ಸೋಮವಾರಪೇಟೆ, ಸೆ. ೨೭: ಇಂದು ಭಾರತೀಯ ಜನತಾ ಪಾರ್ಟಿ ಪ್ರಪಂಚದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಯಲು ಹಿಂದೆ ಪಕ್ಷ ಸಂಘಟನೆಗೆ ಜೀವನವನ್ನೇ ಮುಡಿಪಾಗಿಟ್ಟ ಹಿರಿಯರ ತ್ಯಾಗ ಕಾರಣ. ಅವರುಗಳ ಚಿಂತನೆ ಮತ್ತು ಆದರ್ಶಗಳನ್ನು ಕಾರ್ಯಕರ್ತರಾದ ನಾವುಗಳು ಪಾಲಿಸಬೇಕೆಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಆಯೋಜಿಸಿದ್ದ ಜನಸಂಘ ಸ್ಥಾಪಕ ಸಂಘಟನಾ ಕಾರ್ಯದರ್ಶಿ ಹಾಗೂ ಮಾಜಿ ರಾಷ್ಟಿçÃಯ ಅಧ್ಯಕ್ಷ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತ ನಾಡಿದರು.

ಜನಸಂಘದ ಮೂಲಕ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗೆ ಮುಂದಡಿಯಿಟ್ಟ ನೂರಾರು ಮಂದಿ ನಿಸ್ವಾರ್ಥ ಹಿರಿಯರ ಶ್ರಮದಿಂದ ಇಂದು ಬಿಜೆಪಿ ಪ್ರಬಲವಾಗಿದೆ. ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಸ್ಪಷ್ಟತೆಯಿ ದ್ದುದರಿಂದ ಬೃಹತ್ ರಾಜಕೀಯ ಪಕ್ಷವಾಗಿ ಬೆಳೆದಿದೆ. ಕೇಂದ್ರ ಸೇರಿದಂತೆ ಹಲವಷ್ಟು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಹಿಂದೆ ಶ್ರಮ ವಹಿಸಿದ ಎಲ್ಲಾ ಹಿರಿಯರ ಶ್ರಮವನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮನು ಕುಮಾರ್ ರೈ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ದರ್ಶನ್ ಜೋಯಪ್ಪ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಮಹೇಶ್ ತಿಮ್ಮಯ್ಯ, ಪ.ಪಂ. ಸದಸ್ಯರುಗಳಾದ ಮೃತ್ಯುಂಜಯ, ಪಿ.ಕೆ. ಚಂದ್ರು, ಮಹೇಶ್, ತಾ.ಪಂ. ಮಾಜಿ ಸದಸ್ಯೆ ತಂಗಮ್ಮ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.