ಪೊನ್ನAಪೇಟೆ, ಸೆ. ೨೭: ೨೦೨೩-೨೪ನೇ ಸಾಲಿನ ಪೊನ್ನಂಪೇಟೆಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಯನ್ನು ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮ ದಲ್ಲಿ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ವಿವಿಧ ಶಾಲಾ ಮುಖ್ಯ ಶಿಕ್ಷಕರು, ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವಿದ್ಯಾರ್ಥಿಗಳು, ಅಪ್ಪಚ್ಚಕವಿ ವಿದ್ಯಾಲಯದ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಅಪ್ಪಚ್ಚಕವಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಪ್ರೌಢಶಾಲಾ ವಿಭಾಗದಲ್ಲಿ ಭರತನಾಟ್ಯದಲ್ಲಿ ಭವ್ಯ ಎಸ್.ಕೆ., ಕವ್ವಾಲಿಯಲ್ಲಿ ಆದಿಲ್ ಮತ್ತು ತಂಡ, ಜಾನಪದ ನೃತ್ಯದಲ್ಲಿ ದೀಕ್ಷಿತ ಮತ್ತು ತಂಡದವರು ಪ್ರಥಮ ಬಹುಮಾನ ವನ್ನು, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಹಿಂದಿ ಕಂಠಪಾಠದಲ್ಲಿ ತನ್ಹ ಫಾತಿಮ, ಲಘು ಸಂಗೀತದಲ್ಲಿ ದಿಶಾ ಬೋಜಮ್ಮ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಲಘು ಸಂಗೀತದಲ್ಲಿ ಚಿಂತನ ದೇಚಮ್ಮ, ಅಭಿನಯ ಗೀತೆಯಲ್ಲಿ ಪ್ರಜ್ಞಾ ಪೂವಮ್ಮ ಕೆ.ಟಿ. ಪ್ರಥಮ ಸ್ಥಾನವನ್ನು ಪಡೆದು ಈ ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
ಇದಲ್ಲದೆ, ಇಂಗ್ಲೀಷ್ ಕಂಠಪಾಠದಲ್ಲಿ ಅಯಾನ್ ಪೊನ್ನಣ್ಣ ಸಿ.ಜಿ., ಹಿಂದಿ ಕಂಠಪಾಠ ಯಾದವ್ ನಂಜಪ್ಪ ಜಿ.ಯು., ಧಾರ್ಮಿಕ ಪಠಣದಲ್ಲಿ ಸಂಸ್ಕೃತ ಮೋಕ್ಷಿತ್ ಯಂ.ಎಸ್., ಉರ್ದು ಕಂಠಪಾಠದಲ್ಲಿ ಹಸ್ಬೀನಾ, ಧಾರ್ಮಿಕ ಪಠಣದಲ್ಲಿ ಅರೇಬಿಕ್ ರಿಜ್ವಾನ್ ಕೆ.ಎಸ್., ಆಶುಭಾಷಣದಲ್ಲಿ ಶಿಪ್ನ ಎ.ಯು., ಹಿಂದಿ ಕಂಠಪಾಠದಲ್ಲಿ ಹರ್ಷಿತ ಯಂ.ಜೆ., ಭಾವಗೀತೆಯಲ್ಲಿ ಸಾಧಿಕಾಲಿ, ಛದ್ಮವೇಷದಲ್ಲಿ ಯೋಹನ್ ಹೆಚ್.ಆರ್., ಚರ್ಚಾ ಸ್ಪರ್ಧೆ ನಿಶಾ ಟಿ.ಪಿ., ರಂಗೋಲಿ ಸ್ಫೂರ್ತಿ ಬಿ.ಎಸ್., ಗಝಲ್ ಮಹಮ್ಮದ್ ಆದಿಲ್, ಕವನ-ಪದ್ಯ ವಾಚನದಲ್ಲಿ ಸುನಿಲ್ ಟಿ.ಎಸ್. ದ್ವಿತೀಯ ಸ್ಥಾನವನ್ನು, ಧಾರ್ಮಿಕ ಪಠಣ ಸಂಸ್ಕೃತದಲ್ಲಿ ವಶಿಕ, ಚಿತ್ರಕಲೆ ವಿಶ್ಮಿತ ಎ.ಡಿ., ಭಕ್ತಿಗೀತೆಯಲ್ಲಿ ರಿತಿಕ ಬಿ.ಯು. ಕ್ಲೇ ಮಾಡಲಿಂಗ್ನಲ್ಲಿ ತನುಶ್ರೀ, ಕವನ-ಪದ್ಯವಾಚನ ಉತ್ತಪ್ಪ ಯಂ.ಜಿ., ಚಿತ್ರಕಲೆಯಲ್ಲಿ ಅನನ್ಯ ಎನ್.ಎ., ಜಾನಪದ ಗೀತೆಯಲ್ಲಿ ನೀಲಮ್ಮ ಕೆ.ಬಿ., ಮಿಮಿಕ್ರಿ ತೇಜಸ್ ಹೆಚ್.ಸಿ. ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡರು.