ಸAಪಾಜೆ, ಸೆ. ೨೬: ಸಂಪಾಜೆ ಗ್ರಾಮ ವ್ಯಾಪ್ತಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರುವ ಮನೋಹರ ರೈ ಕೊಯನಾಡು ಅಸೌಖ್ಯದಿಂದ ಇತ್ತೀಚೆಗೆ ನಿಧನ ಹೊಂದಿದ್ದು, ಅವರ ಖಾತೆಗೆ ಅನುಸಾರವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಿಮೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಎರಡು ಸೇರಿ ಒಟ್ಟು ರೂ. ೩ ಲಕ್ಷದ ೩೦ ಸಾವಿರ ಮೊತ್ತವನ್ನು ಮೃತರ ತಾಯಿ ಭವಾನಿ ರೈ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಾಖೆ ವ್ಯವಸ್ಥಾಪಕ ಜಯಪ್ರಕಾಶ್, ಸಿಬ್ಬಂದಿಗಳಾದ ಪ್ರಕಾಶ್ ರಾವ್ ಪಿ. ಬಿ, ರಂಜನ್ ಬಿ. ಎಮ್. ಮತ್ತು ಸಂಪರ್ಕಾಧಿಕಾರಿ ಶಶಾಂಕ್ ಉಪಸ್ಥಿತರಿದ್ದರು.