ಕುಶಾಲನಗರ: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ ೯.೬೪ ಲಕ್ಷ ರೂಗಳ ಲಾಭಗಳಿಸಿದ್ದು ಎ ತರಗತಿಯಲ್ಲಿ ವರ್ಗೀಕರಣವಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಕೆ. ದಿನೇಶ್ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ೮ ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಘ ೯೦೦ ಸದಸ್ಯರನ್ನು ಹೊಂದಿದೆ. ರೂ ಎರಡು ಕೋಟಿ ೪೪ ಲಕ್ಷ ದುಡಿಯುವ ಬಂಡವಾಳ ಗಳಿಸಿದೆ ಎಂದು ಮಾಹಿತಿ ನೀಡಿದರು.
ಸಂಘವು ಸದಸ್ಯರ ಬೇಡಿಕೆಗೆ ತಕ್ಕಂತೆ ಜಾಮೀನು ಸಾಲ, ಆಭರಣ ಸಾಲ, ಜಂಟಿ ಬಾಧ್ಯತಾ ಗುಂಪು ಸಾಲ ಹಾಗೂ ಪಿಗ್ಮಿ ಸಾಲಗಳನ್ನು ನೀಡುತ್ತಿವೆ. ಸದಸ್ಯರ ಸಹಕಾರ ಮೂಲಕ ಸಂಘ ಅಭಿವೃದ್ಧಿ ಸಾಧಿಸಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಜಿ.ಬಿ. ಜಗದೀಶ್ ನಿರ್ದೇಶಕರಾದ ಸಿ.ವಿ. ನಾಗೇಶ್ ಎಂ.ಡಿ. ರವಿಕುಮಾರ್ ಇದ್ದರು.ಮರಗೋಡು: ನಂ.೨೭೭೧ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದಕ್ಕೆ ೨೦೨೩-೨೪ ರಿಂದ ಮುಂದಿನ ೫ ವರ್ಷಗಳ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ೧೩ ಸ್ಥಾನದಲ್ಲಿ ಬಿಜೆಪಿ ಬೆಂಬಲಿತರ ತಂಡ ಗೆಲುವು ಸಾಧಿಸಿದ್ದಾರೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಉದಯಕುಮಾರ್ ಸಿ ಬೊಳ್ಳೂರು, ಕಾವೇರಪ್ಪ ಕೆ ಅಚ್ಚಕಾಳೇರ, ಜಯಕುಮಾರ್ ಡಿ ಬಳಪದ, ದೇವಪ್ಪ ಪಿ ಬಿಲ್ಲವರ, ನವೀನ್ ವಿ ಬಿದ್ರುಪಣೆ, ಲವಿನ್ ಎಸ್.ಕೋಚನ, ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ರೇಖಾ ಎಸ್ ಉಳುವಾರನ, ಸುಶೀಲ್ ಡಿ ಕಾನಡ್ಕ, ಸಾಲಗಾರ ಕ್ಷೇತ್ರ ಪ್ರವರ್ಗ ಬಿ ವಿಭಾಗದಲ್ಲಿ ಸತೀಶ್ ಎನ್ ಕಾಂಗೀರ, ಸಾಲಗಾರ ಕ್ಷೇತ್ರ ಪ್ರವರ್ಗ ಎ ವಿಭಾಗದಲ್ಲಿ ಕಾರ್ಯಪ್ಪ ಜಿ ತೋರೇರ, ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಂದ್ರಪ್ರಕಾಶ್ ಮರಾತ, ಸಾಲಗಾರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಪುರುಷೋತ್ತಮ ಎಸ್ ಹರಿಜನ , ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಭುಶೇಖರ್ ಬಿ.ವೈ ಅವರುಗಳು ಆಯ್ಕೆಯಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿ ಪಿ.ಡಿ.ಓ ಕೆ.ಎಂ. ಚಂದ್ರಮೌಳಿ, ಮತಗಟ್ಟೆ ಅಧಿಕಾರಿಗಳು ಹಾಗೂ ಸೊಸೈಟಿಯ ಪ್ರಬಾರ ಸಿಇಓ ದರ್ಶನ್ ಬಿ.ಯು. ಹಾಗೂ ಸಂಘದ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು.
ಶ್ರೀಮಂಗಲ : ಪೊನ್ನಂಪೇಟೆ ತಾಲೂಕಿನ ಕಾನೂರು ಪ್ರಾ.ಕೃ.ಪ.ಸ.ಸಂಘವು ೧೯೩೭ರಲ್ಲಿ ಸ್ಥಾಪನೆಯಾಗಿ ೮೬ನೇ ವರ್ಷ ತುಂಬಿರುತ್ತದೆ. ೫೦ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ೭೫ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸಲಾಗಿರುತ್ತದೆ. ೨೦೦೯ ರಿಂದ ೨೦೨೩ ರವರೆಗೆ ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ತರಗತಿಯನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಲೆಕ್ಕ ಪರಿಶೋಧನೆಯಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲದೆ ಉತ್ತಮ ವರದಿ ಬರುತ್ತಿರುವುದು ಸಂಘದ ಸ್ವಚ್ಛ ಹಾಗೂ ಪಾರದರ್ಶಕತೆಗೆ ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಅಳಮೇಂಗಡ ಎ. ವಿವೇಕ್ ಅವರು ಹೇಳಿದರು.
ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷ ಸಂಘವು ರೂ. ೬೭.೫೫ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು. ಮಹಾಸಭೆಯಲ್ಲಿ ಈ ಬಗ್ಗೆ ಸಂಘದ ಕಾರ್ಯ ಚಟುವಟಿಕೆ ಹಾಗೂ ವಹಿವಾಟಿನ ಬಗ್ಗೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಮಾಹಿತಿ ನೀಡಿ ಸಂಘದಲ್ಲಿ ಇಂದಿಗೆ ೧೫೩೧ ಸದಸ್ಯರಿದ್ದು, ಪಾಲು ಬಂಡವಾಳ ರೂ ೧,೪೪,೩೨,೦೦೦ ಇರುತ್ತದೆ. ಸಂಘದಲ್ಲಿ ದಿನಾಂಕ:೩೧-೦೮-೨೦೨೩ ಕ್ಕೆ ಸಂಚಯ, ನಿರಖು ಠೇವಣಿ ಮತ್ತು ಪಿಗ್ಮಿ ಠೇವಣಿ ಮತ್ತು ಸಿಬ್ಬಂದಿ ಠೇವಣಿ, ಮರಣ ನಿಧಿ ಠೇವಣಿ ಸೇರಿ ರೂ. ೬,೮೩,೨೪,೦೬೧ ಇರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೧೯,೦೯,೦೯,೯೬೧ ಆಗಿರುತ್ತದೆ. ಎಂದು ವಿವರಿಸಿದರು.
ಸಂಘದಲ್ಲಿ ಕ್ಷೇಮನಿಧಿ ರೂ. ೩,೧೭,೫೪,೮೭೭, ಬ್ಯಾಂಕಿನಲ್ಲಿ ಕ್ಷೇಮನಿಧಿ ರೂ. ೩,೨೬,೭೨,೩೯೨ ಪಾವತಿಯಾಗಿದೆ. ಕಾಫಿ ತೋಟದ ಬಂಡವಾಳ ಮತ್ತು ಅಭಿವೃದ್ಧಿ ನಿಧಿ ರೂ. ೧,೩೯,೨೩,೨೩೨ ಇರುತ್ತದೆ ಎಂದು ವಿವರಿಸಿದರು. ಸಂಘದಲ್ಲಿ ಕಟ್ಟಡ ನಿಧಿ ಹಾಗೂ ಇತರ ನಿಧಿಗಳು ರೂ. ೧,೮೩,೬೧,೧೭೭ ಇರುತ್ತದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ರೂ. ೩,೧೬,೭೮,೦೦೦ ಸಾಲ ಪಡೆಯಲಾಗಿದೆ. ಸಂಘವು ಸದಸ್ಯರುಗಳಿಗೆ ವಿತರಿಸಿದ ಸಾಲ ೩೧-೦೮-೨೦೨೩ ಕ್ಕೆ ಕೆ.ಸಿ.ಸಿ. ಫಸಲು ಸಾಲ ೪೯೨ ಸದಸ್ಯರಿಗೆ ರೂ. ೯,೪೮,೧೧,೦೦೦ ಜಾಮೀನು ಸಾಲ ೧೨೦ ಸದಸ್ಯರಿಗೆ ರೂ ೧೧,೭೪,೭೦೦ ಪಿಗ್ಮಿ ಠೇವಣಿ ಸಾಲ ೪೦ ಸದಸ್ಯರಿಗೆ ರೂ. ೧೯,೮೦,೦೦೦ ಸ್ವಸಹಾಯ ಗುಂಪು ಸಾಲ, ರೂ. ೧೧,೪೮,೦೦೦ ಆಭರಣ ಸಾಲ ರೂ. ೭,೮೮,೦೦೦ ಗೊಬ್ಬರ ಸಾಲ ೧೩೧ ಸದಸ್ಯರಿಗೆ ರೂ. ೪೮,೦೧,೮೪೬ ಈ ಎಲ್ಲಾ ಸಾಲಗಳು ಸೇರಿ ಒಟ್ಟು ರೂ. ೧೦,೪೭,೦೩,೫೪೬ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ ಪಡೆದ ಎಲ್ಲಾ ಸಾಲಗಳು ಶೇ. ೧೦೦ರಷ್ಟು ಸದಸ್ಯರಿಂದ ಮರುಪಾವತಿಯಾಗಿರುತ್ತದೆ. ಇನ್ನು ಮುಂದಕ್ಕೂ ಸಹ ಸದಸ್ಯರು ಇದೇ ರೀತಿ ಸಂಘದ ಬೆಳವಣಿಗೆಗೆ ಸಾಲ ಮರು ಪಾವತಿಸಿ ಸಹಕರಿಸಬೇಕಾಗಿ ಮನವಿ ಮಾಡಿದರು.
