ಚೆಟ್ಟಳ್ಳಿ, ಸೆ. ೨೭: ಹಾನಿಗೊಳಗಾದ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ದುರಸ್ತಿಗೊಳಿಸುತ್ತಿರುವ ಮೈಸೂರಿಗೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ನಿರ್ದೇಶಕರಾದ ಕೇಕಡ ವಿಜುದೇವಯ್ಯ, ನಂದಿನೆರವAಡ ರವಿಬಸಪ್ಪ, ಮಂಡಿರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಶಾಂತೆಯAಡ ವಿಶಾಲ್ ಕಾರ್ಯಪ್ಪ ಹಾಗೂ ಚೊಟ್ಟೆಯಂಡ ಸಂಜು ಕಾವೇರಪ್ಪ ತೆರಳಿ ಪರಿಶೀಲಿಸಿದರು.
ಪ್ರತಿಮೆಯ ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದ್ದು ಜನರಲ್ ತಿಮ್ಮಯ್ಯನವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಮಡಿಕೇರಿ ಕೊಡವ ಸಮಾಜ ಜಿಲ್ಲಾಡಳಿತ ನಗರಸಭೆ, ಶಾಸಕರು ಹಾಗೂ ಇತರೆ ಸಂಘ ಸಂಸ್ಥೆಗಳೊAದಿಗೆ ಚರ್ಚಿಸಿ ಪ್ರತಿಮೆಯನ್ನು ಗೌರವಯುತವಾಗಿ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮುತ್ತಪ್ಪ ತಿಳಿಸಿದರು.