ಬೆಂಗಳೂರು ಬಂದ್ನಿAದಾಗಿ ಅಂದಾಜು ರೂ. ೨,೦೦೦ ಕೋಟಿ ನಷ್ಟ
ಬೆಂಗಳೂರು, ಸೆ. ೨೮: ತಾ. ೨೯ ರಂದು ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ಹೇಳಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಬಂದ್ಗೆ ಕರೆ ನೀಡಿರುವ ಸಂಘಟನೆಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನ್ಯಾಯಾಲಯದ ನಿರ್ದೇಶನದಂತೆ ಬಂದ್ ಆಚರಿಸುವಂತಿಲ್ಲ. ಅಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಮೊನ್ನೆ ಬೆಂಗಳೂರು ಬಂದ್ ವೇಳೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಇದನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಭಟನೆ ಮಾತ್ರ ನಡೆಸಬಹುದು. ಆದರೆ, ಬಂದ್ಗೆ ಅವಕಾಶ ನೀಡುವುದಿಲ್ಲ. ಪೊಲೀಸರಿಗೆ ವಿಶೇಷ ಸೂಚನೆ ನೀಡುವ ಅಗತ್ಯವಿಲ್ಲ, ಏನು ಮಾಡಬೇಕೆಂದು ಅವರಿಗೆ ತಿಳಿದಿದೆ ಎಂದು ಅವರು ಹೇಳಿದರು. ತಾ. ೨೬ ರಂದು ಬೆಂಗಳೂರು ಬಂದ್ನಿAದಾಗಿ ಅಂದಾಜು ೧,೫೦೦ ರಿಂದ ೨,೦೦೦ ಕೋಟಿ ರೂಪಾಯಿ ನಷ್ಟವಾಗಿದೆ. ಈ ಮಧ್ಯೆ, ಇನ್ನೊಂದು ಬಾರಿ ಬಂದ್ ಆಚರಿಸಿದರೆ, ಅದು ಆರ್ಥಿಕತೆಯ ದೃಷ್ಟಿಯಿಂದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಇದನ್ನು ಸಂಘ-ಸAಸ್ಥೆಗಳು ಅರಿಯಬೇಕು. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು, ಪ್ರತಿಭಟನೆ ನಡೆಸಲಿ. ಆದರೆ, ಬಂದ್ ಮಾಡಲು ಯತ್ನಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾನೂನು ಚೌಕಟ್ಟಿನಲ್ಲಿ ನಡೆಸುವ ಪ್ರತಿಭಟನೆಗೆ ಅವಕಾಶ ನೀಡಲಾಗುವುದು. ತಮಿಳುನಾಡು ಸರ್ಕಾರದೊಂದಿಗೆ ಯಾವುದೇ ರಾಜಿ ಇಲ್ಲ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಮತ್ತು ಜೆಡಿಎಸ್ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿವೆ. ಸರ್ಕಾರವನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು. ಈಮಧ್ಯೆ, ಶುಕ್ರವಾರ ಬಲವಂತದ ಬಂದ್ ಮಾಡಬಾರದು ಎಂದು ಕರ್ನಾಟಕದ ಡಿಜಿಪಿ ಮತ್ತು ಐಜಿ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಎಸ್ಪಿಗಳು ಮತ್ತು ಡಿಸಿಪಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಪ್ರತಿಭಟನಾಕಾರರು ಅಂಗಡಿ ಮುಂಗಟ್ಟು ಬಂದ್ ಮಾಡಲು ಮುಂದಾದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಲ್ಲ : ಖರ್ಗೆ
