ಮಡಿಕೇರಿ, ಸೆ. ೨೮ : ಮುಸ್ಮಿಂ ಸಮುದಾಯದವರ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ಈದ್ ಮಿಲಾದ್ ಅನ್ನು ಜಿಲ್ಲೆಯಾದ್ಯಂತ ಸಂಭ್ರಮದಿAದ ಆಚರಿಸಲಾಯಿತು. ಈ ಪ್ರಯುಕ್ತ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬದ್ರಿಯಾ ಜಮಾಅತ್ ಆಶ್ರಯದಲ್ಲಿ ಎ.ವಿ. ಶಾಲೆಯ ಬಳಿಯಿಂದ ಕಾವೇರಿ ಹಾಲ್‌ವರೆಗೆ ಮಕ್ಕಳ ದಫ್ ಕುಣಿತವನ್ನು ಒಳಗೊಂಡು ಮೆರವಣಿಗೆ ನಡೆಯಿತು. ಮೆರವಣಿಗೆಯ ನಂತರ ಕಾವೇರಿ ಹಾಲ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜಮಾಅತ್ ಅಧ್ಯಕ್ಷ ಅಮೀನ್ ಮೊಯ್ಸಿನ್ ವಹಿಸಿದ್ದರು. ಅತಿಥಿಗಳಾಗಿ ಬದ್ರಿಯಾ ಜಮಾಅತ್ ಧರ್ಮಗುರುಗಳಾದ ಹಾಫಿಳ್ ಫಲಜರ‍್ರಹ್ಮನ್ ಸಖಾಫಿ, ಅಶ್ರಫ್ ಮಿಸ್ಬಾಹಿ, ಬದ್ರಿಯಾ ಜಮಾಅತ್ ಮಾಜಿ ಅಧ್ಯಕ್ಷರಾದ ಎಂ.ಜಿ. ಯೂಸುಫ್ ಹಾಜಿ, ಎಂ.ಹೆಚ್. ಮಹಮ್ಮದ್ ಹಾಜಿ, ಎಂಎA ಜಮಾಅತ್ ಅಧ್ಯಕ್ಷ ಹಾರೂನ್ ಹಾಜಿ, ಬದ್ರಿಯಾ ಜಮಾಅತ್ ಕಾರ್ಯದರ್ಶಿ ಎಂ. ಉಮ್ಮರ್ ಹಾಜಿ, ಬದ್ರಿಯಾ ಜಮಾಅತ್ ಮಾಜಿ ಉಪಾಧ್ಯಕ್ಷ ಎಂ.ಎA. ಇಸ್ಮಾಯಿಲ್, ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ, ಜಾಮೀಯಾ ಮಸೀದಿ ಮುಖ್ಯಸ್ಥ ನಜೀರ್, ಸದಸ್ಯರಾದ ರವೂಫ್, ಇಮ್ರಾನ್, ಎಂಎA ಮಸೀದಿ ಧರ್ಮಗುರು ಹಮೀದ್ ಮದನಿ, ಭಟ್ಕಳ್ ಮಸೀದಿ ಧರ್ಮಗುರು ಅಲಿ ಲತೀಫಿ ಪಾಲ್ಗೊಂಡಿದ್ದರು. ಬಳಿಕ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಅನ್ನದಾನ ನೆರವೇರಿತು.ಪರಸ್ಪರ ಬ್ರಾತೃತ್ವವನ್ನು ವೃದ್ಧಿಸುವ ನಂಬಿಕೆ ಮತ್ತು ಆಚಾರ ವಿಚಾರಗಳನ್ನು ಸಮಾನವಾಗಿ ಗೌರವಿಸುವ ಸಮಾನ ಮನಸ್ಕರಿಂದ ಸುಂಟಿಕೊಪ್ಪ ಹೋಬಳಿಯ ೭ನೇ ಹೊಸಕೋಟೆಯಲ್ಲಿ ಮಾದರಿಯಾದ ಮತ್ತು ಶ್ಲಾಘನೀಯ ಕಾರ್ಯಕ್ರಮ ನಡೆಯಿತು.

