ದೇಶದ ೫೦೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಗಾಲ

ನವದೆಹಲಿ, ಸೆ. ೨೭: ದೇಶದ ೭೧೮ ಜಿಲ್ಲೆಗಳ ಮೇಲ್ವಿಚಾರಣೆ ಮಾಡುತ್ತಿರುವ ಭಾರತೀಯ ಹವಾಮಾನ ಇಲಾಖೆ ಈ ಪೈಕಿ ೫೦೦ಕ್ಕೂ ಹೆಚ್ಚು ಜಿಲ್ಲೆಗಳು ಪ್ರಸ್ತುತ ಬರಗಾಲದಂತಹ ಪರಿಸ್ಥಿತಿ ಎದುರಿಸುತ್ತಿವೆ ಎಂದು ಹೇಳಿದೆ. ಈ ಜಿಲ್ಲೆಗಳಲ್ಲಿ ಸಾಧಾರಣದಿಂದ ತೀವ್ರ ಬರಗಾಲದ ವರದಿಯಾಗಿದೆ. ಇದರಿಂದ ಆಹಾರ ದಾಸ್ತಾನಿಗೆ ತೊಂದರೆ ಅಥವಾ ಇತರ ಕೆಲವು ನಷ್ಟವೂ ಸಂಭವಿಸಬಹುದು ಎಂದು ಹೇಳಿದೆ. ಡೌನ್ ಟು ಅಥ್‌ನ ವಿಶ್ಲೇಷಣಾ ವರದಿಯ ಪ್ರಕಾರ, ಈ ಮಾಹಿತಿಯನ್ನು ಹವಾಮಾನ ಇಲಾಖೆಯು ೨೦೨೩ರ ಆಗಸ್ಟ್ ೨೦ ಮತ್ತು ೨೦೨೩ರ ಸೆಪ್ಟೆಂಬರ್ ೨೪ರ ನಡುವೆ ಬಿಡುಗಡೆ ಮಾಡಿದ ಪ್ರಮಾಣಿತ ಮಳೆ ಸೂಚ್ಯಂಕ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಹವಾಮಾನ ಇಲಾಖೆಯು ಮೂಲಕ ಬರ-ತರಹದ ಸಂದರ್ಭಗಳನ್ನು ಅಧ್ಯಯನ ಮಾಡುತ್ತದೆ.

ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಸಂಸದ

ಬೆAಗಳೂರು, ಸೆ. ೨೭: ಜನತಾದರ್ಶನದ ವೇಳೆ ನಡೆದ ಗಲಾಟೆಗೆ ಸಂಬAಧಿಸಿದAತೆ ಕೋಲಾರದ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮುನಿಸ್ವಾಮಿ ಅವರು, ಕಾಂಗ್ರೆಸ್ ಸಚಿವ, ಕೋಲಾರ ಶಾಸಕ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿರುದ್ಧ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಬುಧವಾರ ದೂರು ನೀಡಿದ್ದಾರೆ. ನಗರಾಭಿವೃದ್ಧಿ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ, ಎಸ್ಪಿ ಎಂ.ನಾರಾಯಣ ಅವರ ವಿರುದ್ಧ ಬಿಜೆಪಿ ಸಂಸದ ರಾಜ್ಯಪಾರಿಗೆ ದೂರು ನೀಡಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷದಿಂದ ಎನ್.ಇ.ಪಿ. ರದ್ದು

ಅರಸೀಕೆರೆ, ಸೆ. ೨೭: ರಾಜ್ಯದ ಹಲವು ಕಡೆಗಳಲ್ಲಿ ಎನ್‌ಇಪಿ ಜಾರಿ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಅನೇಕ ಕಡೆಗಳಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ರಾಜ್ಯದಲ್ಲಿ ಎನ್‌ಇಪಿಗೆ ಪೂರಕ ವಾತಾವರಣ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ೨೦೨೧ ರಲ್ಲಿ ಎನ್‌ಇಪಿ ಜಾರಿ ಮಾಡಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೇ ಜಾರಿ ಮಾಡಲಾಗಿದೆ. ಸಾಕಷ್ಟು ನ್ಯೂನತೆ ಇರುವುದರಿಂದ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದರು. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ರಾಷ್ಟಿçÃಯ ಶಿಕ್ಷಣ ನೀತಿಯನ್ನು ರದ್ದು ಮಾಡುವುದಾಗಿ ಬಜೆಟ್‌ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದರಂತೆ ಮುಂದಿನ ವರ್ಷದಿಂದ ಎನ್‌ಇಪಿ ರದ್ದುಪಡಿಸಿ, ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲಾಗುವುದು ಎಂದು ಹೇಳಿದರು.

