ಮಡಿಕೇರಿ, ಸೆ. ೨೭: ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಧ್ವಜಸ್ತಂಭವನ್ನು ತೆರವುಗೊಳಿಸಲು ನಗರಸಭೆ ಯತ್ನಿಸಿದ್ದು, ಇದು ಖಂಡನೀಯ. ನಗರಸಭೆ ತನ್ನ ನಿಲುವನ್ನು ಬದಲಿಸಿಕೊಳ್ಳದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಕೊಡಗು ಜಿಲ್ಲಾ ಖಾಸಗಿ ಬಸ್ಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಭರತ್ಕುಮಾರ್ ಮಾತನಾಡಿದರು. ನಮ್ಮ ಸಂಘದ ವತಿಯಿಂದ ನಿರ್ಮಿಸಲಾಗಿರುವ ಧ್ವಜಸ್ತಂಭವನ್ನು ಇಂದು ಬೆಳಿಗ್ಗೆ ನಗರಸಭೆಯಿಂದ ತೆರವುಗೊಳಿಸುವ ಪ್ರಯತ್ನ ನಡೆಯಿತು. ಈ ವೇಳೆ ನಗರಸಭಾ ಸದಸ್ಯರುಗಳಾದ ಅಮಿನ್ ಮೊಯ್ಸಿನ್, ಅರುಣ್ಶೆಟ್ಟಿ, ರಾಜೇಶ್ಯಲ್ಲಪ್ಪ ಇವರುಗಳ ಬಳಿ ನಾವು ವಿಚಾರಿಸಿದಾಗ ಅವರುಗಳಿಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನಂತರ ಮಾಹಿತಿ ಕಲೆ ಹಾಕಿದಾಗ ನಗರಸಭೆ ಸ್ಥಾಯಿಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದು ಸರಿಯಲ್ಲ. ಸಂಬAಧಿಸಿದವರಿAದ ಅನುಮತಿ ಪಡೆದೇ ನಾವು ಧ್ವಜಸ್ತಂಭ ನಿರ್ಮಿಸಿ ರಾಷ್ಟಿçÃಯ ಹಬ್ಬಗಳನ್ನು ಆಚರಿಸುತ್ತಿದ್ದೇವೆ ಎಂದು ಭರತ್ಕುಮಾರ್ ಹೇಳಿದರು.
ಮಡಿಕೇರಿ ನಗರದಲ್ಲಿ ಹಲವಾರು ಸಮಸ್ಯೆಗಳಿವೆ. ಆ ಬಗ್ಗೆ ನಗರಸಭೆ ಗಮನ ಹರಿಸುತ್ತಿಲ್ಲ. ಬದಲಿಗೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಿರ್ಮಾಣವಾಗಿರುವ ಧ್ವಜಸ್ತಂಭವನ್ನು ತೆರವುಗೊಳಿಸಲು ಮುಂದಾಗಿದೆ ಎಂದು ಅವರು ಟೀಕಿಸಿದರು. ನಗರಸಭೆಯಿಂದ ನಮಗೆ ತಂಗುದಾಣ ನಿರ್ಮಿಸಿಕೊಟ್ಟಿಲ್ಲ. ಮುಳಿಯ ಸಂಸ್ಥೆ ನಿರ್ಮಿಸಿಕೊಟ್ಟಿರುವ ತಂಗುದಾಣದ ನಿರ್ವಹಣೆಯನ್ನು ನಾವುಗಳೇ ಮಾಡುತ್ತಿದ್ದೇವೆ ಎಂದ ಅವರು ಧ್ವಜಸ್ತಂಭದ ತೆರವಿಗೆ ಮುಂದಾದರೆ ಸಂಘದ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆಯಿತ್ತರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ವಿಜಯ, ಕಾರ್ಯದರ್ಶಿ ಉಮೇಶ್, ಸಲಹೆಗಾರರಾದ ಸುಲೈಮಾನ್, ಸದಸ್ಯರಾದ ದೇವಯ್ಯ, ಪದಾಧಿಕಾರಿ ಪುರುಷೋತ್ತಮ ಉಪಸ್ಥಿತರಿದ್ದರು.