ಸಂಘದಲ್ಲಿ ಒಟ್ಟು ೧೫೩೧ ಸದಸ್ಯರಿದ್ದು, ಪಾಲು ಬಂಡವಾಳ ರೂ. ೧,೪೪,೩೨,೦೦೦ ಇರುತ್ತದೆ. ಸಂಘದಲ್ಲಿ ಸಂಚಯ, ನಿರಖು ಠೇವಣಿ, ಪಿಗ್ಮಿ ಠೇವಣಿ ಮತ್ತು ಸಿಬ್ಬಂದಿ ಠೇವಣಿ, ಮರಣ ನಿಧಿ ಠೇವಣಿ ಸೇರಿ ಒಟ್ಟು ರೂ. ೬,೮೩,೨೪,೦೬೧ ಇರುತ್ತದೆ. ಸಂಘವು ೨೦೨೨-೨೩ ಸಾಲಿಗೆ ರೂ. ೬೭,೫೫,೫೫೮ ನಿವ್ವÀಳ ಲಾಭ ಗಳಿಸಿದ್ದು, ಸಂಘದ ವಾರ್ಷಿಕ ಮಹಾಸಭೆಯ ಒಪ್ಪಿಗೆ ಪಡೆದು ಸದಸ್ಯರ ಪಾಲು ಬಂಡವಾಳದ ಮೇಲೆ ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಶೇ ೨೫% ಡಿವಿಡೆಂಟ್ ಕೊಡಲು ತೀಮಾನಿಸಲಾಗಿದೆ. ಸರ್ಕಾರದಿಂದ ಲೀಸ್ ಆಧಾರದಲ್ಲಿ ಪಡೆದಿರುವ ೫೦ ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದು, ಇದರಿಂದ ಸಂಘಕ್ಕೆ ಉತ್ತಮ ಆದಾಯ ಬರುತ್ತಿದೆ. ಎಂದು ವಿವರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಸಿ. ಮುತ್ತಪ್ಪ, ನಿರ್ದೇಶಕರುಗಳಾದ ಕೆ.ಎಸ್. ಬೋಪಣ್ಣ, ಕೆ.ಎಸ್.ಭರತ್, ಸಿ.ಬಿ. ಬೆಳ್ಯಪ್ಪ, ಕೆ.ಆರ್. ಸುರೇಶ್, ಎಂ.ಕೆ. ಪ್ರಕಾಶ್, ಎಂ.ಕೆÀ.ರವಿ, ಎಂ.ಎನ್.ಅಶ್ವಿನಿ, ಕೆ.ಡಿ. ನಿರ್ಮಲ, ಪಿ.ಬಿ. ಲೀನಾ, ಹೆಚ್.ಕೆ.ಬೊಗ್ಗುರು, ಎಂ.ಎA. ಜಗನ್ನಾಥ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್.ಉಮೇಶ್ ಸಹಾಯಕ Àಕಾರ್ಯನಿರ್ವಹಣಾಧಿಕಾರಿ ಎಂ.ಎA. ರತ್ನಕುಮಾರ್, ಜಿಲ್ಲಾ ಬ್ಯಾಂಕ್ ನಿರೀಕ್ಷಕÀ ಜಮ್ಮಡ ಸುಬ್ಬಯ್ಯ, ಪೊನ್ನಂಪೇಟೆ ಶಾಖಾ ವ್ಯವಸ್ಥಾಪಕ ಕಂಜಿತAಡ ದೇವಯ್ಯ ಹಾಜರಿದ್ದರು.
