ವೀರಾಜಪೇಟೆ, ಸೆ. ೨೬: ಗಣೇಶ ಮೂರ್ತಿ ವಿಸರ್ಜನೋತ್ಸವಕ್ಕೆ ವೀರಾಜಪೇಟೆ ಸಜ್ಜಾಗಿದ್ದು, ಮಿನಿ ದಸರಾವೆಂದೆ ಖ್ಯಾತಿಯಾಗಿರುವ ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನರು ಕೂಡ ಈ ವೈಭವವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ವೀರಾಜಪೇಟೆಯ ವಿವಿಧ ದೇವಸ್ಥಾನಗಳಲ್ಲಿ, ಬಹುತೇಕ ಕಡೆಗಳಲ್ಲಿ ಉತ್ಸವದ ಮೆರಗು ಕಂಡು ಬಂದಿದೆ. ವೀರಾಜಪೇಟೆಯ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ ಮುಂಜಾನೆಯಿAದಲೇ ಭಕ್ತ ಸಾಗರ ಕಂಡುಬರುತ್ತಿದೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರ ವಿಶೇಷ ಅಲಂಕಾರದಿAದ ಕಂಗೊಳಿಸುತ್ತಿದೆ.

ತಾ. ೨೮ ರಂದು ವಿಸರ್ಜನೋತ್ಸವ ಹಿನ್ನೆಲೆ ವೀರಾಜಪೇಟೆ ಪಟ್ಟಣ ಮಧುವಣಗಿತ್ತಿಯಂತೆ ಶೃಂಗಾರಗೊAಡು ನೋಡುಗರನ್ನು ಸೆಳೆಯುತ್ತಿದೆ. ರಾತ್ರಿ ಆಕರ್ಷಕ ವಿದ್ಯುತ್ ಅಲಂಕಾರದಿAದ ಸಿಂಗಾರಗೊAಡಿದೆ.

ಪಟ್ಟಣದ ೨೨ ಸ್ಥಳಗಳಲ್ಲಿ ವಿದ್ಯುಕ್ತವಾಗಿ ಚತುರ್ಥಿಯಂದು ವಿಘ್ನವಿನಾಯಕನ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಬಾರಿ ತಾ. ೨೮ರಂದು ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ಪುನಸ್ಕಾರಗಳಿಂದ ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ಅನಂತಪದ್ಮನಾಭ ವೃತದಂದು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಯ ಮೂಲಕ ಮುಖ್ಯ ಬೀದಿಗಾಗಿ ಸಾಗಿ ೨೯ರ ಮುಂಜಾನೆ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ವಿಘ್ನ ವಿನಾಶಕನ ಹಬ್ಬವನ್ನು ನಿರ್ವಿಘ್ನವಾಗಿ ನಡೆಸುವ ನಿಟ್ಟಿನಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಪಂಚಾಯಿತಿ ವತಿಯಿಂದ ಗೌರಿಕೆರೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

(ಮೊದಲ ಪುಟದಿಂದ)

ಮುAಜಾಗ್ರತಾ ಕ್ರಮ

ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಗೌರಿ ಗಣೇಶ ಹಬ್ಬವನ್ನು ಸರ್ವರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಆಚರಿಸುವಂತಾಗಬೇಕು, ನಿಯಮಗಳನ್ನು ಪಾಲಿಸಲೇಬೇಕು. ಈ ನಿಟ್ಟಿನಲ್ಲಿ ಪಟ್ಟಣದ ಗಣೇಶೋತ್ಸವ ಆಚರಣಾ ಸಮಿತಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಕರೆ ನೀಡಿದ್ದಾರೆ.

ವಿಸರ್ಜನಾ ಮೆರವಣಿಗೆಯಲ್ಲಿ ನಿಯಮ ಪಾಲಿಸಿ, ಮಂಟಪಗಳ ನಡುವೆ ಅಂತರ ಹೆಚ್ಚಿಸಿ ತೊಂದರೆ ಮಾಡದಂತೆ ಮತ್ತು ಮೆರವಣಿಗೆ ವಾಹನ ಸುಸ್ಥಿತಿಯಲ್ಲಿರುವಂತೆ ಜೊತೆಗೆ ಸಮಯ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆ ಬಿಗಿಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತದೆ. ಡಿಎಆರ್, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.

ಸಮಿತಿಗಳು : ಈ ಬಾರಿಯ ಗಣೇಶ ವಿಸರ್ಜನೋತ್ಸವದಲ್ಲಿ ಶ್ರಿ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ ಪ ಪಂ ವಿ.ಪೇ, ಶ್ರೀ ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ಶ್ರೀ ಗಣಪತಿ ದೇವಾಲಯ ಟ್ರಸ್ಟ್ ಮುಖ್ಯ ರಸ್ತೆ (ಗಡಿಯಾರ ಕಂಬದ ಬಳಿ), ಶ್ರೀ ಬಾಲಾಂಜನೆಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ, ಶ್ರೀ ನೇತಾಜಿ ಉತ್ಸವ ಸಮಿತಿ ನೆಹರು ನಗರ, ಶ್ರೀ ಮಹಾಗಣಪತಿ ಸೇವಾ ಸಂಘ ಗಣಪತಿ ಬೀದಿ ಪಂಜರುಪೇಟೆ, ಶ್ರೀ ಬಸವೇಶ್ವರ ದೇವಸ್ಥಾನ ಜೈನರ ಬೀದಿ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ, ಶ್ರೀ ವಿನಾಯಕ ಯುವ ಭಕ್ತ ಮಂಡಳಿ ಅಂಗಾಳ ಪರಮೇಶ್ವರಿ ದೇವಾಲಯ , ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ದಖನ್ನಿ ಮೊಹಲ್ಲಾ, ಶ್ರೀ ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಶ್ರೀ ಗಣಪತಿ ಸೇವಾ ಸಮಿತಿ ಗಾಂಧಿನಗರ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ಹರಿಕೇರಿ, ಶ್ರೀ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಕೆ ಬೋಯಿಕೇರಿ, ಶ್ರೀ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಪಂಜರುಪೇಟೆ, ಶ್ರೀ ಜಲದರ್ಶಿನಿ ವಿನಾಯಕ ಸೇವ ಸಮಿತಿ ಆಂಜನೇಯ ದೇವಾಲಯ ಚಿಕ್ಕಪೇಟೆ, ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ ಕೂಕ್ಲೂರು ಗ್ರಾಮ ಮತ್ತು ಶ್ರೀ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ ಇವು ಭಾಗವಹಿಸಲಿವೆ.

ಈ ಎಲ್ಲಾ ಮೂರ್ತಿಗಳನ್ನು ತಾ.೨೯ ರಂದು ಬೆಳಗ್ಗಿನ ಜಾವ ಐತಿಹಾಸಿಕ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಇದಕ್ಕಾಗಿ ಪುರಸಭೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವರದಿ : ಈಶಾನ್ವಿ ಕಿರಣ್