೭ನೇ ಹೊಸಕೋಟೆಯು ಶ್ರೀಮಹಾಗಣಪತಿ ದೇವಸ್ಥಾನ ಹಾಗೂ ಮಸೀದಿ ಮತ್ತು ಚರ್ಚ್ ಕೆಲವೇ ಹೆಜ್ಜೆಗಳ ಅಂತರದಲ್ಲಿ ಹೊಂದಿದೆ. ಇಲ್ಲಿ ಶ್ರೀ ಗಣೇಶೋತ್ಸವ ಅತ್ಯಂತ ಸಂಭ್ರಮವಾಗಿ ನಡೆದು ಬುಧವಾರ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಮುಸ್ಲಿಂ ಸಮುದಾಯದ ನೂರಾರು ಯುವಕರು ಮೆರವಣಿಗೆಯುದ್ದಕ್ಕೂ ತಂಪು ಪಾನಿಯವನ್ನು ಸರಬರಾಜು ಮಾಡುವ ಮೂಲಕ ಮೆರವಣಿಗೆಗೆ ಸಾಥ್ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಇದನ್ನು ಅತ್ಯಂತ ಆತ್ಮೀಯವಾಗಿ ಸ್ವೀಕರಿಸಿದ ಹಿಂದೂ ಬಾಂಧವರು ಗುರುವಾರದಂದು ಈದ್ ಮಿಲಾದ್ ಮೆರವಣಿಗೆಯ ಸಂದರ್ಭ ತಂಪು ಪಾನಿಯವನ್ನು ಸರಬರಾಜು ಮಾಡಿ ಸ್ನೇಹದ ಬೇಸುಗೆಯನ್ನು ಗಟ್ಟಿಗೊಳಿಸಿದ್ದಾರೆ.

(ಮೊದಲ ಪುಟದಿಂದ) ೭ನೇ ಹೊಸಕೋಟೆಯಲ್ಲಿ ನಡೆದ ಈ ೨ ಕಾರ್ಯಕ್ರಮಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಬಾರಿ ಪ್ರಮಾಣದಲ್ಲಿ ಮೆಚ್ಚುಗೆಯ ಸಂದೇಶಗಳು ಹರಿದು ಬರುತ್ತಿವೆ. ಈ ರೀತಿಯ ಧರ್ಮಾತೀತ ಮತ್ತು ಜಾತ್ಯತೀತ ನೆಲೆಗಟ್ಟಿನಲ್ಲಿ ಪರಸ್ಪರ ನಂಬಿಕೆ, ಭಾವನೆಗಳನ್ನು ಗೌರವಿಸಿದಾಗ ನಾವು ರಾಮರಾಜ್ಯದ ರೂವಾರಿಗಳಾಗುತ್ತೇವೆ. ಇಂತಹ ಒಳ್ಳೆಯ ಕೆಲಸ ಇನ್ನೂ ಅನೇಕ ಒಳ್ಳೆಯ ಮನಸ್ಸುಗಳಿಗೆ ಪ್ರೇರಣೆ ನೀಡಿ ಸುಖಿ ಮತ್ತು ಸಮೃದ್ಧಿಯ ಸಮಾಜವನ್ನು ಕಟ್ಟುವಲ್ಲಿ ಪಣತೊಡಲು ಮುನ್ನುಡಿಯಾಗಲಿ ಎಂದು ಎರಡು ಸಮುದಾಯದ ಜನರು ಆಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ವ್ಯಾಪ್ತಿಯಲ್ಲಿ

ಸೋಮವಾರಪೇಟೆ : ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ನಸುಕಿನ ವೇಳೆಯಿಂದಲೇ ಹಬ್ಬದ ಸಂಭ್ರಮ ಕಂಡುಬAದಿರು. ಬೆಳಿಗ್ಗೆ ಪ್ರಾರ್ಥನಾ ಮಂದಿರಗಳಲ್ಲಿ ಮೌಲೂದ್ ಪಾರಾಯಣದೊಂದಿಗೆ ಹಬ್ಬಾಚರಣೆಗೆ ಚಾಲನೆ ನೀಡಲಾಯಿತು.

ನಂತರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧ್ವಜಾರೋಹಣ ನೆರವೇರಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ದಫ್ ನೃತ್ಯ, ಈದ್ ಜಾಥಾಗಳು ನಡೆದವು.

ಸಮೀಪದ ಕಲ್ಕಂದೂರು ಮುಯ್ಯುದ್ದೀನ್ ಜುಮಾ ಮಸೀದಿ ಯಲ್ಲಿ ಬೆಳಿಗ್ಗೆ ೪.೩೦ ಕ್ಕೆ ಮೌಲೂದ್ ಪಾರಾಯಣದೊಂದಿಗೆ ಈದ್ ಹಬ್ಬವನ್ನು ಪ್ರಾರಂಭಿಸಿ ನಮಾಜ್ ನಂತರ ಧ್ವಜರೋಹಣ ನೆರವೇರಿಸ ಲಾಯಿತು.

(ಮೊದಲ ಪುಟದಿಂದ) ನಂತರ ಕಲ್ಕಂದೂರು ಪ್ರಮುಖ ಬೀದಿಗಳಲ್ಲಿ ಮಕ್ಕಳ ದಫ್‌ನೊಂದಿಗೆ ಮಿಲಾದ್ ಜಾಥಾ ನಡೆಯಿತು. ಜಾಥಾದಲ್ಲಿ ಮುಯ್ಯುದ್ದೀನ್ ಜುಮಾ ಮಸೀದಿಯ ಖತೀಬರಾದ ಹಸೈನಾರ್ ಮದನಿ ಉಸ್ತಾದ್, ತಾಜುದ್ದೀನ್ ಉಸ್ತಾದ್ ಹಾಗೂ ಜಮಾತ್ ಅಧ್ಯಕ್ಷರಾದ ಇಬ್ರಾಹಿಂ, ಕಾರ್ಯದರ್ಶಿ ಫಾರೂಕ್, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಜಮಾಅತ್‌ನ ಸದಸ್ಯರು ಭಾಗವಹಿಸಿದ್ದರು.

ಮಧ್ಯಾಹ್ನ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ವಾರ್ಷಿಕ ಸ್ವಲಾತ್ ಮಜ್ಲಿಸ್ ನಡೆಯಿತು. ಸಾನ್ನಿಧ್ಯವನ್ನು ಧಾರ್ಮಿಕ ಗುರುಗಳಾದ ಬಹು ಸುನ್ನಿ ಕುಟುಂಬದ ವಿಧ್ವಾನ್ ಸರಾದ ಸಯ್ಯದ್ ಅಹಮದ್ ಖಾಸಿಂ ತಂಜ್ಞಳ್ ಆತೂರು ವಹಿಸಿದರು.

ಪಟ್ಟಣದ ಜಲಾಲಿಯಾ ಮಸೀದಿಯಲ್ಲಿ, ಹನಫಿ ಜಾಮಿಯ ಮಸೀದಿ, ಬಜೆಗುಂಡಿಯ ಖಿಳಾರಿಯಾ ಮಸೀದಿ, ಹೊಸತೋಟ, ತಣ್ಣೀರುಹಳ್ಳ, ಕಾಗಡಿಕಟ್ಟೆಯ ಮಸೀದಿಗಳಲ್ಲೂ ಸಂಭ್ರಮದ ಈದ್ ಮಿಲಾದ್ ನೆರವೇರಿತು. ಹಬ್ಬದ ಅಂಗವಾಗಿ ಮಸೀದಿಗಳನ್ನು ವಿದ್ಯುತ್ ದೀಪ, ಬಂಟಿAಗ್ಸ್ಗಳಿAದ ಅಲಂಕರಿಸ ಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನಂತರ ಅನ್ನದಾನ ಜರುಗಿತು.