೩,೧೬,೭೮,೦೦೦ ಸಾಲ ಪಡೆಯಲಾಗಿದೆ. ಸಂಘವು ಸದಸ್ಯರುಗಳಿಗೆ ವಿತರಿಸಿದ ಸಾಲ ೩೧-೦೮-೨೦೨೩ ಕ್ಕೆ ಕೆ.ಸಿ.ಸಿ. ಫಸಲು ಸಾಲ ೪೯೨ ಸದಸ್ಯರಿಗೆ ರೂ. ೯,೪೮,೧೧,೦೦೦ ಜಾಮೀನು ಸಾಲ ೧೨೦ ಸದಸ್ಯರಿಗೆ ರೂ ೧೧,೭೪,೭೦೦ ಪಿಗ್ಮಿ ಠೇವಣಿ ಸಾಲ ೪೦ ಸದಸ್ಯರಿಗೆ ರೂ. ೧೯,೮೦,೦೦೦ ಸ್ವಸಹಾಯ ಗುಂಪು ಸಾಲ, ರೂ. ೧೧,೪೮,೦೦೦ ಆಭರಣ ಸಾಲ ರೂ. ೭,೮೮,೦೦೦ ಗೊಬ್ಬರ ಸಾಲ ೧೩೧ ಸದಸ್ಯರಿಗೆ ರೂ. ೪೮,೦೧,೮೪೬ ಈ ಎಲ್ಲಾ ಸಾಲಗಳು ಸೇರಿ ಒಟ್ಟು ರೂ. ೧೦,೪೭,೦೩,೫೪೬ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ ಪಡೆದ ಎಲ್ಲಾ ಸಾಲಗಳು ಶೇ. ೧೦೦ರಷ್ಟು ಸದಸ್ಯರಿಂದ ಮರುಪಾವತಿಯಾಗಿರುತ್ತದೆ. ಇನ್ನು ಮುಂದಕ್ಕೂ ಸಹ ಸದಸ್ಯರು ಇದೇ ರೀತಿ ಸಂಘದ ಬೆಳವಣಿಗೆಗೆ ಸಾಲ ಮರು ಪಾವತಿಸಿ ಸಹಕರಿಸಬೇಕಾಗಿ ಮನವಿ ಮಾಡಿದರು.
ಸಂಘದಲ್ಲಿ ಒಟ್ಟು ೧೫೩೧ ಸದಸ್ಯರಿದ್ದು, ಪಾಲು ಬಂಡವಾಳ ರೂ. ೧,೪೪,೩೨,೦೦೦ ಇರುತ್ತದೆ. ಸಂಘದಲ್ಲಿ ಸಂಚಯ, ನಿರಖು ಠೇವಣಿ, ಪಿಗ್ಮಿ ಠೇವಣಿ ಮತ್ತು ಸಿಬ್ಬಂದಿ ಠೇವಣಿ, ಮರಣ ನಿಧಿ ಠೇವಣಿ ಸೇರಿ ಒಟ್ಟು ರೂ. ೬,೮೩,೨೪,೦೬೧ ಇರುತ್ತದೆ. ಸಂಘವು ೨೦೨೨-೨೩ ಸಾಲಿಗೆ ರೂ. ೬೭,೫೫,೫೫೮ ನಿವ್ವÀಳ ಲಾಭ ಗಳಿಸಿದ್ದು, ಸಂಘದ ವಾರ್ಷಿಕ ಮಹಾಸಭೆಯ ಒಪ್ಪಿಗೆ ಪಡೆದು ಸದಸ್ಯರ ಪಾಲು ಬಂಡವಾಳದ ಮೇಲೆ ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಶೇ ೨೫% ಡಿವಿಡೆಂಟ್ ಕೊಡಲು ತೀಮಾನಿಸಲಾಗಿದೆ. ಸರ್ಕಾರದಿಂದ ಲೀಸ್ ಆಧಾರದಲ್ಲಿ ಪಡೆದಿರುವ ೫೦ ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದು, ಇದರಿಂದ ಸಂಘಕ್ಕೆ ಉತ್ತಮ ಆದಾಯ ಬರುತ್ತಿದೆ. ಎಂದು ವಿವರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಸಿ. ಮುತ್ತಪ್ಪ, ನಿರ್ದೇಶಕರುಗಳಾದ ಕೆ.ಎಸ್. ಬೋಪಣ್ಣ, ಕೆ.ಎಸ್.ಭರತ್, ಸಿ.ಬಿ. ಬೆಳ್ಯಪ್ಪ, ಕೆ.ಆರ್. ಸುರೇಶ್, ಎಂ.ಕೆ. ಪ್ರಕಾಶ್, ಎಂ.ಕೆÀ.ರವಿ, ಎಂ.ಎನ್.ಅಶ್ವಿನಿ, ಕೆ.ಡಿ. ನಿರ್ಮಲ, ಪಿ.ಬಿ. ಲೀನಾ, ಹೆಚ್.ಕೆ.ಬೊಗ್ಗುರು, ಎಂ.ಎA. ಜಗನ್ನಾಥ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್.ಉಮೇಶ್ ಸಹಾಯಕ Àಕಾರ್ಯನಿರ್ವಹಣಾಧಿಕಾರಿ ಎಂ.ಎA. ರತ್ನಕುಮಾರ್, ಜಿಲ್ಲಾ ಬ್ಯಾಂಕ್ ನಿರೀಕ್ಷಕÀ ಜಮ್ಮಡ ಸುಬ್ಬಯ್ಯ, ಪೊನ್ನಂಪೇಟೆ ಶಾಖಾ ವ್ಯವಸ್ಥಾಪಕ ಕಂಜಿತAಡ ದೇವಯ್ಯ ಹಾಜರಿದ್ದರು.
