ಭಾಗಮAಡಲ ಸೆ. ೨೮: ಭಾಗಮಂಡಲದಲ್ಲಿ ಅಕ್ಟೋಬರ್ ೧೮ ರ ನಸುಕಿನ ಜಾವ ನಡೆಯುವ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಜಾತ್ರಾ ಮಹೋತ್ಸವ ಸಿದ್ಧತಾ ಸಭೆ ಇಂದು ಭಾಗಮಂಡಲದ ಮುಡಿಶೆಡ್ ಕಟ್ಟಡದಲ್ಲಿ ವಿಧಾನಸಭಾ ಸದಸ್ಯ ಎ.ಎಸ್ ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ಜಾತ್ರೆಯಲ್ಲಿ ಯಾವುದೇ ಲೋಪದೋಷವಾಗದಂತೆ ಎಲ್ಲರೂ ಒಗ್ಗಟ್ಟಿನಿಂದ ತೀರ್ಥೋದ್ಭವ ಆಚರಣೆ ಮಾಡುವಂತಾಗಬೇಕು. ಕಾವೇರಿ ಜಾತ್ರೆ ಜಿಲ್ಲೆಗೆ ಮಾದರಿಯಾಗಿ ನಡೆಯಬೇಕು ಎಂದು ಪೊನ್ನಣ್ಣ ಹೇಳಿದರು.

ಪ್ರಸಕ್ತ ಜಾತ್ರೆ ಸಂದರ್ಭ ಎಂದಿನAತೆ ಕೊಡಗು ಏಕೀಕರಣ ರಂಗದಿAದ ಅನ್ನ ಸಂತರ್ಪಣೆ, ಭಾಗಮಂಡಲ - ತಲಕಾವೇರಿ ನಡುವೆ ತಾ, ೧೭ ಹಾಗೂ ೧೮ ರಂದು ಎಲ್ಲ ಭಕ್ತಾದಿಗಳಿಗೆ ಉಚಿತ ಬಸ್ ವ್ಯವಸ್ಥೆ, ಭಾಗಮಂಡಲದಲ್ಲಿ ಮೂರು ದಿನಗಳ ಕಾಲ ಎಲ್ಲ ವಾಹನಗಳಿಗೂ ಉಚಿತ ಪಾರ್ಕಿಂಗ್ ವ್ಯವಸ್ಥೆ, ಜಾತ್ರೆೆ ಸಂದರ್ಭ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡುವಂತೆಯೂ ನಿರ್ಧರಿಸ ಲಾಯಿತು. ಅಲ್ಲದೆ, ರಸ್ತೆ ಗುಂಡಿಗಳನ್ನು ಮುಚ್ಚುವಂತೆಯೂ ಶಾಸಕರು ನಿರ್ದೇಶಿಸಿದರು. ಪೊಲೀಸ್, ಸಾರಿಗೆ, ಅರಣ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು ಪೂರೈಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜೊತೆಗೆ ಅಗತ್ಯ ಶೌಚಾಲಯ ವ್ಯವಸ್ಥೆ ಮಾಡಬೇಕು. ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಜ್ಞ ವೈದ್ಯರನ್ನು ನಿಯೋಜಿಸುವುದು, ಆಂಬ್ಯುಲೆನ್ಸ್ ಸೇವೆ ಒದಗಿಸುವಂತೆ ಪೊನ್ನಣ್ಣ ಸೂಚಿಸಿದರು. ಈ ಬಾರಿ ಪವಿತ್ರ ತೀರ್ಥೋದ್ಭವ ಮಧ್ಯರಾತ್ರಿ ಸಂಭವಿಸುವುದರಿAದ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು. ವಿದ್ಯುತ್ ಮಾರ್ಗಗಳನ್ನು ಸರಿಪಡಿಸಬೇಕು.

(ಮೊದಲ ಪುಟದಿಂದ) ಅಗತ್ಯ ಲೈಟಿಂಗ್ ವ್ಯವಸ್ಥೆಗೆ ಕ್ರಮವಹಿಸಬೇಕು ಎಂದು ಶಾಸಕರು ಹೇಳಿದರು.

ಮಡಿಕೇರಿಯಿಂದ ತಲಕಾವೇರಿ ಯವರೆಗೆ, ನಾಪೋಕ್ಲುವಿನಿಂದ ಭಾಗಮಂಡಲ ಹಾಗೆಯೇ ಭಾಗಮಂಡಲ-ಕರಿಕೆ ರಸ್ತೆ ಸರಿಪಡಿಸಬೇಕು. ಗಿಡಗಂಟಿಗಳನ್ನು ಕಡಿಯಬೇಕು. ಜೊತೆಗೆ ರಸ್ತೆ ಬದಿ ಬೆಳೆದಿರುವ ಮರದ ಕೊಂಬೆಗಳನ್ನು ಕಡಿಯುವಂತಾಗಬೇಕು ಎಂದು ಶಾಸಕರು ಸೂಚಿಸಿದರು.

