ಸಿದ್ದಾಪುರ, ಸೆ. ೨೭: ಕೋಳಿಗೂಡಿನಲ್ಲಿದ್ದ ಹಾವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡಲಾಯಿತು. ಅಮ್ಮತ್ತಿ ಗ್ರಾಮದ ಮಚ್ಚೆಟೀರ ದಿಲೀಪ್ ಎಂಬವರು ಬೆಳಗಿನ ಜಾವ ಕೋಳಿಗಳನ್ನು ಗೂಡಿನಿಂದ ಹೊರಬಿಡಲು ತೆರಳಿದ ಸಂದರ್ಭ ಕೋಳಿಗೂಡಿನ ಒಳಗೆ ಹಾವು ಇರುವುದು ಕಂಡುಬAದಿದೆ. ಕೂಡಲೆ ಅಮ್ಮತ್ತಿ ಗ್ರಾಮದ ಉರಗ ರಕ್ಷಕ ಬೊಪ್ಪಂಡ ರೋಶನ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಸುರಕ್ಷಿತವಾಗಿ ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.