ಮಡಿಕೇರಿ, ಸೆ. ೨೬: ಕೊಡಗು-ಮೈಸೂರು ಲೋಕ ಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆ ಆದ ಪ್ರತಾಪ್ ಸಿಂಹ ಅವರು ಸಂಸತ್ತಿನಲ್ಲಿ ಕೊಡಗಿನ ಧ್ವನಿಯಾಗುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆಯ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ ನಾಡಿದರು. ಕೊಡಗಿನಲ್ಲಿ ಹತ್ತಾರು ಸಮಸ್ಯೆಗಳಿವೆ. ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆನೆ-ಮಾನವ ಸಂಘರ್ಷದಿAದ ಜೀವ ಹಾನಿಗಳು ಸಂಭವಿಸುತ್ತಿವೆ. ನಾಲ್ಕೆöÊದು ಲಕ್ಷ ರೂಪಾಯಿ ಸಾಲ ತೀರಿಸಲಾಗದೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ನಡೆದಿವೆ. ಈ ಎಲ್ಲಾ ಸಂದರ್ಭಗಳಲ್ಲೂ ಕೊಡಗಿಗೆ ಆಗಮಿಸಿ ನೋವಿನಲ್ಲಿರುವ ಮಂದಿಗೆ ಸಾಂತ್ವನ ಹೇಳುವ ಕೆಲಸವನ್ನು ಕೂಡ ಪ್ರತಾಪ್ ಸಿಂಹ ಅವರು ಮಾಡುತ್ತಿಲ್ಲ.
ಅಲ್ಲದೆ ಈ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದಿಂದ ಆಗ ಬೇಕಾದ ಕಾರ್ಯ ಗಳನ್ನು ಮಾಡಿಸುವ ನಿಟ್ಟಿನಲ್ಲೂ ಆಸಕ್ತಿ ತೋರಿಲ್ಲ ಎಂದು ಸಂಕೇತ್ ಪೂವಯ್ಯ ದೂರಿದರು.
ಚುನಾವಣೆ ಸಂದರ್ಭ ಮಾತ್ರ ಕೊಡಗಿಗೆ ಭೇಟಿಕೊಟ್ಟು ಭಾವನಾತ್ಮಕವಾಗಿ, ಧರ್ಮಾಧಾರಿತವಾಗಿ ಮತಗಳಿಸಿ ಜಯ ಗಳಿಸುವ ಪ್ರತಾಪ್ಸಿಂಹ ಅವರು ನಂತರ ಕೊಡಗಿನತ್ತ ತಲೆಹಾಕಿಯೂ ನೋಡುವುದಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರ ಕೊಡವ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ನೀಡಿದೆ ಎಂದು ಪ್ರತಾಪ್ ಸಿಂಹ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಕೊಡಗಿಗೆ ರೈಲು ತರುವುದಾಗಿ; ಇಲ್ಲಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಾಗಿ ಕೇವಲ ಭರವಸೆ ನೀಡುತ್ತಲೇ ಬಂದಿರುವ ಪ್ರತಾಪ್ ಸಿಂಹ ಅವರಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಪ್ರವಾಹ ಸಂದರ್ಭ ಪ್ರಧಾನಿ ಮೋದಿಯವರು ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ಮಾಡಿದರು.
ಆದರೆ ಕೊಡಗಿನ ಸಂಕಷ್ಟವನ್ನು ಪರಿಶೀಲಿಸಲಿಲ್ಲ. ಇದಕ್ಕೆ ಪ್ರತಾಪ್ ಸಿಂಹ ಅವರ ನಿರ್ಲಕ್ಷö್ಯವೆ ಕಾರಣ ಎಂದು ಸಂಕೇತ್ ಪೂವಯ್ಯ ದೂರಿದರು. ಒಂದೊಮ್ಮೆ ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ದೂರುತ್ತಿದ್ದ ಪ್ರತಾಪ್ ಸಿಂಹ ಇದೀಗ ಚುನಾವಣೆ ಸಮೀಪಿಸುವಾಗ ದೇವೇಗೌಡರ ಕಾಲಿಗೆ ಬಿದ್ದಿರುವುದು ಹಾಸ್ಯಸ್ಪದ ಎಂದು ಅವರು ಕುಟುಕಿದರು.