ಕೆಆರ್‌ಎಸ್‌ನಿಂದ ಹನಿ ನೀರು ಬಿಡುವುದಿಲ್ಲ-ಡಿ.ಕೆ.ಶಿ.

ಬೆಂಗಳೂರು, ಸೆ. ೨೭: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡುವುದಿಲ್ಲ. ರಾಜ್ಯದ ರೈತರ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ತಮಿಳುನಾಡಿಗೆ ನಿತ್ಯ ೩,೦೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. ಕೆಆರ್‌ಎಸ್ ಅಣೆಕಟ್ಟೆಯಿಂದ ಸಾಮಾನ್ಯವಾಗಿ ನಿತ್ಯ ೨,೦೦೦ ಕ್ಯೂಸೆಕ್ ನೀರು ಹೊರ ಹೋಗುತ್ತದೆ. ಉಳಿದ ಸಾವಿರ ಕ್ಯೂಸೆಕ್ ನೀರನ್ನು ಪರ್ಯಾಯ ಮೂಲದಿಂದ ಬಿಡಲಾಗುವುದು. ಕೆಆರ್‌ಎಸ್ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ಹನಿ ನೀರನ್ನೂ ಬಿಡುವುದಿಲ್ಲ ಎಂದರು. ವಿರೋಧ ಪಕ್ಷಗಳ ನಾಯಕರು ರಾಜ್ಯದಲ್ಲಿ ಹೋರಾಟ ನಡೆಸುವ ಬದಲಿಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ ಮಾಡಲಿ ಎಂದರು.

ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಬದ್ಧ-ಹೆಚ್.ಡಿ.ಡಿ.

ಬೆಂಗಳೂರು, ಸೆ. ೨೭: ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೂ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಜೆಡಿಎಸ್ ಬದ್ಧವಾಗಿದೆ ಎಂದು ಜೆಡಿಎಸ್ ರಾಷ್ಟಿçÃಯ ಅಧ್ಯಕ್ಷ ಹೆಚ್.ಡಿ. ದೇವೆಗೌಡ ಹೇಳಿದರು. ದೇಶದ ಎಲ್ಲೆಡೆ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಜಾತ್ಯತೀತ ನಿಲುವಿನ ಇತರೆ ಪಕ್ಷಗಳನ್ನು ಬಲಿಕೊಡುತ್ತಿದೆ. ೨೦೧೮ರಲ್ಲಿ ಅತಂತ್ರ ವಿಧಾನಸಭೆ ನಡುವೆ ನಿರ್ಮಾಣವಾದಾಗ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ವಿನಿಂತಿಸಿದ್ದರು. ಒಂದೇ ವರ್ಷದಲ್ಲಿ ತಮ್ಮ ನಿಲುವು ಬದಲಾಯಿಸಿ ಶಾಸಕರ ರಾಜೀನಾಮೆಗೆ ಸಹಕರಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದರು. ಕಾಂಗ್ರೆಸ್‌ನ ಇಂತಹ ದ್ವಿಮುಖ ನೀತಿಯ ವಿರುದ್ಧ ಜೆಡಿಎಸ್ ಹೋರಾಟ ನಡೆಸಿದೆ. ಆದರೆ, ಮುಸ್ಲಿಂ ಸಮುದಾಯ ಕಳೆದ ಚುನಾವಣೆಯಲ್ಲಿ ಬೆಂಬಲ ನೀಡಲಿಲ್ಲ. ಇದು ನೋವಿನ ವಿಚಾರ ಎಂದರು. ದೇಶದಲ್ಲಿ ಬಿಜೆಪಿ ಸಂಪರ್ಕವಿಲ್ಲದೇ ಇರುವ ಯಾವ ರಾಜಕೀಯ ಪಕ್ಷವೂ ಇಲ್ಲ. ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರು ತನ್ನ ಸಿದ್ಧಾಂತ, ನಿಲುವಿನಿಂದ ವಿಮುಖವಾಗದು. ಕಾಂಗ್ರೆಸ್ ದುರಾಡಳಿತದ ವಿರುದ್ಧ ರಾಜ್ಯದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಜೆಡಿಯು ಪಕ್ಷಕ್ಕೆ ರಣವೀರ್ ನಂದನ್ ರಾಜೀನಾಮೆ