ವೀರಾಜಪೇಟೆ: ನಂ.೨೭೧ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತ ವೀರಾಜಪೇಟೆ ಇದರ ಆಡಳಿತ ಮಂಡಳಿಗೆ ೧೩ ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಸಬಿತಾ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಆಶಾ ಚಿಣ್ಣಪ್ಪ, ಉದಿಯಂಡ ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಬಿ. ಯಶೋದ ಬಾಬು, ಹೆಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರಾದ ಆಶಾ ಪಿ. ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ವೀರಾಜಪೇಟೆ: ೨೦೨೨-೨೩ನೇ ಸಾಲಿನಲ್ಲಿ ಒಟ್ಟು ೫೫,೬೬೪ ಕೆ.ಜಿ ಜೇನು ಸಂಗ್ರಹಿಸಲಾಗಿದ್ದು ಈ ಪೈಕಿ ೫೩,೬೬೦ ಕೆ.ಜಿ ಜೇನನ್ನು ಸಂಸ್ಕೃರಿಸಿ ಮಾರಾಟ ಮಾಡಲಾಗಿದೆ ಎಂದು ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿಯಮಿತದ ಅಧ್ಯಕ್ಷ ಕಂಜಿತAಡ ಮಂದಣ್ಣ ಹೇಳಿದರು. ವ್ಯಾಪಾರ ಮಳಿಗೆ, ಮನೆ ಬಾಡಿಗೆ ೨೦,೮೯,೮೬೨.೦೦ ಜಮಾ ಆಗಿರುತ್ತದೆ. ಬ್ಯಾಂಕುಗಳಲ್ಲಿ ಹೂಡಿರುವ ಹೂಡಿಕೆಗಳಿಂದ ರೂ ೮,೭೪,೩೬೬.೦೦ ಬಡ್ಡಿ ಜಮಾ ಆಗಿದ್ದು ವರದಿ ಸಾಲಿನಲ್ಲಿ ಒಟ್ಟು ೧,೬೦,೮೮,೪೪೬ ರೂಗಳ ವ್ಯಾಪಾರ ವಹಿವಾಟು ನಡೆಸಲಾಗಿದ್ದು ೨೦೨೨-೨೩ ಸಾಲಿಗೆ ರೂ ೮,೬೫,೬೦೨ ನಿವ್ವಳ ಲಾಭಗಳಿಸಿದೆ ಎಂದು ಅವರು ಮಾಹಿತಿಯಿತ್ತರು.
ವಿರಾಜಪೇಟೆ ಮಹಿಳಾ ಸಮಾಜದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೨೧೧೦ ಸದಸ್ಯರಿದ್ದಾರೆ. ಜೇನು ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕನಿಷ್ಟ ಒಂದು ಜೇನು ಪೆಟ್ಟಿಗೆಯನ್ನು ಸಂಘದಿAದ ಖರೀದಿಸಿ ಜೇನು ಕೃಷಿಯನ್ನು ಕೈಗೊಳ್ಳುವವರಿಗೆ ಮಾತ್ರ ಸದಸ್ಯತ್ವವನ್ನು ನೀಡಲಾಗುತ್ತಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ೨೧ ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೧೩ ಸದಸ್ಯರು ಮೃತಪಟ್ಟಿದ್ದು ಸದಸ್ಯತ್ವದ ಪಾಲು ಮೊತ್ತವನ್ನು ಅವರ ನಾಮಿನಿಗೆ ನೀಡಲಾಗಿದೆ. . ಸಾಲಿನ ಅಂತ್ಯಕ್ಕೆ ಪಾಲು ಬಂಡವಳ ೧೩,೪೭,೫೨೯ ರೂ ಗಳಿದೆ. ಸಂಘದ ಮಲಬಾರ್ ರಸ್ತೆಯಲ್ಲಿರುವ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ವಿಚಾರದಲ್ಲಿ ಕಲಂ ೬೫ ಅಡಿಯಲ್ಲಿ ಇಲಾಖಾ ತನಿಖೆ ನಡೆಸಲು ಪತ್ರ ವ್ಯವಹಾರ ನಡೆಸಲಾಗಿದೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಚೇನಂಡ ಸುರೇಶ್ ನಾಣಯ್ಯ, ಕೋಡಿರ ಚಂಗಪ್ಪ, ಚೆರಿಯಪಂಡ ರಾಜ ನಂಜಪ್ಪ, ಕಾದಿರ ಪಳಂಗಪ್ಪ, ಬೊಳಿಯಾಡಿರ ದೇವಯ್ಯ, ಮೊಳ್ಳೆರ ಪೂಣಚ್ಚ, ಕಾಟುಮಣಿಯಂಡ ಉಮೇಶ್, ಕೊಲ್ಲಿರ ಗೋಪಿ ಚಿಣ್ಣಪ್ಪ, ಬಾಚಮಂಡ ಸುಬ್ರಮಣಿ, ಕುಡಿಯರ ತಮ್ಮಯ್ಯ, ಕೆ.ಬಿ ವಿಜಯನ್, ಹೆಚ್.