ಕೂಡಿಗೆ, ಸೆ. ೨೬: ರಾಜ್ಯದಲ್ಲಿ ಪ್ರಥಮವಾಗಿ ಆರಂಭಗೊAಡ ಕೂಡಿಗೆ ಡೈರಿಯನ್ನು ಅಭಿವೃದ್ಧಿ ಪಡಿಸುವ ಮತ್ತು ಹಾಲಿನ ಉತ್ಪನ್ನ ಗಳು ತಯಾರಿಸುವ ಚಿಂತನೆಯ ಅಡಿಯಲ್ಲಿ ಈಗಾಗಲೇ ಇರುವ ಡೈರಿಯ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದ ವತಿಯಿಂದ ರೂ. ೪೦ ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ತಿಳಿಸಿದರು.

ಕೂಡಿಗೆ ಡೈರಿಯ ನೌಕರರ ವತಿಯಿಂದ ವರ್ಷಂಪ್ರತಿಯAತೆ ಹಮ್ಮಿಕೊಳ್ಳುವ ಗೌರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಕೂಡಿಗೆ ಡೈರಿಯ ಮುಂಭಾಗದಲ್ಲಿರುವ ಹಳೆಯ ಕಟ್ಟ ಡವು ಈಗಾಗಲೇ ಶಿಥಿಲಗೊಂಡಿದ್ದು, ಆಡಳಿತ ವ್ಯವಸ್ಥೆಗೆ ತೊಂದರೆಗಳು ಆಗುತ್ತಿರುವುದನ್ನು ಗಮನಿಸಲಾಗಿದೆ. ಅದರ ಬದಲಿ ವ್ಯವಸ್ಥೆಗೆ ಈಗಾಗಲೇ ಇಂಜಿನಿಯರ್ ಮೂಲಕ ಪರಿಶೀ ಲನೆ ನಡೆಸಿ ಕಟ್ಟಡ ಗುಣಮಟ್ಟದ ಅನ್ವಯ ನೂತನ ಕಟ್ಟಡವನ್ನು ಕಟ್ಟಲು ಆಡಳಿತ ಮಂಡಳಿಯು ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆ ಒಕ್ಕೂಟದ ವತಿಯಿಂದ ನೂತನ ಕಟ್ಟಡದ ಕಾಮ ಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ರೂ. ೪೦ ಲಕ್ಷ ಹಣದ ವೆಚ್ಚದ ಅನುದಾನವನ್ನು ಕಾಯ್ದಿರಿಸಲಾಗಿ, ಮುಂದಿನ ದಿನಗಳಲ್ಲಿ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ಮಹೇಶ್ ಮಾಹಿತಿ ನೀಡಿದರು.

ಇದರ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ನೂತನ ಕಟ್ಟಡ ನಿರ್ಮಾಣ ನಂತರ ಹಾಸನ ಹಾಲು ಒಕ್ಕೂಟದ ಮುಖೇನ ಅಂತರರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಹಾಸನ ಹಾಲು ಒಕ್ಕೂಟದ ಉತ್ಪನ್ನಗಳ ಮಾರಾಟ ವಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಿಗೆ ಡೈರಿಯನ್ನು ಅಭಿವೃದ್ಧಿ ಮತ್ತು ಜಿಲ್ಲೆಯ ಹಾಲಿನ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವ ಪ್ರಮುಖವಾದ ಉದ್ದೇಶ ಆಗಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಎಲ್ಲಾ ಚಿಂತನೆಗಳು ನಡೆದಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಡಾ. ಪ್ರಸನ್ನ, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಮಾರುಕಟ್ಟೆ ವ್ಯವಸ್ಥಾಪಕ ಮಲ್ಲೇಶ್, ಸೇರಿದಂತೆ ಡೈರಿಯ ವಿವಿಧ ವಿಭಾ ಗದ ಅಧಿಕಾರಿ ವರ್ಗದವರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕೆ.ಕೆ. ನಾಗರಾಜಶೆಟ್ಟಿ.