ರಾಯಪುರ, ಸೆ. ೨೮: ಮಹಿಳಾ ಮೀಸಲಾತಿ ಮಸೂದೆ ಮತ್ತೊಂದು ‘ಜುಮ್ಲಾ’ (ಖಾಲಿ ಭರವಸೆ) ಆಗಿದ್ದು, ಜನರು ಇದನ್ನು ನಂಬಿ ಮತ ಹಾಕುತ್ತಾರೆ ಎಂದು ಬಿಜೆಪಿ ಭಾವಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. ೩೩ ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ೨೦೩೪ ರವರೆಗೆ ಜಾರಿಗೆ ತರಲಾಗುವುದಿಲ್ಲ ಮತ್ತು ಭಾರತೀಯ ಜನತಾ ಪಕ್ಷ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಖರ್ಗೆ ಆರೋಪಿಸಿದ್ದಾರೆ. ಇಂದು ಬಲೋದಬಜಾರ್-ಭಟಪರಾ ಜಿಲ್ಲೆಯ ಸುಮಾಭಟ ಗ್ರಾಮದಲ್ಲಿ ಛತ್ತೀಸ್ಗಢ ಸರ್ಕಾರ ಆಯೋಜಿಸಿದ್ದ ರೈತ-ಕಾರ್ಮಿಕರ ಸಮಾವೇಶ ಉದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಐದು ವರ್ಷಗಳಲ್ಲಿ ಮಾಡಿದ್ದನ್ನು ಬಿಜೆಪಿ ೧೫ ವರ್ಷಗಳಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಸಂವಿಧಾನ ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜನ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಬೆಂಬಲಿಸಬೇಕು ಎಂದರು. ಮಹಿಳಾ ಮೀಸಲಾತಿ ಮಸೂದೆ ಇತ್ತೀಚೆಗಷ್ಟೇ ಅಂಗೀಕಾರವಾಗಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ೭೩ ಮತ್ತು ೭೪ನೇ ತಿದ್ದುಪಡಿ ಮೂಲಕ ಪಂಚಾಯಿತಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರು ಎಂದರು. ರಾಜೀವ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ತಂದಾಗ, ಬಿಜೆಪಿ ಅದನ್ನು ವಿರೋಧಿಸಿತು. ಒಂದು ಸದನದಲ್ಲಿ ನಮಗೆ ಬಹುಮತ ಇದ್ದಿದ್ದರಿಂದ ಪಾಸ್ ಆಯಿತು. ಆದರೆ ಇನ್ನೊಂದು ಸದನದಲ್ಲಿ ಬಿಜೆಪಿ ಅದನ್ನು ವಿರೋಧಿಸಿತು ಮತ್ತು ಮಸೂದೆಗೆ ಸೋಲಾಯಿತು" ಎಂದು ಖರ್ಗೆ ಹೇಳಿದರು. ಅದೇ ಬಿಜೆಪಿ ಈಗ ಎದೆ ಬಡಿದುಕೊಂಡು ಈ ಮಸೂದೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ. ಆದರೆ ಅವರು ಇದನ್ನು ಯಾವಾಗ ಜಾರಿಗೆ ತರಲು ಹೊರಟಿದ್ದಾರೆ? ೨೦೨೪ ರಲ್ಲಿ ಅದು ಆಗುವುದಿಲ್ಲ ಮತ್ತು ೨೦೨೯ ರಲ್ಲಿ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಇದನ್ನು ಜಾರಿಗೆ ತರಲಾಗುವುದು ಎಂದು ಅವರೇ ಹೇಳಿದ್ದಾರೆ. ಇದರರ್ಥ ಇದನ್ನು ೨೦೩೪ ರಲ್ಲಿ ಜಾರಿಗೆ ತರಲಾಗುವುದು ಎಂದು ಖರ್ಗೆ ತಿಳಿಸಿದರು.