ಪಿ ಉದಯ, ಅಮ್ಮಕಂಡ ದಮಯಂತಿ, ಅಪ್ಪಚ್ಚಿರ ನೀಲಮ್ಮ, ಹೆಚ್. ಆರ್ ರಾಮಕೃಷ್ಣ, ಕುಯ್ಯಮುಡಿ ತೀರ್ಥಕುಮಾರ್ ವ್ಯವಸ್ಥಾಪಕ ಕೆ.ವಿ ತಿಮ್ಮಯ್ಯ ಉಪಸ್ಥಿತರಿದ್ದರು.ಸೋಮವಾರಪೇಟೆ: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆಯನ್ನು ಶನಿವಾರಸಂತೆಯ ಮಾರ್ಕೆಟ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ತೆರೆಯಲಾಗಿದ್ದು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಸಹಕಾರ ಸಂಘಗಳು ರೈತರು ಮತ್ತು ವ್ಯಾಪಾರ ವಾಣಿಜ್ಯೋದ್ಯಮಕ್ಕೆ ಕೊಂಡಿಯಾಗಿ ಕೆಲಸ ಮಾಡುತ್ತಿವೆ. ಸಂಘದ ಸದಸ್ಯರು ತಮ್ಮ ವ್ಯವಹಾರಗಳನ್ನು ಸಂಘಗಳಲ್ಲಿ ಮಾಡಿದಲ್ಲಿ ಸದಸ್ಯರಿಗೆ ಇನ್ನಷ್ಟು ಸವಲತ್ತುಗಳನ್ನು ನೀಡಲು ಸಾಧ್ಯ ಎಂದರು.
ಮತ್ತೋರ್ವ ನಿರ್ದೇಶಕ ಬಿ.ಡಿ. ಮಂಜುನಾಥ್ ಮಾತನಾಡಿ, ೧೯೬೫ರಲ್ಲಿ ಸೋಮವಾರಪೇಟೆಯಲ್ಲಿ ಪ್ರಾರಂಭವಾದ ವಿವಿಧೋದ್ಧೇಶ ಸಹಕಾರ ಸಂಘ ಉತ್ತಮ ವ್ಯವಹಾರ ಮಾಡುವ ಮೂಲಕ ಲಾಭದಾಯಕವಾಗಿ ನಡೆಯುತ್ತಿದೆ. ೨೦೧೪ರಲ್ಲಿ ತಾಲೂಕಿನ ಸುಂಟಿಕೊಪ್ಪದಲ್ಲಿ ಮೊದಲ ಶಾಖೆಯನ್ನು ಪ್ರಾರಂಭಿಸಲಾಗಿದ್ದು, ಅದು ಲಾಭದಲ್ಲಿ ನಡೆಯುತ್ತಿದೆ. ಅದರಂತೆ ಎರಡನೇ ಶಾಖೆಯನ್ನು ಶನಿವಾರಸಂತೆಯಲ್ಲಿ ಪ್ರಾರಂಭಿಸಲಾಗಿದೆ. ಸ್ಥಳೀಯರು ಸಂಘದಲ್ಲಿ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ಸಂಘದ ಏಳಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಶ್ರೀಕಾಂತ್ ವಹಿಸಿದ್ದರು. ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಎಸ್.ಬಿ. ಭರತ್ಕುಮಾರ್, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಜಲಜಾ ಶೇಖರ್, ಸೋಮವಾರಪೇಟೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಸಂಘದ ಉಪಾಧ್ಯಕ್ಷ ಎನ್.ಟಿ. ಪರಮೇಶ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಭಾಗಮಂಡಲ: ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಯಮಿತ ಇದರ ಮುಂದಿನ ಐದು ವರ್ಷಗಳ ಅವಧಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ೯ ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದರು. ತಾ. ೨೩ರಂದು ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೊಸೂರು ಜೆ .ಸತೀಶ್ ಕುಮಾರ್ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಯಣೀರ ದಿನೇಶ್ ಆಯ್ಕೆಯಾಗಿದ್ದಾರೆವೀರಾಜಪೇಟೆ: ಬೈರಂಬಾಡ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿ. ಅಮ್ಮತ್ತಿ ಒಂಟಿಯAಗಡಿ ೨೦೨೨-೨೩ನೇ ಸಾಲಿನಲ್ಲಿ ಒಟ್ಟು ರೂ.೨೧.೫೪ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷÀ ಕರ್ನಲ್ ಕಂಡ್ರತAಡ ಸಿ ಸುಬ್ಬಯ್ಯ ಅವರು ತಿಳಿಸಿದರು.
