ಸಿದ್ದಾಪುರ, ಸೆ. ೨೭: ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬವನ್ನು ತಾ. ೨೮ ರಿಂದ (ಇಂದಿನಿAದ) ಅ. ೧ ರವರೆಗೆ ಸಂಭ್ರಮ ಸಡಗರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮುನವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ತಾ. ೨೮ರಂದು ಬೆಳಿಗ್ಗೆ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು. ಎಂ. ಮುಸ್ತಫಾ ಹಾಜಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಮಿಲಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ತಾ. ೨೯ರಂದು ಸಂಜೆ ೪ ಗಂಟೆಗೆ ಸಿದ್ದಾಪುರ ಸುತ್ತಮುತ್ತಲ ಮಹಲ್ಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದಿಂದ ನೆಲ್ಯಹುದಿಕೇರಿಯವರೆಗೆ ಬೃಹತ್ ಮಿಲಾದ್ ಸಂದೇಶ ಜಾಥಾ ಮೆರವಣಿಗೆ ನಡೆಯಲಿದೆ.
ತಾ. ೩೦ ಹಾಗೂ ಅ. ೧೧ ರವರೆಗೆ ಬೆಳಗಿನಿಂದ ಸಂಜೆವರೆಗೆ ಹಳೆ ವಿದ್ಯಾರ್ಥಿಗಳು ಹಾಗೂ ಮದರಸ ವಿದ್ಯಾರ್ಥಿಗಳಿಂದ ಮೌಲುದ್ ಪಾರಾಯಣ, ದಫ್ ಪ್ರದರ್ಶನ, ಮಜ್ಲಿಸ್, ಖವಾಲಿ, ಗಾಯನ, ಧಾರ್ಮಿಕ ಸಾಂಸ್ಕೃತಿಕ ಹಾಗೂ ಫ್ಲವರ್ ಶೋ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದ್ದು ಸ್ಪರ್ಧೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿಸ್ತರಿಸಲಾಗುವುದು ಎಂದು ಮಿಲಾದ್ ಆಚರಣಾ ಸಮಿತಿಯ ಅಧ್ಯಕ್ಷ ವಿ.ಕೆ. ಬಶೀರ್ ತಿಳಿಸಿದ್ದಾರೆ.