ಇಂದು ವಿಶ್ವ ರೇಬಿಸ್ ದಿನ. ಮಾರಣಾಂತಿಕ ಸೋಂಕು, ರೇಬಿಸ್‌ಗೆ ಫ್ರಾನ್ಸ್ನ ರಸಾಯನ ಶಾಸ್ತçಜ್ಞ ಮತ್ತು ಸೂಕ್ಷö್ಮಜೀವಿ ವಿಜ್ಞಾನಿ ಸರ್ ಲೂಯಿಸ್ ಪಾಶ್ಚರ್ ೧೮೮೫ ರಲ್ಲಿ ಲಸಿಕೆ ಕಂಡು ಹಿಡಿದರು. ಅವರು ೧೮೯೫ ರ ಸೆಪ್ಟೆಂಬರ್ ೨೮ ರಂದು ಮರಣ ಹೊಂದಿದರು. ಅವರು ಮರಣ ಹೊಂದಿದ ದಿನಾಂಕವನ್ನು ‘ವಿಶ್ವ ರೇಬಿಸ್ ದಿನ’ವಾಗಿ ಆಚರಿಸಲು ೨೦೦೭ ರಲ್ಲಿ ಘೋಷಿಸಲಾಯಿತು.

ಈ ವರ್ಷ ‘ಂಟಟ ಜಿoಡಿ oಟಿe, oಟಿe heಚಿಟಣh ಜಿoಡಿ ಚಿಟಟ’ ಎಲ್ಲರ ಧ್ಯೇಯವೂ ಒಂದೇ, ಎಲ್ಲರಿಗೂ ಒಂದೇ ಆರೋಗ್ಯ ಎಂಬ ಧ್ಯೇಯ ವಾಕ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

೨೦೩೦ ರ ವೇಳೆಗೆ ನಾಯಿ ಕಡಿತದಿಂದಾಗಿ ಒಬ್ಬ ವ್ಯಕ್ತಿಯೂ ಮೃತಪಡದಂತೆ ಮಾಡಲು, ಜಾಗತಿಕವಾಗಿ ಒಗ್ಗೂಡಿ ಶ್ರಮಿಸುವ ಗುರಿಯನ್ನು ಈ ಧ್ಯೇಯ ವಾಕ್ಯ ಹೊಂದಿದೆ. ಜಗತ್ತಿನಾದ್ಯಂತ ಸಮುದಾಯಗಳನ್ನು ಬೆಸೆದು, ಸೂಕ್ತ ಲಸಿಕೆಗಳೊಂದಿಗೆ, ರೇಬಿಸ್‌ನಿಂದ ಸಾವು ಪ್ರಕರಣ ಶೂನ್ಯವಾಗಿಸಲು ಕೂಡಿ ಬಲಗೊಳ್ಳುವ ಆಶಯ ಹೊಂದಲಾಗಿದೆ.

ವಿಶ್ವದಲ್ಲಿ ಪ್ರತಿವರ್ಷ ನಾಯಿ ಕಡಿತದಿಂದ ೬೦ ಸಾವಿರ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮರಣ ಪ್ರಮಾಣ ಏಷ್ಯಾ ಮತ್ತು ಆಫ್ರಿಕಾದ ರಾಷ್ಟçಗಳಲ್ಲಿ ಹೆಚ್ಚು. ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ೧ ಕೋಟಿ ೭೦ ಜನರು ನಾಯಿಗಳಿಂದ ಕಚ್ಚಿಸಿಕೊಂಡು ಪರದಾಡುತ್ತಿದ್ದಾರೆ. ಸಾಕು ನಾಯಿಗಳಿಗಿಂತ ಬೀದಿ ನಾಯಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣ. ಪ್ರತಿ ೨ ಸೆಕೆಂಡಿಗೆ ಒಬ್ಬರು ನಾಯಿ ಕಡಿತಕ್ಕೆ ಒಳಗಾದರೆ, ೩೦ ನಿಮಿಷಕ್ಕೆ ಒಬ್ಬರು ರೇಬಿಸ್‌ಗೆ ಬಲಿಯಾಗುತ್ತಿದ್ದಾರೆ.