ಸಂಘದ ನೂತನÀ ಸಭಾಂಗಣದಲ್ಲಿ ನಡೆದ ಸಂಘದ ೨೦೨೨-೨೩ನೇ ಸಾಲಿನ ೪೨ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಸದಸ್ಯರಿಗೆ ಶೇ.೧೪ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು. ಸಂಘದಲ್ಲಿ ಒಟ್ಟು ೧೪೪೨ ಸದಸ್ಯರಿದ್ದು, ಪಾಲುಬಂಡವಾಳ ರೂ.೭೬.೯೪ಲಕ್ಷ ಆಗಿದೆ. ಸಂಘದಲ್ಲಿ ಕೆಸಿಸಿ ಕೃಷಿ ಸಾಲ, ಸ್ವ-ಸಹಾಯ ಗುಂಪು ಸಾಲ, ವ್ಯಾಪಾರ ಸಾಲ, ಜಾಮೀನು ಸಾಲ, ಆಭರಣ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ನಿತ್ಯ ನಿಧಿ ಠೇವಣಿ ಸಾಲ, ನಿರಖು ಠೇವಣಿ ಸಾಲ ಹಾಗೂ ಸಂಬಳಾಧಾರಿತ ಸಾಲ ಸೇರಿ ಒಟ್ಟು ರೂ.೮೭೩.೪೫ರಷ್ಟು ಸಾಲ ವಿತರಿಸಲಾಗಿದೆ, ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ.೬೬೧೨.೫೬ ವ್ಯವಹಾರ ನಡೆಸಿದ್ದು ದುಡಿಯುವ ಬಂಡವಾಳವು ರೂ.೧೫೮೨.೭೨ ಆಗಿರುತ್ತದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ವಿ.ಆರ್. ಹರೀಶ್ ಅವರು ಸ್ವಾಗತ ಭಾಷಣ ಮಾಡಿದರು ಮತ್ತು ನಿರ್ದೇಶಕಿ ಪೊರ್ಕೊಂಡ ಬಿ. ಸವಿತಾ ಅವರು ವಂದನಾರ್ಪಣೆ ಮಾಡಿದರು. ನಿರ್ದೇಶಕರುಗಳಾದ ಬೊಪ್ಪಂಡ ಪಿ. ಗಣಪತಿ, ಅಪ್ಪಾರಂಡÀ ಎಂ.ಕಾರ್ಯಪ್ಪ, ಕೊಪ್ಪಡ ಎಂ. ಗಣೇಶ್, ಕೆಎಸ್. ದಿನೇಶ್, ಜಿಲ್ಲಂಡ ಸಿ. ಉತ್ತಪ್ಪ, ಪಿ.ಎ. ಮಂಜುನಾಥ, ವಿ. ಆರ್. ಪ್ರಭಾವತಿ, ಸಂಘದ ಮೇಲ್ವಿಚಾರಕ ಶರೀನ್ ಬಿ.ಎನ್. ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ ಭೀಮಯ್ಯ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಕೂಡಿಗೆ: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಆರ್. ಅರುಣ್ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು
ಸದಸ್ಯರಾದ ಮೋಹನ್, ಕಳಿಂಗ, ರಾಜು, ಕಿರಣ್, ಹಲವು ಸಲಹೆಗಳನ್ನು ನೀಡಿದರು. ಅಲ್ಲದೆ ೨೦೨೨-೨೩ ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮೇಲೆ ಸಂಬAಧಿಸಿದAತೆ ಅನೇಕ ಚರ್ಚೆಗಳು, ಸಾಲ ಸೌಲಭ್ಯಗಳು ಸೇರಿದಂತೆ ಸಂಘದ ಸದಸ್ಯರುಗಳಿಗೆ ಸಂಬAಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ಈ ಸಾಲಿನಲ್ಲಿ ಸಂಘವು ಕೈಗೊಳ್ಳಬೇಕಾಗುವ ವಿಷಯಗಳ ಬಗ್ಗೆ ಹಾಜರಿದ್ದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಲ್ಲದೆ ಕಳೆದ ಮೂರು ವರ್ಷಗಳ ಹಿಂದೆ ಕೈಗೊಳ್ಳಲಾದ ಕಟ್ಟಡ ಕಾಮಗಾರಿಯು ಪೂರ್ಣಗೊಂಡರೂ ಸಹ ಅದರ ಕ್ರಿಯಾ ಯೋಜನೆ , ಮತ್ತು ಅನುಮೋದನೆ, ಹಣ ಬಿಡುಗಡೆಗೆ ಸಂಬAಧಿಸಿದAತೆ ಅನೇಕ ಅಭಿವೃದ್ಧಿ ಗೆ ಪೂರಕವಾದ ಚರ್ಚೆಗಳು ನಡೆದವು.
