ಲಿ ಗಣೇಶ ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಿದರೆ, ಶ್ರೀ ಬಸವೇಶ್ವರ ದೇವಾಲಯದ ಮಂಟಪದಲ್ಲಿ ಮಾತ್ರ ಐತಿಹಾಸಿಕ ಪ್ರತೀತಿ ಇರುವ ಹಿನ್ನೆಲೆ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಕುಳ್ಳಿರಿಸಲಾಗಿತ್ತು.
ಮೆರವಣಿಗೆಯಲ್ಲಿ ಗಡಿಯಾರ ಕಂಬದ ಶ್ರೀ ಮಹಾಗಣಪತಿ ದೇವಾಲಯ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಅರಸುನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ,
(ಮೊದಲ ಪುಟದಿಂದ) ತೆಲುಗರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ, ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಪುರಸಭೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟದ ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ, ನೆಹರು ನಗರದ ನೇತಾಜಿ ಉತ್ಸವ ಸಮಿತಿ, ಗಣಪತಿ ಬೀದಿಯ (ಪಂಜರಪೇಟೆ) ಶ್ರೀ ಮಹಾಗಣಪತಿ ಸೇವಾ ಸಂಘ, ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಚಿಕ್ಕಪೇಟೆ (ಛತ್ರಕೆರೆ) ಅಂಜನೇಯ ದೇವಾಲಯದ ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಸುಂಕದ ಕಟ್ಟೆಯ ಶ್ರೀ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ಗೌರಿಕೆರೆಯ ಶ್ರೀ ಗಣಪತಿ ಉತ್ಸವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ವಿಘ್ನೇಶ್ವರ ಸೇವಾ ಸಮಿತಿ, ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ, ಕೆ.ಬೋಯಿಕೇರಿಯ ಕೆಂಕೇರಮ್ಮ ದೇವಾಲಯದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಗಾಂಧಿ ನಗರ ಗಣಪತಿ ಸೇವಾ ಸಮಿತಿಯ ಮಂಟಪಗಳು ನಗರದ ರಾಜಬೀದಿಯಲ್ಲಿ ಸಾಗಿದವು.
ನಗರದ ಆದಿಪೂಜಿತ ಗಣಪತಿ ದೇವಾಲಯ ಸಮಿತಿಯ ಮಂಟಪದ ಹಿಂದೆ ಒಂದೊAದೆ ಮಂಟಪಗಳು ಸಾಗುವಂತೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿತ್ತು. ಪ್ರತಿ ಸಮಿತಿಗೂ ಸಂಖ್ಯೆ ನೀಡಲಾಗಿತ್ತು. ಅದರ ಆಧಾರದಲ್ಲಿ ಆಯಾ ಪ್ರದೇಶದಿಂದ ಹೊರಟ ಮಂಟಪಗಳು ಸರತಿ ಸಾಲಿನಲ್ಲಿ ಸಾಗಿದವು.
ಮನೆ ಮಾಡಿದ ಸಂಭ್ರಮ
ಗಣೇಶ ಮೂರ್ತಿಗಳ ವಿಸರ್ಜನೆಗೆ ಮುನ್ನ ನಗರದ ರಾಜಬೀದಿಯಲ್ಲಿ ನಡೆಯುವ ಪ್ರತಿ ಸಮಿತಿಗಳ ಮಂಟಪದ ಮೆರವಣಿಗೆ ಕಂಡು ಜನ ಪುಳಕಿತರಾದರು.