ಮಡಿಕೇರಿ, ಸೆ. ೨೭: ಮೂರ್ನಾಡು ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ ಪರಿವರ್ತಕ ಬದಲಾಯಿಸಿ ಉನ್ನತೀಕರಣಗೊಳಿಸುವ ಕಾಮಗಾರಿಯ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ತಾ. ೨೯ ಹಾಗೂ ೩೦ ರಂದು ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಪಾರಾಣೆ, ನಾಪೋಕ್ಲು, ಹೊದ್ದೂರು, ಮರಗೋಡು, ಮೂರ್ನಾಡು, ಹಾಕತ್ತೂರು, ಕಾಂತೂರು, ಹೊದವಾಡ, ಚೆಯ್ಯಂಡಾಣೆ, ಕಕ್ಕಬೆ, ನೆಲಜಿ, ಪಾಲೂರು, ಯವಕಪಾಡಿ, ಬೇತು ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.