ಪಾಟ್ನಾ, ಸೆ ೨೭: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ(ಯುನೈಟೆಡ್)ದ ಮಾಜಿ ಎಂಎಲ್‌ಸಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ರಣವೀರ್ ನಂದನ್ ಅವರು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸಂಘಟನೆಯಲ್ಲಿ ಅವರು ಹೊಂದಿದ್ದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜೆಡಿಯು(ಯು) ನಾಯಕರು ತಮ್ಮ ಪಕ್ಷ ಮತ್ತು ಬಿಜೆಪಿ ಸೇರಿದಂತೆ ಇತರ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಷ್ಟಿçÃಯ ಲೋಕ ಜನತಾ ದಳ(ಆರ್‌ಎಲ್‌ಜೆಡಿ) ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಹೇಳಿದ ಕೆಲವೇ ಗಂಟೆಗಳ ನಂತರ ನಂದನ್ ರಾಜೀನಾಮೆ ನೀಡಿದ್ದು, ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಜ್ರಿವಾಲ್ ಬಂಗಲೆ ನಿರ್ಮಾಣದಲ್ಲಿ ಅಕ್ರಮ ಆರೋಪ

ನವದೆಹಲಿ, ಸೆ. ೨೭: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೂತನ ಅಧಿಕೃತ ನಿವಾಸ ನಿರ್ಮಾಣಕ್ಕೆ ಸಂಬAಧಿಸಿದAತೆ ನಡೆದಿರುವ ಅಕ್ರಮಗಳು ಮತ್ತು ಅವ್ಯವಹಾರಗಳ ಕುರಿತು ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಆದರೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಈ ಆರೋಪವನ್ನು ತಿರಸ್ಕರಿಸಿದ್ದು, ಎಎಪಿಯನ್ನು ಮುಗಿಸಲು ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ. ಸಿಬಿಐನ ಭ್ರಷ್ಟಾಚಾರ ನಿಗ್ರಹ ಶಾಖೆಯು ಟೆಂಡರ್ ದಾಖಲೆಗಳು, ಗುತ್ತಿಗೆದಾರರು ಸಲ್ಲಿಸಿದ ಬಿಡ್‌ಗಳು, ಕಟ್ಟಡ ಯೋಜನೆಗಳ ಅನುಮೋದನೆ ಮತ್ತು ಮಾಡ್ಯುಲರ್ ಕಿಚನ್‌ನಂತಹ ಉನ್ನತ ವಿಶೇಷಣಗಳಿಗಾಗಿ ಕ್ಲೈಂಟ್‌ನಿAದ ಪಡೆದ ವಿನಂತಿಗಳು, ಅಧಿಕಾರಿಗಳ ಅನುಮೋದನೆ ಮತ್ತು ಶಿಫಾರಸುಗಳಿಗೆ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಪಿಡಬ್ಲ್ಯೂಡಿಗೆ ಕೇಳಿದೆ.

ಸ್ಫೋಟದಲ್ಲಿ ಎಂಟು ಜನರಿಗೆ ಗಾಯ

ಶ್ರೀನಗರ, ಸೆ. ೨೭: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಪೊಲೀಸರು ಸ್ಫೋಟದ ಹಿಂದೆ ಯಾವುದೇ ಭಯೋತ್ಪಾದಕರ ಕೈವಾಡವಿರುವುದನ್ನು ತಳ್ಳಿಹಾಕಿದ್ದಾರೆ. ಕಾಂಕ್ರೀಟ್ ಕಂಪನ ಯಂತ್ರ, ಪೋರ್ಟಬಲ್ ಜನರೇಟರ್ ಮತ್ತು ಎಣ್ಣೆಯ ಕ್ಯಾನ್ ಅನ್ನು ಸಾಗಿಸುತ್ತಿದ್ದ ‘ಲೋಡ್ ಕ್ಯಾರಿಯರ್' ವಾಹನದಲ್ಲಿ ಸ್ಫೋಟ ಸಂಭವಿಸಿದೆ ಎಂದಿದ್ದಾರೆ. ‘ಅನಂತನಾಗ್‌ನ ಲಾರ್ಕಿಪೋರಾದಲ್ಲಿ ಕಾರ್ಮಿಕರೊಂದಿಗೆ ಸಾಗಿಸುತ್ತಿದ್ದ ಸಿಮೆಂಟ್ ಮಿಶ್ರಣ ಮಾಡುವ ಕಂಪನ ಯಂತ್ರ, ಪೋರ್ಟಬಲ್ ಜನರೇಟರ್ ಮತ್ತು ಎಣ್ಣೆಯಿದ್ದ ಟಿನ್ ಕ್ಯಾನ್ ಇದ್ದ ಲೋಡ್ ಕ್ಯಾರಿಯರ್ ವಾಹನದಲ್ಲಿ ಸ್ಫೋಟ ಸಂಭವಿಸಿದೆ' ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ಎಂಟು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.