ಕುಶಾಲನಗರ, ಸೆ. ೨೬: ಮೈಸೂರು ನಾಡ ಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗಾಗಿ ಕುಶಾಲನಗರ ಸಮೀಪದ ದುಬಾರೆ ಸೇರಿದಂತೆ ವಿವಿಧ ಆನೆ ಶಿಬಿರಗಳಿಂದ ಎರಡನೇ ಹಂತದಲ್ಲಿ ಒಟ್ಟು ಐದು ಆನೆಗಳನ್ನು ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.
ತಾ. ೨೫ರಂದು ದುಬಾರೆ ಶಿಬಿರದ ೫೦ ವರ್ಷದ ಪ್ರಶಾಂತ್, ೪೧ ವರ್ಷದ ಸುಗ್ರೀವ ಆನೆ ಮತ್ತು ಕುಶಾಲನಗರ ಸಮೀಪದ ಕೊಪ್ಪದ ದೊಡ್ಡಹರವೆ ಆನೆ ಶಿಬಿರದ ೫೨ ವರ್ಷದ ಲಕ್ಷಿö್ಮ ಸೇರಿದಂತೆ ಐದು ಆನೆಗಳು ಎರಡನೇ ಹಂತದಲ್ಲಿ ಮೈಸೂರು ಅರಮನೆಗೆ ಪ್ರವೇಶಿಸಿದೆ.