ಮಡಿಕೇರಿ, ಸೆ. ೨೭: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ೨ನೇ ಹಂತÀ ಕುರುಳಿ ಅಂಬಲ ಮಂದ್ ನಿಂದ ಇಂದು ಆರಂಭಗೊAಡಿತು.

ಮಡಿಕೇರಿ ತಾಲೂಕು ಕುರುಳಿ ಅಂಬಲ ಮಂದ್, ನೆಲ್ಲಿಯಪುದಿಕೇರಿ ನಾಡ್ ಕಟ್ಟೆಮಾಡ್ ಮತ್ತು ಅರೆಕಾಡ್ ಮಂದ್ ನಲ್ಲಿ ಪಾದಯಾತ್ರೆ ಹಾಗೂ ಕೊಡವ ಜಾಗೃತಿ ಸಭೆ ನಡೆಯಿತು.

ನೆರೆದಿದ್ದವರನ್ನುದ್ದೇಶಿಸಿ ಮಾತ ನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವ ಲ್ಯಾಂಡ್ ಭೌಗೋ ಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಿಎನ್‌ಸಿ ಯ ಹೋರಾಟ ಮುಂದುವರೆ ಯಲಿದೆ, ಸರ್ವ ಕೊಡವರು ಹೋರಾ ಟದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ದೇಶದ ಸಂವಿಧಾನದಡಿ ಸೂಕ್ಷö್ಮ ಬುಡಕಟ್ಟು ಜನಾಂಗವಾಗಿರುವ ಕೊಡವರು ತಮ್ಮ ಹಕ್ಕುಗಳನ್ನು ಪಡೆಯಲು ಸ್ವತಂತ್ರರು, ಆದರೆ ಪ್ರತಿಯೊಬ್ಬರು ಜಾಗೃತರಾಗ ಬೇಕು ಎಂದರು. ಮೆರವಣಿಗೆಯಲ್ಲಿ ಸಂಘಟನೆಯ ಪ್ರಮುಖರು ಸೇರಿದಂತೆ ನೂರಾರು ಮಂದಿ ಬೆಂಬಲಿಸಿ ಪಾಲ್ಗೊಂಡರು.

ಇAದು ಪಾದಯಾತ್ರೆ

ತಾ.೨೮ ರಂದು ಬೆಳಗ್ಗೆ ೧೦ಕ್ಕೆ ಕಾಣತ್ತ್ ಮೂರ್ನಾಡ್ (ಮೂರ್ನಾಡ್- ಐಕೊಳ) (ಮಡಿಕೇರಿ ತಾಲೂಕು) ಮಧ್ಯಾಹ್ನ ೩ ಗಂಟೆಗೆ ಪಾಲಂದ ಮಂದ್, ಹಾಲುಗುಂದ. ಸಂಜೆ ೫.೩೦ ಗಂಟೆಗೆ ಚೆಂಬೆಬೆಳಿಯೂರ್ (ವೀರಾಜಪೇಟೆ ತಾಲೂಕು), ತಾ. ೨೯ ರಂದು ಬೆಳಗ್ಗೆ ೧೦ ಗಂಟೆಗೆ ಎಡೆನಾಲ್‌ನಾಡ್ (ಮಗ್ಗುಲ), ೨ ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದ (ವೀರಾಜಪೇಟೆ ತಾಲೂಕು) ದಲ್ಲಿ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.