ಯುಎಸ್ ವೀಸಾ ಅರ್ಜಿಗಳ ಪೈಕಿ ಶೇ.೧೦ ರಷ್ಟು ಭಾರತೀಯರದ್ದು
ನವದೆಹಲಿ, ಸೆ. ೨೮: ಭಾರತದಲ್ಲಿರುವ ಅಮೇರಿಕಾ ಎಂಬಸಿ ನೀಡುವ ವಲಸೆಯೇತರ ವೀಸಾ ವಿಭಾಗದಲ್ಲಿ ೧ ಮಿಲಿಯನ್ ಸಂಖ್ಯೆಯನ್ನು ದಾಟಿದೆ. ಭಾರತಕ್ಕೆ ಅಮೇರಿಕಾ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟಿ, ಒಂದು ದಶಲಕ್ಷದ ವೀಸಾವನ್ನು, ಎಂಐಟಿಯಲ್ಲಿರುವ ತಮ್ಮ ಪುತ್ರನ ಪದವಿ ಕಾರ್ಯಕ್ರಮದಲ್ಲಿ ಭಾಗಿಯಾವುದಕ್ಕೆ ಅಮೇರಿಕಾಗೆ ತೆರಳಲಿರುವ ದಂಪತಿಗೆ ಹಸ್ತಾಂತರಿಸಿದರು. ಈ ಮೂಲಕ ೨೦೨೩ ರಲ್ಲಿ ಅಮೇರಿಕಾ, ಭಾರತೀಯರಿಗೆ ನೀಡಲಾಗುವ ವಲಸೆಯೇತರ ವೀಸಾದ ಸಂಖ್ಯೆ ೧ ಮಿಲಿಯನ್ ದಾಟಿದೆ. ಇದೇ ವೇಳೆ ಭಾರತೀಯರು ಪಡೆಯುವ ಅಮೇರಿಕಾದ ವಲಸೆಯೇತರ ವೀಸಾ ಕುರಿತ ಕೆಲವು ಅಚ್ಚರಿಯ ಹಾಗೂ ಮುಖ್ಯವಾದ ಅಂಕಿ-ಅAಶಗಳನ್ನು ಅಮೇರಿಕಾ ಮಿಷನ್ ಹಂಚಿಕೊAಡಿದೆ. ಜಾಗತಿಕವಾಗಿ ಎಲ್ಲಾ ರೀತಿಯ ಅಮೇರಿಕಾದ ವೀಸಾಗಳನ್ನು ಕೇಳಿ ಬರುವ ಅರ್ಜಿಗಳ ಪೈಕಿ ಭಾರತದ್ದು ಶೇ. ೧೦ ರಷ್ಟು ಅರ್ಜಿಗಳಿರುತ್ತವೆ. ವಿದ್ಯಾರ್ಥಿ ವೀಸಾ ಶೇ. ೨೦ ರಷ್ಟಿದ್ದರೆ, ಎಲ್ಲಾ ರೀತಿಯ ಹೆಚ್&ಎಲ್ ವರ್ಗ (ಉದ್ಯೋಗದ) ವೀಸಾ ಅರ್ಜಿಗಳು ಶೇ.೬೫ ರಷ್ಟಿದೆ ಎಂದು ಅಮೇರಿಕಾ ಹೇಳಿದೆ. ೨೦೧೯ ರಲ್ಲಿ ಕೋವಿಡ್ ಅವಧಿಗೂ ಮುನ್ನ ಹಾಗೂ ೨೦೨೨ಕ್ಕೆ ಹೋಲಿಕೆ ಮಾಡಿದರೆ, ಈಗ ಪ್ರಕ್ರಿಯೆಗೆ ಒಳಪಟ್ಟಿರುವ ಅಮೇರಿಕಾ ವೀಸಾ ಅರ್ಜಿಗಳ ಪ್ರಮಾಣ ಶೇ. ೨೦ ರಷ್ಟು ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ೧೦ ಅರ್ಜಿಗಳು ಅಮೇರಿಕಾ ವೀಸಾ ಕೇಳಿ ಬಂದಿದ್ದರೆ ಅದರಲ್ಲಿ ೧ ಭಾರತದ್ದಾಗಿರುತ್ತದೆ ಎಂದು ಎಂಬಸಿ ಮಾಹಿತಿ ನೀಡಿದೆ. ಭಾರತೀಯರಿಗೆ ವೀಸಾ ಹಸ್ತಾಂತರಿಸಿ ಮಾತನಾಡಿದ ಅಮೇರಿಕ ರಾಯಭಾರಿ, "ನಾನು ಇಂದು ಸಂತೋಷವಾಗಿದ್ದೇನೆ, ಭಾರತ, ಭಾರತೀಯರು ಮತ್ತು ಯುನೈಟೆಡ್ ಸ್ಟೇಟ್ಸ್ಗೆ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ವೀಸಾಗಳ ಪ್ರಕ್ರಿಯೆಯನ್ನು ಉತ್ತಮಗೊಳಿಸೋಣ ಎಂದು ಹೇಳಿದ್ದಾರೆ ನಾವು ನಮ್ಮ ವ್ಯವಸ್ಥೆಯನ್ನು ಬದಲಾಯಿಸಿದ್ದೇವೆ, ನಾವು ಕಠಿಣ ಮತ್ತು ಚುರುಕಾಗಿ ಕೆಲಸ ಮಾಡಿದ್ದೇವೆ ಮತ್ತು ಈ ವರ್ಷ ನಾವು ಒಂದು ಮಿಲಿಯನ್ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ" ಎಂದು ಹೇಳಿದ್ದಾರೆ.