ಮಡಿಕೇರಿ, ಸೆ. ೨೬: ಕಳೆದ ೨೦ ವರ್ಷಗಳಿಂದ ಕಾಂಗ್ರೆಸ್ ಬೆಂಬಲಿತರ ಆಡಳಿತದಲ್ಲಿದ್ದ ಮಕ್ಕಂದೂರು ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೆಲುಗೈ ಸಾಧಿಸಿದ್ದು, ಆಡಳಿತ ಬಿಜೆಪಿ ಪಾಲಾಗಿದೆ.

ಒಟ್ಟು ೧೨ ಮಂದಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ನೇತೃತ್ವದ ತಂಡದ ೧೦ ಮಂದಿ ಜಯಗಳಿಸಿದ್ದಾರೆ. ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ರವಿ ಕುಶಾಲಪ್ಪ, ಚೌಕಿಮನೆ ರಘು ತಿಮ್ಮಯ್ಯ, ರಮೇಶ್ ಬಿ.ಎನ್., ಸಾಮಾನ್ಯ ಹಿಂದುಳಿದ ವರ್ಗ(ಬಿ) ಕ್ಷೇತ್ರದಿಂದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಕುಂಭಗೌಡನ ಜಲಜಾಕ್ಷಿ ವಿನೋದ್‌ಕುಮಾರ್, ವಿಮಲಾ ರವಿ, ಸಾಮಾನ್ಯ ಹಿಂದುಳಿದ ವರ್ಗ(ಎ) ಕ್ಷೇತ್ರದಿಂದ ಜತ್ತಪ್ಪ ಬಿ.ಕೆ., ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸುಧಾಕರ ಹೆಚ್.ಎಂ., ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸುನಂದ ಕೃಷ್ಣಪ್ಪ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಮಡ್ಲಂಡ ಸ್ವಾತಿ ಸುಜು ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಇದುವರೆಗೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಕೊಕ್ಕಲೇರ ಸುಜು ತಿಮ್ಮಯ್ಯ ನೇತೃತ್ವದ ತಂಡದಿAದ ಸ್ಪರ್ಧೆ ಮಾಡಿದ್ದ ಹಾಲಿ ನಿರ್ದೇಶಕರುಗಳ ಪೈಕಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಸುಜು ತಿಮ್ಮಯ್ಯ ಹಾಗೂ ಅಣ್ಣೆಚ್ಚಿರ ಸತೀಶ್ ಸೋಮಣ್ಣ ಗೆಲುವು ಸಾಧಿಸಿದ್ದಾರೆ. ೨೦ ವರ್ಷಗಳಿಂದ ತನ್ನ ವಶದಲ್ಲಿದ್ದ ಸಹಕಾರ ಸಂಘದ ಆಡಳಿತವನ್ನು ಕಾಂಗ್ರೆಸ್ ಕಳೆದುಕೊಂಡAತಾಗಿದೆ.