ಕೊಡವ ಜನಾಂಗದ ಪಾದಯಾತ್ರೆಗಳ ನಾಲ್ಕು ಬಸ್ಸುಗಳು ಬರುತ್ತವೆ .ಒಂದು ಬಸ್ಸು ತಲಕಾವೇರಿಗೆ ತೆರಳಲು ಅವಕಾಶ ಕೊಡಿ ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜ ಮಾತನಾಡಿ ರಸ್ತೆ ಗುಂಡಿ ಮುಚ್ಚುವ ಕೆಲಸದ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸಬೇಕು. ಹಾಗೆಯೇ ಹೆಚ್ಚುವರಿ ಚಾಲಕರನ್ನು ನಿಯೋಜಿಸಬೇಕು ಎಂದರು. ತಜ್ಞ ವೈದ್ಯರನ್ನು ನಿಯೋಜಿಸುವುದರ ಜೊತೆಗೆ ಐಸಿಯು ವ್ಯವಸ್ಥೆ ಕಲ್ಪಿಸುವಂತೆ ಸಲಹೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಮಾತನಾಡಿ, ಸ್ವಚ್ಛತೆ ಕುಡಿಯುವ ನೀರು, ಬೀದಿ ದೀಪ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ ಎಂದರು.

ಒAದು ತಿಂಗಳು ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕೊಡಿ ಎಂಬ ಒತ್ತಾಯ ಕೇಳಿ ಬಂದಿತು. ಪ್ರತಿಯಾಗಿ ಕಾಳನ ರವಿ ಮಾತನಾಡಿ ರೂ. ೩೫,೦೦೦ ಸ್ವಚ್ಛತೆಗೆ ಖರ್ಚಾಗುತ್ತಿದೆ. ಒಟ್ಟಾರೆ ಗ್ರಾಮ ಪಂಚಾಯಿತಿಗೆ ಎರಡು ಮೂರು ಲಕ್ಷ ಖರ್ಚು ಆಗುತ್ತಿದೆ. ಪಾರ್ಕಿಂಗ್ ಶುಲ್ಕ ವಸೂಲಿ ನಿಲ್ಲಿಸಲು ಸಾಧ್ಯವಿಲ್ಲ. ಅಕ್ಟೋಬರ್ ೧೭, ೧೮, ೧೯ ರ ಮೂರು ದಿನಗಳ ಕಾಲ ಪಾರ್ಕಿಂಗ್ ಶುಲ್ಕ ಪಡೆಯುವುದಿಲ್ಲ ಎಂದು ಖಚಿತಪಡಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸೂರ್ತಲೆ ಕಾಶಿ ಪುರಾತನ ಕಾಲದಿಂದಲೂ ಇಲ್ಲಿನ ಸ್ಥಳೀಯರು ಕೇಶಮುಂಡನ ಮಾಡಿ, ಪಿಂಡ ಪ್ರದಾನ ಮಾಡಿಕೊಂಡು ಬರುತ್ತಿದ್ದಾರೆ. ಕುಂಕುಮಾರ್ಚನೆ ಮಾಡಿ ಅಗಸ್ತö್ಯ ಮುನಿಗಳಿಗೆ ಪೂಜೆ ಸಲ್ಲಿಸುತ್ತಾರೆ. ತಲಕಾವೇರಿಯ ಕುಂಡಿಕೆ ಬಳಿ ಕುಂಕುಮಾರ್ಚನೆಗೆ ಅವಕಾಶ ಮಾಡಬೇಕು ಎಂದು ಕೋರಿದರು.

ಅಮೆ ಪಾಲಾಕ್ಷ ಮಾತನಾಡಿ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಅವಕಾಶ ಮಾಡಬೇಕು. ಪೂಜೆ ವಿಧಿ ವಿಧಾನಗಳನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಸಲಹೆ ನೀಡಿದರು.

ಎಂ.ಬಿ.ದೇವಯ್ಯ ಮಾತನಾಡಿ ತಲಕಾವೇರಿ ಜಾತ್ರಾ ಮಹೋತ್ಸವ ನಂತರ ಅಷ್ಟಮಂಗಲ ಪ್ರಶ್ನೆಗಳಿಗೆ ಸಂಬAಧಿಸಿದAತೆ ಸಾಧಕ ಬಾಧÀಕಗಳ ಬಗ್ಗೆ ಚರ್ಚಿಸಿ ಪರಿಹರಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಹಾಗೆಯೇ ‘ದುಡಿ’ ನುಡಿಸುವವರಿಗೆ ತಲಕಾವೇರಿಗೆ ತೆರಳಲು ವಾಹನ ಪಾಸ್ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ಕುದುಕುಳಿ ಭರತ್ ಮಾತನಾಡಿ ತಣ್ಣಿಮಾನಿ-ತಲಕಾವೇರಿ ರಸ್ತೆಯನ್ನು ಸರಿಪಡಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ತಿಳಿಸಿದರು.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ ಜಾತ್ರಾ ದಿನದಂದು ಭಾಗಮಂಡಲದಿAದ ತಲಕಾವೇರಿಯವರೆಗೆ ಖಾಸಗಿ ಬಸ್‌ಗಳ ಓಡಾಟಕ್ಕೂ ಅವಕಾಶ ಮಾಡಬೇಕು ಎಂದು ಕೋರಿದರು. ಅಖಿಲ ಕೊಡವ ಸಮಾಜದ ಯುವ ವಿಭಾಗದ ಅಧ್ಯಕ್ಷ ಚಮ್ಮಟೀರÀ ಪ್ರವೀಣ್ ಉತ್ತಪ್ಪ ಮಾತನಾಡಿ ಕಾವೇರಿ ಮಾತೆ ಕೊಡಗಿಗೆ ಸೀಮಿತಳÀಲ್ಲ. ಇಡೀ ದಕ್ಷಿಣ ರಾಜ್ಯಗಳ ಜೀವನದಿ ಆಗಿದ್ದು, ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬAಧ ರಾಜ್ಯಕ್ಕೆ ರಜೆ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.

