ಕೂಡಿಗೆ, ಸೆ, ೨೯ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಳೆದ ಎರಡೂ ದಿನಗಳಿಂದ ಜೇನುಕಲ್ಲು ಬೆಟ್ಟ ಮತ್ತು ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಕಾಡಾನೆಗಳು ಸೂರಪ್ಪ ಅವರ ಜಮೀನಿಗೆ ದಾಳಿ ಮಾಡಿ ಕಟಾವಿಗೆ ಬಂದ ಒಂದು ಎಕರೆಯಷ್ಟು ಮೆಕ್ಕೆಜೋಳದ ಬೆಳೆಯನ್ನು ತುಳಿದು ತಿಂದು ನಷ್ಟಪಡಿಸಿವೆ.

ಸ್ಥಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಭರತ್ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.