ಶನಿವಾರಸಂತೆ, ಸೆ. ೨೬ : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಎ.ಎಸ್. ನವೀನ್ಕುಮಾರ್ ಅಧ್ಯಕ್ಷತೆಯಲ್ಲಿ ಶ್ರೀನವದುರ್ಗಪರಮೇಶ್ವರಿ ದೇವಾಲಯದ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು.
ಗ್ರಾಮ ಸಭೆ ಗದ್ದಲ, ಗೊಂದಲಗಳಿAದಲೇ ಆರಂಭವಾ ಯಿತು. ಗ್ರಾಮಸ್ಥರು ಸಭೆಗೆ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಪಂಚಾಯಿತಿಯವರನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಸರ್ಕಾರ ಸೋಮವಾರಪೇಟೆ ತಾಲೂಕನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿರು ವದನ್ನು ಖಂಡಿಸಿ, ವಿರೋಧ ವ್ಯಕ್ತಪ ಡಿಸಿ ದಿಕ್ಕಾರ ಕೂಗ ತೊಡಗಿದರು.
ಅಧಿಕಾರಿಗಳ ಗೈರು ಹಾಜ ರಾತಿಯಿಂದ ಸರ್ಕಾರ ತಾಲೂಕನ್ನು ಬರ ಪೀಡಿತ ಘೋಷಣೆ ಮಾಡದಿರುವ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಹಾಗೂ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡುವವರೆಗೂ ಗ್ರಾಮ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿ ಸಭೆಯಿಂದ ಗ್ರಾಮಸ್ಥರು ಹೊರ ನಡೆದರು. ತಾಲೂಕಿನಲ್ಲಿ ಪ್ರತಿ ವರ್ಷದಂತೆ ವಾಡಿಕೆ ಮಳೆಯಾಗದಿದ್ದು ಮುಂಗಾರು ಮಳೆ ಕೈಕೊಟ್ಟ ಕಾರಣ ರೈತರು ಬೆಳೆದ ಬೆಳೆ ಒಣಗುತ್ತಿದೆ. ನಾಟಿ ಮಾಡಿದ ಗದ್ದೆಗಳು ಭೂಮಿ ಬಿರುಕು ಬಿಟ್ಟು ಒಣಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷö್ಯ ತೋರುತ್ತಿದ್ದಾರೆ. ಮಳೆ ಮಾಪನ ಮಾಹಿತಿ ನೀಡುತ್ತಿಲ್ಲ.
ಹಾಗಾಗಿ, ಸರ್ಕಾರ ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಿಲ್ಲ ಎಂದು ಅಧಿಕಾರಿಗಳನ್ನೇ ದೂರಿದ ತಾಲೂಕು ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ಗ್ರಾಮ ಮುಖಂಡರಾದ ಭರತ್ ಕುಮಾರ್, ಕೊಮಾರಪ್ಪ, ಸುನೀಲ್, ಪ್ರಸಿ, ಗುರುಪ್ರಸಾದ್, ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಗ್ರಾಮಸ್ಥರು ಸಭೆ ಬಹಿಷ್ಕರಿಸಿದರು. ನೋಡೆಲ್ ಅಧಿಕಾರಿ ಪಶುವೈದ್ಯಾಧಿಕಾರಿ ಡಾ.ಬಿ.ಎಂ.ಸತೀಶ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ, ಸಿಬ್ಬಂದಿ ಹಾಜರಿದ್ದರು.