ಚೆಯ್ಯಂಡಾಣೆ, ಸೆ. ೨೮: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿಯ ಮುಖ್ಯ ಬೀದಿಯಲ್ಲಿ ಮಿಲಾದ್ ಸಂದೇಶ ಜಾಥಾ ನಡೆಯಲಿದೆ.
ವರ್ಷಂಪ್ರತಿ ನಡೆಸಿಕೊಂಡು ಬರುವ ಮಿಲಾದ್ ಸಂದೇಶ ಜಾಥಾ ತಾ. ೩೦ ರಂದು ೩ ಗಂಟೆಗೆ ಮಡಿಕೇರಿ ಗದ್ದುಗೆಯಿಂದ ಆರಂಭಗೊAಡು ನಗರದ ಹಳೆಯ ಬಸ್ಸು ನಿಲ್ದಾಣದ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹಮದ್ ಮದನಿ ಗುಂಡಿಕೆರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.