ಮುಂದಿನ ದಿನಗಳಲ್ಲಿ ಸಮಗ್ರ ಗಿರಿಜನ ಉಪಯೋಜನೆ ಇಲಾಖೆಗೆ ಸಂಘದ ಜಾಗದಲ್ಲಿ ೫೦ ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮಹಾಸಭೆಯಲ್ಲಿ ಅನುಮೋದನೆ ಪಡೆಯಲಾಗಿ, ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿ ಪಥದತ್ತ ಸಾಗುವ ಚಿಂತನೆಗೆ ಅಡಳಿತ ಮಂಡಳಿಯು ಮುಂದಾಗಬೇಕೆAದು ಹಾಜರಿದ್ದ ಸದಸ್ಯರು ತಿಳಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ರಾವ್, ಮಾತನಾಡಿ, ಸಂಘವು ೨೦೨೧-೨೨ ನೇ ಸಾಲಿನಲ್ಲಿ ಕಿರು ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಗ್ರಾಹಕ ಶಾಖೆಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸಿ ಈ ಸಾಲಿನಲ್ಲಿ ೧೫ಲಕ್ಷ, ೧೬ ಸಾವಿರದ ೭೮೫ ರೂ. ಗಳ ನಿವ್ವಳ ಲಾಭವನ್ನು ಗಳಿಸಿದೆ. ಇದರಲ್ಲಿ ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ಕಿರು ಅರಣ್ಯ ಉತ್ಪನ್ನಗಳಾದ ಸೀಗೆಕಾಯಿ, ಮರದಪಾಚಿ, ಜೇನು ಸಂಗ್ರಹಣೆಗೆ ಹೆಚ್ಚು ಒತ್ತು ನೀಡಲಾಗುತ್ರಿದೆ, ಅಲ್ಲದೆ ಸಂಘದ ಸದಸ್ಯರ ಕುಟುಂಬದವರಿಗೆ ಯಶಸ್ವಿನಿ ಯೋಜನೆಯನ್ನು ಸಹಕಾರ ಇಲಾಖೆಯ ಮೂಲಕ ನೀಡುವ ಬಗ್ಗೆ ತಿಳಿಸಿದರು. ಹುದುಗೂರು ಮತ್ತು ಅಡಿನಾಡೂರು ಗ್ರಾಮದಲ್ಲಿ ಸ್ವಂತ ನ್ಯಾಯಬೆಲೆ ಅಂಗಡಿ ಕಟ್ಟಡ ಹೊಂದಲು, ಅದಕ್ಕೆ ಸಂಬAಧಿಸಿದ ಯೋಜನೆಗಳನ್ನು ಕೈಗೊಳ್ಳಲಾಗುವ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಈ ಸಾಲಿನಲ್ಲಿ ಉತ್ತಮ ಲಾಭಾಂಶ ಬಂದಿದ್ದು, ಇದೇ ಮಾದರಿಯಲ್ಲಿ ಸದಸ್ಯರ ಸಲಹೆ ಸಹಕಾರದೊಂದಿಗೆ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು. ಸಂಘದ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಜೆ. ಹನಿಕುಮಾರ್ ವಾಚಿಸಿದರು.
ಈ ಸಂದರ್ಭ ಉಪಾಧ್ಯಕ್ಷ.ಬಿ, ಎನ್, ಮನು, ನಿರ್ದೇಶಕರಾದ ಆರ್.ಕೆ. ಚಂದ್ರು, ಸಿ.ಕೆ. ಉದಯಕುಮಾರ್, ಬಿ.ಎಂ. ಯಶೋಧರ, ಬಿ.ಆರ್. ಸುರೇಶ್, ಅಣ್ಣಯ್ಯ, ಎಸ್.ಆರ್. ಕಮಲ, ಕಾವೇರಿ, ಕರ್ನಾಟಕ ರಾಜ್ಯ ಲ್ಯಾಂಪ್ ಮಹಾಮಂಡಳದ ಪ್ರತಿನಿಧಿ ಮಿಟ್ಟು ಚಂಗಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಬಿ.ಜಿ. ಹನಿಕುಮಾರ್, ಲೆಕ್ಕಣಿಗ ಪಿ.ಎ ಯಶವಂತ ಸೇರಿದಂತೆ ನೂರಾರು ಸದಸ್ಯರು ಹಾಜರಿದ್ದರು. ಕಾರ್ಯಕ್ರಮವು ಎಪಿಸಿಎಂ