ಚೆಯ್ಯಂಡಾಣೆ, ಸೆ. ೨೭: ಜನಾಂಗದ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಕೊಡವ ಸಮಾಜ ಮತ್ತು ಇತರ ಸಂಘ-ಸAಸ್ಥೆಗಳದ್ದು ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದರು.

ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಕೈಲ್ ಪೊಳ್ದ್ ಹಬ್ಬದ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜನಾಂಗದ ರಕ್ಷಣೆಯಾಗ ಬೇಕಾದರೆ ಪುರಾತನ ಕಾಲದಿಂದ ಬಂದAತಹ ಆಚಾರ, ವಿಚಾರ, ಪದ್ಧತಿ, ಪರಂಪರೆಗಳೊAದಿಗೆ ನಮ್ಮ ಪರಿಸರದಲ್ಲಿರುವ ಮಣ್ಣು, ಜಲ, ನೆಲ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಹೊಂದಿದರೆ ಮಾತ್ರ ಸಾಧ್ಯ ಎಂದರು.

ಮತ್ತೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯ ಉಳಿವಿಗಾಗಿ ಶ್ರಮಿಸಬೇಕು ಮುಂದಿನ ಯುವ ಪೀಳಿಗೆಗೆ ನಾವು ಸಜ್ಜಾಗಬೇಕು, ಸಂಘ-ಸAಸ್ಥೆಗಳಿಗೆ ಬರುವ ಅನುದಾನವನ್ನು ಸಂಘ-ಸAಸ್ಥೆಗಳ ಕಟ್ಟಡ ಮತ್ತಿತರ ಉಪಯೋಗಕ್ಕೆ ನೀಡಲಾಗುವುದು. ಚೆಯ್ಯಂಡಾಣೆ ಕೊಡವ ಸಮಾಜದ ಕಟ್ಟಡಕ್ಕೆ ಸರಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು. ಹಾಗೂ ಉಳಿದ ಸಮಾಜದ ಕಾರ್ಯಕ್ಕೆ ಪೂರ್ಣ ಸಹಕಾರ ಇದೆ ಎಂದರು.

ಕರ್ನಲ್ ನೆರ್ಪಂಡ ಸಾಗರ್ ಚಿಣ್ಣಪ್ಪ ಹಾಗೂ ಕೊಡವ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ರೀಟಾ ದೇಚಮ್ಮ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಈ ಸಂದರ್ಭ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ, ಕ್ರೀಡಾಕೂಟ ಸ್ಪರ್ಧೆ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಚೇನಂಡ ಬೋಪಣ್ಣ ಪ್ರಥಮ, ಬೇಪುಡಿಯಂಡ ದಿನು ದ್ವಿತೀಯ, ಚೆರುವಾಳಂಡ ಕಿಶನ್ ಸೋಮಯ್ಯ ತೃತೀಯ ಸ್ಥಾನ ಪಡೆದರು. ಮಹಿಳೆಯರ ಬಾಂಬ್ ಇನ್‌ದ ಸಿಟಿ ಸ್ವರ್ಧೆಯಲ್ಲಿ ಬುಟ್ಟೆಯಂಗಡ ಪೂವಮ್ಮ ಪ್ರಥಮ, ಮುಂಡಿಯೋಳAಡ ದಿವ್ಯ ದ್ವಿತೀಯ, ರಾಣಿ ಗಣಪತಿ ತೃತೀಯ ಸ್ಥಾನ ಹಾಗೂ ಪುರುಷರ ಬಾಂಬ್ ಇನ್‌ದ ಸಿಟಿ ಸ್ಪರ್ಧೆಯಲ್ಲಿ ಬೇಪುಡಿಯಂಡ ರವಿ ಪ್ರಥಮ, ಬಿದ್ದಂಡ ಚರ್ಮಣ ದ್ವಿತೀಯ, ಕುಮ್ಮಂಡ ಗಣಪತಿ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕೊಡವ ಸಮಾಜದ ಅಧ್ಯಕ್ಷ ಮುಂಡಿಯೋಳAಡ ಬಿದ್ದಪ್ಪ ವಹಿಸಿದ್ದರು. ಉಪಾಧ್ಯಕ್ಷ ನೆರ್ಪಂಡ ಜಿಮ್ಮಿ ಚಂಗಪ್ಪ, ಕಾರ್ಯದರ್ಶಿ ಅಯ್ಯಪ್ಪ, ಕೋಶಾಧಿಕಾರಿ ಪುಟ್ಟ ಪೆಮ್ಮಯ್ಯ, ಭವ್ಯ, ಜೆಪ್ಪು ದೇವಯ್ಯ, ಬೋಪಯ್ಯ, ಬಬ್ಬು ಮಾದಪ್ಪ, ಪ್ರಭು, ಜಿಮ್ಮ ಚಿಟ್ಯಪ್ಪ, ಮೊಣ್ಣಪ್ಪ, ರಾಯ್ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು. ಸುಜಲ ನಾಣಯ್ಯ ಪ್ರಾರ್ಥಿಸಿ, ನಿರೂಪಣೆಯನ್ನು ಅಯ್ಯಪ್ಪ, ಸ್ವಾಗತವನ್ನು ಬಿದ್ದಪ್ಪ ಹಾಗೂ ವಂದನೆಯನ್ನು ಜೆಪ್ಪು ದೇವಯ್ಯ ನಿರ್ವಹಿಸಿದರು.