೨೦೧೨ ರಿಂದ ೨೦೨೨ ರವರೆಗೆ ದೇಶದಲ್ಲಿ ರೇಬಿಸ್‌ನಿಂದ ೬ ಸಾವಿರದ ೬ ನೂರು ಜನರು ಮೃತಪಟ್ಟಿದ್ದಾರೆ. ೨೦೨೨ ರಲ್ಲಿ ೩೦೭ ಜನರು ಮೃತಪಟ್ಟಿದ್ದು, ಕರ್ನಾಟಕದಲ್ಲಿ ೨೯ ಜನರು ರೇಬಿಸ್‌ನಿಂದ ಜೀವ ಕಳೆದುಕೊಂಡಿದ್ದಾರೆ. ದೇಶದ ಅಂಡಮಾನ್-ನಿಕೋಬಾರ್, ಲಕ್ಷದೀಪದಲ್ಲಿ ರೇಬಿಸ್‌ನಿಂದ ಸಾವು ಘಟಿಸುತ್ತಿಲ್ಲ!

ಮೆದುಳಿನ ಜೀವಕೋಶಗಳ ಊತ, ಜ್ವರ, ಗಾಳಿಯ ಸಂವೇದನೆ ತಪ್ಪಿದ ಅನುಭವ, ನೀರು ಕಂಡರೆ ಭಯ, ಉದ್ರೇಕ ನಿಯಂತ್ರಣಕ್ಕೆ ಬಾರದಿರುವುದು, ಪ್ರಜ್ಞೆ ಕಳೆದುಕೊಳ್ಳುವುದು, ಹೀಗೆ ತಲೆನೋವು, ವಾಕರಿಕೆ, ಬಾಯಿಯಿಂದ ಜೊಲ್ಲು, ತಳಮಳ, ಆತಂಕ, ನಿದ್ರಾಹೀನತೆ ಯೊಂದಿಗೆ ಸೋಂಕು ವಿಪರೀತವಾಗಿ ಸಾವು ಸಂಭವಿಸಬಹುದು.

ಮನುಷ್ಯರಿಗೆ ರೇಬಿಸ್ ಬರಲು ಶೇ. ೯೯ ಪ್ರಕರಣಗಳಲ್ಲಿ ನಾಯಿ ಕಡಿತವೇ ಕಾರಣ. ಇತರ ಸಾಕು ಪ್ರಾಣಿಗಳೂ, ಬಾವಲಿಗಳೂ ಈ ಸೋಂಕು ಹರಡಬಲ್ಲವು. ರೇಬಿಸ್‌ನಿಂದ ಸಾವಿಗೀಡಾದ ಮಕ್ಕಳಲ್ಲಿ ೫ ರಿಂದ ೧೩ ವರ್ಷದೊಳಗಿನವರೇ ಹೆಚ್ಚು. ನಾಯಿಗಳ ವರ್ತನೆಯ ಅರಿವಿಲ್ಲದೆ ಅವುಗಳನ್ನು ಕೆಣಕಿ ಕಚ್ಚಿಸಿಕೊಂಡ ಮಕ್ಕಳೇ ಅಧಿಕ. ಈ ನಿಟ್ಟಿನಲ್ಲಿ ರೇಬಿಸ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯ.

ರೇಬಿಸ್ ನಿರೋಧಕ ಔಷಧಿಗಳ ಕುರಿತು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದು ಸುರಕ್ಷಿತ. ಇಲ್ಲದಿದ್ದರೆ ರೇಬಿಸ್ ಸೋಂಕಿತ ಪ್ರಾಣಿ ಕಚ್ಚಿದ ನಂತರ ೧ ವಾರದಿಂದ ೧ ವರ್ಷದೊಳಗೆ ಈ ಸೋಂಕು ದೇಹವನ್ನು ವ್ಯಾಪಿಸಿ ಮಾರಣಾಂತಿಕ ವಾಗಬಹುದು. ಆದ್ದರಿಂದ ಸದಾ ಜಾಗೃತರಾಗಿರೋಣ.

(ಸಂಗ್ರಹ)

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