ಕಣಿವೆ, ಸೆ. ೨೫: ಕುಶಾಲನಗರ ತಾಲೂಕು ಪಂಚಾಯಿತಿಯ ಮುಳ್ಳುಸೋಗೆಯಲ್ಲಿನ ನೂತನ ಕಾರ್ಯಾಲಯದ ಆವರಣ ನೀರಿಲ್ಲದೇ ಕಳೆದ ಹಲವಾರು ದಿನಗಳಿಂದ ಸಮಸ್ಯೆಯಾಗಿತ್ತು. ಇದರಿಂದ ಕಚೇರಿಯ ಪ್ರಾಂಗಣದಲ್ಲಿ ಅಳವಡಿಸಿದ್ದ ಹಸಿರು ಉದ್ಯಾನವನ ಒಣಗುತ್ತಿತ್ತು. ಕಚೇರಿಯ ಶೌಚಾಲಯಗಳಿಗೂ ನೀರಿಲ್ಲದೇ ಸಿಬ್ಬಂದಿಗಳು ಪರದಾಡುವಂತಾಗಿತ್ತು. ಈ ವಿಚಾರವನ್ನು ‘ಶಕ್ತಿ’ ಶನಿವಾರ ಪ್ರಕಟಿಸಿತ್ತು. ಈ ಮೂಲಕ ಸಂಬAಧಿಸಿದ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಿತ್ತು.

ಬಳಿಕ ಮಂಗಳವಾರ ಬೆಳಿಗ್ಗೆ ಮುಳ್ಳುಸೋಗೆಯ ತಾಪಂ ಕಾರ್ಯಾಲಯದ ಆವರಣಕ್ಕೆ ಧಾವಿಸಿದ ಕುಶಾಲನಗರದ ಪುರಸಭೆಯ ಪೌರ ಸಿಬ್ಬಂದಿಗಳು ಹಾಳಾಗಿದ್ದ ಹಳೆಯ ನೀರೆತ್ತುವ ಯಂತ್ರವನ್ನು ತೆರವುಗೊಳಿಸಿ ಹೊಸ ಯಂತ್ರವನ್ನು ನೀರಿನ ಟ್ಯಾಂಕಿಗೆ ಅಳವಡಿಸಿ ಅದಕ್ಕೆ ಪೈಪ್ ಜೋಡಿಸಿ ಪಂಚಾಯಿತಿ ಕಚೆೆÃರಿಯ ಒಳಕ್ಕೆ ಹಾಗೂ ಉದ್ಯಾನದೊಳಕ್ಕೆ ನೀರು ಬರುವ ವ್ಯವಸ್ಥೆ ಕಲ್ಪಿಸಿದ್ದಾರೆ.