ಯುಕೋ ಅಧ್ಯಕ್ಷ ಮಂಜು ಚಿಣ್ಣಪ್ಪ ಮಾತನಾಡಿ ಕುಂಕುಮಾರ್ಚನೆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗದAತೆ ಎಚ್ಚರವಹಿಸಬೇಕು. ತಲಕಾವೇರಿ ಕ್ಷೇತ್ರದ ಪಾವಿತ್ರö್ಯತೆ ಉಳಿಯಬೇಕು ಎಂದರು.

ತೆನ್ನಿರಾ ಮೈನಾ ಮಾತನಾಡಿ ಮಡಿಕೇರಿಯಿಂದ ಭಾಗಮಂಡಲ ರಸ್ತೆ ಸರಿಪಡಿಸಬೇಕು. ಕಾಮಗಾರಿ ಲೋಪ ಆಗದಂತೆ ಎಚ್ಚರವಹಿಸಬೇಕು ಎಂದರು.

ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗ ವತಿಯಿಂದ ಕಳೆದ ೨೫ ವರ್ಷಗಳಿಂದ ಅನ್ನಸಂತರ್ಪಣೆ ಏರ್ಪಡಿಸಿಕೊಂಡು ಬರಲಾಗಿದೆ. ಅದನ್ನು ಮುಂದುವರಿಸಲಾಗುವುದು ಎಂದು ಬಿ.ಎಸ್.ತಮ್ಮಯ್ಯ ಹೇಳಿದರು.

ತೀರ್ಥ ತೆಗೆದುಕೊಂಡು ಹೋಗುವ ವಾಹನಗಳಿಗೆ ತೀರ್ಥೋದ್ಭವವಾಗಿ ಒಂದು ಗಂಟೆಯ ನಂತರ ಅವಕಾಶ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ಮೇದಪ್ಪ ತಿಳಿಸಿದರು.

ವಿಧಾನ ಪರಿಷತ್ ಸದಸ್ಯÀ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ ತೀರ್ಥ ತೆಗೆದುಕೊಂಡು ಹೋಗುವ ವಾಹನಗಳಿಗೆ ಅವಕಾಶ ಮಾಡಿಕೊಡಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ ಈ ಬಾರಿ ರಾತ್ರಿ ವೇಳೆ ತೀರ್ಥೋದ್ಭವ ಸಂಭವಿಸುವುದರಿAದ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದರು.

ಮನು ಮುತ್ತಪ್ಪ ಮಾತನಾಡಿ ತಲಕಾವೇರಿ ಜಾತ್ರಾ ಮಹೋತ್ಸವ ದಿನದಿಂದ ಕಿರು ಸಂಕ್ರಮಣದವರೆಗೆ ಭಾಗಮಂಡಲದಲ್ಲಿ ವಾಹನದ ಶುಲ್ಕ ವಸೂಲಿ ಮಾಡಬಾರದು ಎಂದು ಸಲಹೆ ಮಾಡಿದರು.

ಸುನಿಲ್ ಪತ್ರಾವೋ ಮಾತನಾಡಿ ಭಾಗಮಂಡಲ-ತಲಕಾವೇರಿ ರಸ್ತೆ ಮಾರ್ಗದಲ್ಲಿ ಮರದ ಕೊಂಬೆಗಳನ್ನು ಕಡಿಯುವಂತಾಗಬೇಕು ಎಂದು ಸಲಹೆ ಮಾಡಿದರು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಗ್ರಾ.ಪಂ. ಉಪಾಧ್ಯಕ್ಷ ಗಂಗಮ್ಮ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ ದೇವಾಲಯದ ತಕ್ಕ ಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಡಿವೈಎಸ್ಪಿ ಎಂ. ಜಗದೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಭಕ್ತಾದಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಮಾಜಗಳÀ ಮುಖಂಡರು ಹಾಜರಿದ್ದರು.

- ಕುಯ್ಯಮುಡಿ ಸುನಿಲ್